Home ಜಿಲ್ಲೆ ಕಲಬುರಗಿ ಬಿಸಿಯೂಟ ನೌಕರರ ಗೌರವಧನ ಮಂಜೂರು ಮಾಡಲು ಮನವಿ

ಬಿಸಿಯೂಟ ನೌಕರರ ಗೌರವಧನ ಮಂಜೂರು ಮಾಡಲು ಮನವಿ

ಕಲಬುರಗಿ,ಅ.6-ಕಳೆದ ಮೂರು ತಿಂಗಳಿಂದ ಬಿಸಿಯೂಟ ನೌಕರರ ಗೌರವಧನ ಮಂಜೂರು ಮಾಡುವುದಿಲ್ಲ. ಆದಕಾರಣ ಬಿಸಿಯೂಟ ನೌಕರರ ಗೌರವಧನ ಮಂಜೂರು ಮಾಡುವಂತೆ ಸೋಮವಾರ ಕರ್ನಾಟಕ ಸಮತಾ ಸೈನಿಕದಳದ ರಾಜ್ಯ ಉಪಾಧ್ಯಕ್ಷರಾದ ಸಂಜೀವ ಟಿ ಮಾಲೆಯವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಉದ್ದಾ, ಬಿಸಿ ಊಟ ನೌಕರರಾದ ಮಲ್ಲಮ್ಮ ಜಗತಿ, ಪದ್ಮಾ ಅಟ್ಟೂರ್, ರಬಿಯ ಬೇಗ, ಸರುಬಾಯಿ ಬಸಮ್ಮ, ಕಮಲಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.