
ಬೆಂಗಳೂರು, ಅ. ೬: “ರಾಜ್ಯದ ಪೊಲೀಸ್ ಠಾಣೆಗಳೆಲ್ಲವೂ ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ” ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಆರೋಪಿಸಿದರು.
ರಾಜ್ಯಪಾಲರ ಭೇಟಿ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ನಿನ್ನೆ ಚುನಾವಣಾಧಿಕಾರಿ ಭೇಟಿಯಾಗಿ ಫಾರಂ ೭ಬಿ ಬಗ್ಗೆ ಸ್ಪಷ್ಟನೆ ಕೇಳಿದ್ದೆವು. ’ನೀವು ಯಾರಿಗಾದರೂ ಕೇಸ್ ಹಾಕಲು ಹೇಳಿದ್ದೀರಾ’ ಎಂದು ಪ್ರಶ್ನಿಸಿದಾಗ, ’ನಾವು ಯಾರ ವಿರುದ್ಧವೂ ದೂರು ನೀಡಿಲ್ಲ’ ಎಂದು ಅವರು ಹೇಳಿದ್ದಾರೆ. ಆದರೂ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಸೇರಿದಂತೆ ನಮ್ಮ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಲಾಗುತ್ತಿದೆ. ಇದು ಗೂಂಡಾ ಸರ್ಕಾರದ ಕೆಲಸ. ಡಿ.ಕೆ. ಶಿವಕುಮಾರ್ ಮತ್ತು ಬಿ.ಕೆ. ಹರಿಪ್ರಸಾದ್ ಅವರ ಹಿಂದಿನ ದಿನಗಳನ್ನು ನೆನಪಿಸುತ್ತಿದೆ” ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
“ಕಾಂಗ್ರೆಸ್ಗೆ ಚುನಾವಣಾ ಭಯ ಶುರುವಾಗಿದೆ. ಅದಕ್ಕಾಗಿಯೇ ಕಾರ್ಯಕರ್ತರಿಗೆ ಕಿರುಕುಳ ನೀಡುವ ರಾಜಕೀಯ ಆರಂಭಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ನಾವು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಅವರು ಮುಖ್ಯಕಾರ್ಯದರ್ಶಿಯೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ” ಎಂದು ಹೇಳಿದರು.
ಜನದ್ರೋಹಿ ಸರ್ಕಾರ ಎಂದ ಅಶೋಕ್
“ಹಾಲಿನ ದರ ಮತ್ತು ಬಸ್ ಟಿಕೆಟ್ ದರ ಏರಿಕೆ ವಿಚಾರದಲ್ಲಿ ಸರ್ಕಾರ ಜನದ್ರೋಹಿಯಾಗಿ ವರ್ತಿಸುತ್ತಿದೆ. ’ನನಗೂ ಫ್ರೀ, ನಿಮಗೂ ಫ್ರೀ’ ಎಂದು ಘೋಷಿಸಿದವರು ಈಗ ದರ ಏರಿಕೆ ಮಾಡುತ್ತಿದ್ದಾರೆ. ಇದು ಲೂಟಿಕೋರ ಸರ್ಕಾರ. ಮಂತ್ರಿಗಳು ಮತ್ತು ಸಿಎಂ ಹೋಗುವ ಕಡೆಗಳಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಡಿಸಿ ಕಚೇರಿಗಳೇ ಹಣ ವಸೂಲಿಗೆ ಇಳಿದಿವೆ” ಎಂದು ಆರೋಪಿಸಿದರು ದರ ಎರಿಸುವ ಅಗತ್ಯವಾದರೂ ಏನಿದೆ ಸರ್ಕಾರಕ್ಕೆ
ಈ ಸರ್ಕಾರ ಗ್ಯಾರಂಟಿಗಳನ್ನು ಉಚಿತ ಕೊಡ್ತೀವಿ ಅಂದಿದ್ರು
ಈಗ ಎಲ್ಲದರ ದರ ಏರಿಸುವ ನೀಚ ಕೆಲಸ ಮಾಡ್ತಿದೆ
ತೆರಿಗೆ ಏರಿಕೆ ಮಾಡ್ತಿರೋದು ಸರ್ಕಾರ ಪಾಪರ್ ಆಗಿದೆ ಅಂತ
ಸರ್ಕಾರ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ
ಈ ಸರ್ಕಾರ ತೊಲಗಿದರೆ ಮಾತ್ರ ಜನಕ್ಕೆ ನೆಮ್ಮದಿ
ಸರ್ಕಾರ ಜನ ಸರಿಯಾದ ಬುದ್ಧಿ ಕಲಿಸ್ತಾರೆ ಎಂದರು
























