Home ಜಿಲ್ಲೆ ಕಲಬುರಗಿ ವ್ಯದ್ಯಕೀಯ ಪಿಜಿ- ನೀಟ್ ಪರೀಕ್ಷೆ: 9ನೇ ರ್ಯಾಂಕ್ ಪಡೆದ ದರ್ಶನ ಶಶಿಧರ ಮರಡಿ ಅವರಿಗೆ ಗೃಹ...

ವ್ಯದ್ಯಕೀಯ ಪಿಜಿ- ನೀಟ್ ಪರೀಕ್ಷೆ: 9ನೇ ರ್ಯಾಂಕ್ ಪಡೆದ ದರ್ಶನ ಶಶಿಧರ ಮರಡಿ ಅವರಿಗೆ ಗೃಹ ಸನ್ಮಾನ

ಕಲಬುರಗಿ: ಶರಣಬಸವೇಶ್ವರ್ ರೆಸಿಡೆನ್ಸಿಯಲ್ ಕಾಲೇಜಿನ ವಿದ್ಯಾರ್ಥಿ, ದರ್ಶನ ಶಶಿದರ್ ಮರಡಿ ವೈದ್ಯಕೀಯ, ಪಿ,ಜಿ-ನೀಟ್ ರಾಷ್ಟ್ರಿಯ ಮಟ್ಟದ ಪರೀಕ್ಷೆಯಲ್ಲಿ 9 ನೆ ರ್ಯಾಂಕ್ ( ಶ್ರೇಣಿ) ಪಡೆದಿದ್ದಕ್ಕಾಗಿ ಆತನ ಮಿತ್ರ ವಿಗ್ನೇಶ್. ಕೆ. ಮಾಲಿ ಪಾಟೀಲ ನೆತೃತ್ವದ ಗೆಳೆಯರ ಬಳಗದಿಂದ ಗೃಹ ಸನ್ಮಾನದ ಮೂಲಕ ಸಾಧಕ ವಿದ್ಯಾರ್ಥಿ ಶಶಿದರ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಶರಣ ಬಸವೇಶ್ವರ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು, ದರ್ಶನ ಅವರಿಗೆ ಶಾಲು ಹೊದಿಸಿ ಮೈಸೂರ್ ಪೆಠಾ ತೊಡಿಸಿ ಹೂ ಮಾಲೆಯನ್ನು ಹಾಕಿ ಸನ್ಮಾನಿಸಿದರು.
ಇಲ್ಲಿನ ನಮ್ಮ ಎಸ್, ಬಿ,ಆರ್, ಕಾಲೇಜು ಹಾಗೂ ಕಲಬುರ್ಗಿಯ ಹೆಸರು ರಾಷ್ಟ್ರ ಮಟ್ಟದಲ್ಲಿ ತಂದ್ದಿದ್ದಾನೆ ಮುಂದಿನ ಭವಿಷ್ಯ ಉಜ್ವಲ ವಾಗಲಿ ಎಂದು ಶುಭಾಶಯಗಳು ಕೋರಿದರು,
ಈ ಸಂಧರ್ಭದಲ್ಲಿ ಶ್ರೀಶೈಲ್ ಹೋಗಡೆ, ಡಾ : ಆನಂದ ಕಣಕಿ, ನಾಗರಾಜ ಪಾಟೀಲ, ಹಾಗೂ ಮಾಲಿ ಪಾಟೀಲ ಕುಟುಂಬದ ಸದಸ್ಯರು ಉಪಸ್ಥಿತ ರಿದ್ದರು .