Home ಸುದ್ದಿ ಅಂತರಾಷ್ಟ್ರೀಯ 7 ಡಾಗ್ಸ್’ ಟ್ರೇಲರ್ ಬಿಡುಗಡೆ: ಆಗಸ್ಟ್ 21ಕ್ಕೆ ಭಾರತದಲ್ಲಿ ರಿಲೀಸ್

7 ಡಾಗ್ಸ್’ ಟ್ರೇಲರ್ ಬಿಡುಗಡೆ: ಆಗಸ್ಟ್ 21ಕ್ಕೆ ಭಾರತದಲ್ಲಿ ರಿಲೀಸ್

ನ್ಯೂಯಾಕ್ ್ಆ.11- ಬಾಲಿವುಡ್ ಸೂಪರ್‍ಸ್ಟಾರ್‍ಗಳಾದ ಸಲ್ಮಾನ್ ಖಾನ್, ಸಂಜಯ್ ದತ್ ಮತ್ತು ಹಾಲಿವುಡ್ ನಟಿ ಮೋನಿಕಾ ಬೆಲ್ಲುಸಿ ಅಭಿನಯದ ಬಹುನಿರೀಕ್ಷಿತ ಅಂತರರಾಷ್ಟ್ರೀಯ ಆಕ್ಷನ್ ಥ್ರಿಲ್ಲರ್ ಚಿತ್ರ 7 ಡಾಗ್ಸ್ ಹೊಸ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರವು ಭಾರತದಲ್ಲಿ ಆಗಸ್ಟ್ 21 ರಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಮುಖ ತಾರಾಗಣ ಮತ್ತು ಪಾತ್ರವರ್ಗ
ಈ ಚಿತ್ರವು ಭಾರತ, ಈಜಿಪ್ಟ್, ಯುರೋಪ್, ಹಾಲಿವುಡ್ ಮತ್ತು ಮಧ್ಯಪ್ರಾಚ್ಯದ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ತಂದು ನಿಲ್ಲಿಸಿದೆ:
ಮುಖ್ಯ ಪಾತ್ರಗಳಲ್ಲಿ: ಈಜಿಪ್ಟಿನ ಸೂಪರ್‍ಸ್ಟಾರ್‍ಗಳಾದ ಅಹ್ಮದ್ ಎಜ್ ಮತ್ತು ಕರೀಮ್ ಅಬ್ದೆಲ್ ಅಜೀಜ್ ನಟಿಸಿದರೆ ವಿಶೇಷ ಬಾಲಿವುಡ್‍ನ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್. ಸಾಜನ್, ಚಲ್ ಮೇರೆ ಭಾಯ್ ಚಿತ್ರಗಳ ನಂತರ ಇಬ್ಬರೂ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇಟಾಲಿಯನ್ ನಟಿ ಮೋನಿಕಾ ಜಿಯಾನ್‍ಕಾರ್ಲೊ ಎಸ್ಪೋಸಿಟೊ ತಾರಾ ಎಮಾದ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಥಾಹಂದರ ಚಿತ್ರದ ಕಥೆಯು ಇಂಟರ್‍ಪೆÇೀಲ್ ಅಧಿಕಾರಿ ಖಾಲಿದ್ ಅಲ್-ಅಜ್ಜಾಜಿ ಸುತ್ತ ಸುತ್ತುತ್ತದೆ. ಆತ ‘7 ಡಾಗ್ಸ್’ ಎಂಬ ಅಪಾಯಕಾರಿ ಅಂತರರಾಷ್ಟ್ರೀಯ ಅಪರಾಧ ಸಿಂಡಿಕೇಟ್‍ನ ಪ್ರಮುಖ ವ್ಯಕ್ತಿ ಘಾಲಿ ಅಬು ದಾವೂದ್‍ನನ್ನು ಬಂಧಿಸುತ್ತಾನೆ. ಆದರೆ ಒಂದು ವರ್ಷದ ನಂತರ, ಮಧ್ಯಪ್ರಾಚ್ಯದಲ್ಲಿ ‘ಪಿಂಕ್ ಲೇಡಿ’ ಎಂಬ ಹೊಸ ಮಾರಕ ಮಾದಕವಸ್ತುವಿನ ದಂಧೆ ತಲೆಎತ್ತಿದಾಗ, ಸಿಂಡಿಕೇಟ್‍ನ ಒಳಗಿನ ರಹಸ್ಯಗಳನ್ನು ಬಲ್ಲ ಏಕೈಕ ವ್ಯಕ್ತಿಯೊಂದಿಗೆ ಕೈಜೋಡಿಸಿ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆ ಖಾಲಿದ್‍ನಿಗೆ ಎದುರಾಗುತ್ತದೆ.

ನಿರ್ಮಾಣ ಮತ್ತು ತಾಂತ್ರಿಕ ತಂಡ
ನಿರ್ದೇಶನ: ಬ್ಯಾಡ್ ಬಾಯ್ಸ್ ಫಾರ್ ಮತ್ತು ಬ್ಯಾಡ್ ಬಾಯ್ಸ್: ರೈಡ್ ಆರ್ ಡೈ ಖ್ಯಾತಿಯ ಬೆಲ್ಜಿಯನ್ ನಿರ್ದೇಶಕ ಜೋಡಿ ಆದಿಲ್ ಎಲ್ ಅರ್ಬಿ ಮತ್ತು ಬಿಲಾಲ್ ಫಲ್ಲಾ .
ಪರಿಕಲ್ಪನೆ ಹಾಗೂ ಬರಹ: ಟರ್ಕಿ ಅಲಲ್ಶಿಖ್
ನಿರ್ಮಾಣ ಸಂಸ್ಥೆ: ಜನರಲ್ ಎಂಟರ್‍ಟೈನ್‍ಮೆಂಟ್ ಅಥಾರಿಟಿ ಮತ್ತು ರಿಯಾದ್ ಸೀಸನ್ ಸಹಯೋಗದೊಂದಿಗೆ ಸೆಲಾ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ.

ಗಿನ್ನೆಸ್ ವಿಶ್ವ ದಾಖಲೆಯ ಸಾಹಸ ದೃಶ್ಯಗಳು
ಚಿತ್ರದಲ್ಲಿ ಹಾಲಿವುಡ್ ಮಟ್ಟದ ಹೈ-ವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್‍ಗಳಿದ್ದು, ಜಾನ್ ವಿಕ್ ಸರಣಿಯ ’87 ಎಲೆವನ ತಂಡ ಸಾಹಸ ದೃಶ್ಯಗಳನ್ನು ಸಂಯೋಜಿಸಿದೆ. ಈ ಚಿತ್ರದಲ್ಲಿ ನಡೆಸಲಾದ 170.7 ಟನ್ ಟಿಎನ್‍ಟಿ ಸಾಮಥ್ರ್ಯದ ಬೃಹತ್ ರಿಯಲ್ ಬ್ಲಾಸ್ಟಿಂಗ್ ಸಾಹಸ ದೃಶ್ಯವು ಜೇಮ್ಸ್ ಬಾಂಡ್ ಸಿನಿಮಾಗಳ ದಾಖಲೆಯನ್ನು ಮುರಿದು ‘ಗಿನ್ನೆಸ್ ವಿಶ್ವ ದಾಖಲೆ’ ಬರೆದಿದೆ.