ಕಲಬುರಗಿ: ಕಾರ್ಪೋರೇಟ್‍ಗಳೇ ದೇಶಬಿಟ್ಟು ತೊಲಗಿ ಘೋಷಣೆಯಡಿ ಸಿಐಟಿಯು ಸಂಘಟನೆಯ ನೆತೃತ್ವದಲ್ಲಿ ದೇಶಾದ್ಯಂತ ಚೈಲಬರೋಚಳುವಳಿ ಕರೆಯ ಮೇರಿಗೆ ಕನಿಷ್ಟ ವೇತನ ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ನಗರದಲ್ಲಿ ಇಂದು ಬೃಹತ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲಾಯಿತು. ಎಂ.ಬಿ.ಸಜ್ಜನ, ಶರಣಬಸಪ್ಪ ಮಾಮಶೆಟ್ಟಿ, ಭೀಮಶೆಟ್ಟಿ ಯಂಪಳ್ಳಿ, ಶಾಂತಾ ಘಂಟಿ, ದಿಲೀಪ ನಾಗೂರೆ, ಮೇಘರಾಜ ಕಟಾರೆ, ಪ್ರಕಾಶ ಬನ್ನಿಗಿಡಿ, ಕಲ್ಯಾಣಿ ಸಿಂಗೆ, ಮಾದೇವ ಸಿಂಗೆ, ಸಾಬಮ್ಮ ಕಾಳಿಗಿ, ಶಾಣಮ್ಮ ರೆಡ್ಡಿ, ರತ್ನಮ್ಮಾ, ರಾಜೇಶ್ವರಿ ಎಂ. ಸುಜಾತಾ ಕಡದಳ್ಳಿ ಸೇರಿದಂತೆ ಬಹುಸಂಖ್ಯೆಯಲ್ಲಿ ಕಾರ್ಮಿಕರು, ಕೃಷಿಕರು ಭಾಗವಹಿಸಿದ್ದರು.