
ವಿಜಯಪುರ, ಜೂ. 11:ಪೆÇಲೀಸ ಇಲಾಖೆಯು ದಿನನಿತ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು, ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಶಾಂತಿಯುತ ವಾತಾವರಣ ನಿರ್ಮಿಸುವ ಉದ್ದೇಶದಿಂದ ಠಾಣೆಗಳ ವ್ಯಾಪ್ತಿಯಲ್ಲಿ ಕಂಡು ಬರುವ ರೌಡಿ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಿ, ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಸರ್ಕಾರವು ರೌಡಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಕ್ರಮದ ಭಾಗವಾಗಿ ಠಾಣೆ/ ವೃತ್ತ ಮಟ್ಟದಲ್ಲಿ ‘ರೌಡಿ ನಿಗ್ರಹ ದಳ’ (Anti Rowdy Squad) ರಚಿಸಿ, ಕ್ರಮ ವಹಿಸಲು ಸೂಚಿಸಿದ್ದು, ಅದರಂತೆ ಜಿಲ್ಲೆಯ ಎಲ್ಲ ಠಾಣೆ/ವೃತ್ತ ಮಟ್ಟದಲ್ಲಿ ‘ರೌಡಿ ನಿಗ್ರಹ ದಳ’ (Anti Rowdy Squad) ರಚಿಸಿ, ಕ್ರಮ ವಹಿಸಲಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕ್ರಮದ ಭಾಗವಾಗಿ ದಿನಾಂಕ 10 ರಂದು ಜಿಲ್ಲೆಯಾದ್ಯಂತ ಚಟುವಟಿಕೆವುಳ್ಳ ರೌಡಿಶೀಟ್‍ದಾರರ ಮನೆಗಳಿಗೆ ವಿಶೇಷ ಪರಿಶೀಲನಾ ಭೇಟಿ (Special Drive) ನ್ನು ಜಿಲ್ಲೆಯ ಒಟ್ಟು 24 ಕಾನೂನು ಸುವ್ಯವಸ್ಥೆಯ ಪೆÇಲೀಸ್ ಠಾಣೆಯಲ್ಲಿ ಕೈಕೊಳ್ಳಲಾಗಿರುತ್ತದೆ. ಪರಿಶೀಲನೆಯ ಕಾಲಕ್ಕೆ ರೌಡಿದಾರರ ಪ್ರಸ್ತುತ ಚಟುವಟಿಕೆಗಳು ಪರಿಶೀಲನೆ ಕೈಕೊಂಡಿದ್ದು, ವಿವರ ಕೆಳಗಿನಂತಿದೆ ಎಂದು ಹೇಳಿದ್ದಾರೆ.
ಒಟ್ಟು ಪರಿಶೀಲನೆ ಕೈಕೊಂಡ ರೌಡಿದಾರರ ಸಂಖ್ಯೆ 161 ಆಗಿದ್ದು, ಮಾರಾಕಾಸ್ತ್ರ ಕಂಡು ಬಂದ ಒಟ್ಟು ರೌಡಿದಾರರ ಸಂಖ್ಯೆ 3 ವಿವರಣೆ ನೀಡಲಾಗದಂತಹ ಹಾಗೂ ಅಗತ್ಯ ದಾಖಲಾತಿಗಳು ಇಲ್ಲದೇ ಬಳಸುತ್ತಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಕಂಡು ಬಂದ ರೌಡಿಶೀಟ್‍ದಾರರ ಸಂಖ್ಯೆ 11 ಇದೆ ಎಂದು ತಿಳಿಸಿದ್ದಾರೆ.
ಬಾಕಿ ಇರುವ ಓಃWs ರೌಡಿದಾರರ ಸಂಖ್ಯೆ 6, Bond Over ಉಲ್ಲಂಘಿಸಿದ ರೌಡಿದಾರರ ಸಂಖ್ಯೆ 1, ರೌಡಿಶೀಟ್‍ದಾರರ ಆಸ್ತಿ ಮುಟ್ಟುಗೋಲು/ವಶಪಡಿಸಿಕೊಳ್ಳುವಿಕೆ (Forfeiture) 1, ರೌಡಿಶೀಟ್‍ದಾರರು ಪ್ರಸ್ತುತ ಉದ್ಯೋಗ/ಕೆಲಸಗಳಲ್ಲಿ ತೊಡಗಿರುವವರ ವಿವರ 143 ಎಂದು ಗೊತ್ತಾಗಿದೆ ಎಂದು ಅವರು ವಿವರಿಸಿದ್ದಾರೆ.
ರೌಡಿಶೀಟ್‍ದಾರರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಕೊಂಡಿದ್ದು, ಪರಿಶೀಲನೆ ಕಾಲಕ್ಕೆ ಕಂಡು ಬಂದ ಅನಧಿಕೃತ ವಸ್ತು, ದಾಖಲೆ ಇಲ್ಲದ ವಾಹನಗಳ ಬಗ್ಗೆ ನಿಯಮಾನುಸಾರವಾಗಿ ಮುಂದಿನ ಕಾನೂನು ಪ್ರಕ್ರಿಯೆ ಕೈಕೊಳ್ಳಲಾಗಿದೆ ಎಂದು ಎಸ್ಪಿ ನಿಂಬರಗಿ ತಿಳಿಸಿದ್ದಾರೆ.
























