Home ಜಿಲ್ಲೆ ಪಲ್ಲಕ್ಕಿ ದಿಂಡಿ ಮಹೋತ್ಸವ

ಪಲ್ಲಕ್ಕಿ ದಿಂಡಿ ಮಹೋತ್ಸವ

ನವಲಗುಂದ,ಆ೧೨: ಪಟ್ಟಣದಲ್ಲಿ ಆಷಾಡ ಮಾಸದ ಪ್ರಯುಕ್ತ ಗುರು ನಾಮದೇವ ಮಹಾರಾಜರ ಪುಣ್ಯತಿಥಿ ಅಂಗವಾಗಿ ಪಲ್ಲಕ್ಕಿ ದಿಂಡಿ ಮಹೋತ್ಸವ ಮೆರವಣಿಗೆ ಭಕ್ತ ಸಮೂಹದ ನಡುವೆ ವಿಜೃಂಭಣೆಯಿAದ ಜರುಗಿತು.

ಪಟ್ಟಣದ ವಿಠ್ಠಲ ರುಕ್ಮಿಣಿ ದೇವಸ್ಥಾನದ ಆವರಣದಿಂದ ಆರಂಭವಾದ ಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಲಾಲಗುಡಿ ಮಾರುತಿ ದೇವಸ್ಥಾನದ ವರೆಗೆಸಾಗಿತು

ದೇವಸ್ಥಾನದಲ್ಲಿ ದಿಂಡಿ ಮಹೋತ್ಸವದಲ್ಲಿ ಕೀರ್ತನೆ ಹಾಗೂ ಪ್ರವಚನ ಸೇವೆ ಸಲ್ಲಿಸಿದ ಪಂಡರಪುರದ ಹರಿಪ್ರಸಾದ ಮಹಾರಾಜರಿಗೆ ಲಾಲಗಡಿ ಮಾರುತಿ ದೇವಸ್ಥಾನದ ಸಮಿತಿಯವರು ಸನ್ಮಾನಿಸಿ ಗೌರವಿಸಿದರು.

ಮಂಜುನಾಥ ಆರೇರ, ಪ್ರಭು ಇಬ್ರಾಹಿಂಪೂರ, ಸಚೀನ ಕೇರಿಮಠ, ಮಲ್ಲಿಕಾರ್ಜುನ ಮುಪ್ಪಯ್ಯನವರ, ಶಿವಾಜಿ ಪವಾರ, ನವೀನ ಹರಿಹರ, ಶಿವಾಜಿ ಕಲಾಲ, ರಾಯನಗೌಡ ಪಾಟೀಲ, ಶಂಕರಪ್ಪ ತೋಟದ, ಮಾರುತಿ ವಾಲೀಕಾರ, ಮಂಜುನಾಥ ಜಾಧವ, ಅಪ್ಪಣ್ಣ ಹಳ್ಳದ, ಶಂಕ್ರು ಹುಣಶೀಮರದ ಹಾಗೂ ಸಮಿತಿ ಸದಸ್ಯರು, ಸದ್ಭಕ್ತರು ಪಾಲ್ಗೊಂಡಿದ್ದರು.