Home ಜಿಲ್ಲೆ ಅಂಚೆ ನೌಕರರ ರಾಜ್ಯ ಮಟ್ಟದ ಅಧಿವೇಶನ: ವಿಜಯಪುರದ ಬಸವರಾಜ್ ಹೂಗಾರ ರಾಜ್ಯ ಲೆಕ್ಕ ಪರಿಶೋಧಕರಾಗಿ ಅವಿರೋಧ...

ಅಂಚೆ ನೌಕರರ ರಾಜ್ಯ ಮಟ್ಟದ ಅಧಿವೇಶನ: ವಿಜಯಪುರದ ಬಸವರಾಜ್ ಹೂಗಾರ ರಾಜ್ಯ ಲೆಕ್ಕ ಪರಿಶೋಧಕರಾಗಿ ಅವಿರೋಧ ಆಯ್ಕೆ

ವಿಜಯಪುರ, ಜು. 8: ಅಖಿಲ ಭಾರತ ಅಂಚೆ ನೌಕರರ ಸಂಘ, ಪೆÇೀಸ್ಟ್‍ಮನ್ ಮತ್ತು ಎಂ.ಟಿ.ಎಸ್./ಒಖಿಎಸ್ ಕರ್ನಾಟಕ ವಲಯದ 33ನೇ ವಲಯ ಮಟ್ಟದ ಅಧಿವೇಶನವು ಜುಲೈ 4ರಿಂದ 7ರವರೆಗೆ ಬೆಂಗಳೂರಿನ ವಿಧಾನಸೌಧ ಎದುರಿನ ಎನ್‍ಜಿಒ ಕಚೇರಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಅಧಿವೇಶನದಲ್ಲಿ 2026ರಿಂದ 2028ರವರೆಗಿನ ಅವಧಿಗೆ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಚುನಾವಣೆಯಲ್ಲಿ ಕಾಮ್ರೇಡ್ ರುದ್ರೇಶ್ ಕೆ.ಎಸ್. ಅವರು ಸರ್ಕಲ್ ಕಾರ್ಯದರ್ಶಿಯಾಗಿ, ರವಿ ಪಾಟೀಲ ಅವರು ಅಧ್ಯಕ್ಷರಾಗಿ ಹಾಗೂ ಬಸವರಾಜ್ ಎಲ್. ಹೂಗಾರ, ಒಖಿಎಸ್, ಹೆಡ್ ಪೆÇೀಸ್ಟ್ ಆಫೀಸ್, ವಿಜಯಪುರ ಅವರು ರಾಜ್ಯ ಮಟ್ಟದ ಲೆಕ್ಕ ಪರಿಶೋಧಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಅಂಚೆ ಇಲಾಖೆಯ ಸಿಬ್ಬಂದಿ ಹಾಗೂ ಸಂಘದ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಅವರ ನೇತೃತ್ವದಲ್ಲಿ ನೌಕರರ ಹಿತಾಸಕ್ತಿಗೆ ಸಂಬಂಧಿಸಿದ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಸಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವಿಜಯಪುರ ಅಂಚೆ ಇಲಾಖೆಯ ಬಿ.ಎಂ. ಇವಣಗಿ ಹಾಗೂ ಕೆ.ಎಸ್. ಓಂಕಾರ್ ಸೇರಿದಂತೆ ಜಿಲ್ಲೆಯ ಅಂಚೆ ನೌಕರರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.