Home ಜಿಲ್ಲೆ ಕಲಬುರಗಿ ಫೋಟೋಗ್ರಾಫರ್ ಮನೆಗೆ ಕನ್ನ: 30 ಗ್ರಾಂ.ಚಿನ್ನಾಭರಣ, 40 ಸಾವಿರ ನಗದು ಕಳವು

ಫೋಟೋಗ್ರಾಫರ್ ಮನೆಗೆ ಕನ್ನ: 30 ಗ್ರಾಂ.ಚಿನ್ನಾಭರಣ, 40 ಸಾವಿರ ನಗದು ಕಳವು

ಕಲಬುರಗಿ,ಅ.3-ಫೋಟೋಗ್ರಾಫರ್ ಒಬ್ಬರ ಮನೆಗೆ ಕನ್ನ ಹಾಕಿರುವ ಕಳ್ಳರು ಮನೆಯಲ್ಲಿದ್ದ 30 ಗ್ರಾಂ.ಬಂಗಾರದ ಆಭರಣ, 40 ಸಾವಿರ ರೂ.ನಗದು ಹಣ ಸೇರಿ 2.20 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಮೊಹ್ಮದ್ ಇಮ್ರಾನ್ ಎಂಬುವವರ ಹೀರಾಪುರ ಹೊಸ ಬಡಾವಣೆಯಲ್ಲಿರುವ ಮನೆ ಬೀಗ ಮುರಿದು ಕಳ್ಳರು 60 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ನೆಕ್ಲೆಸ್, 30 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ನೆಕ್ಲೆಸ್, 30 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 30 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಮಂಗಳಸೂತ್ರ, 12 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಮಂಗಳಸೂತ್ರ, 12 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಉಂಗುರ, 6 ಸಾವಿರ ರೂ.ಮೌಲ್ಯದ 1 ಗ್ರಾಂ.ಬಂಗಾರದ ಉಂಗುರ ಮತ್ತು 40 ಸಾವಿರ ರೂ.ನಗದು ಸೇರಿ 2.20 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಇವರು ಸೆ.28 ರಂದು ರಾತ್ರಿ 8.30ರ ಸುಮಾರಿಗೆ ತರಕಾರಿ ತರಲೆಂದು ಪತ್ನಿಯೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.