Home ಜಿಲ್ಲೆ ಜಂತುಹುಳು ನಿವಾರಣಾ ದಿನಾಚರಣೆ

ಜಂತುಹುಳು ನಿವಾರಣಾ ದಿನಾಚರಣೆ

ಧಾರವಾಡ, ಅ.೧೨: ಜಂತುಹುಳು ಮುಕ್ತ ಮಕ್ಕಳು- ಆರೋಗ್ಯವಂತ ಮಕ್ಕಳು ಆರೋಗ್ಯವಂತ ಮಗು, ಆರೋಗ್ಯವಂತ ಕುಟುಂಬ, ಆರೋಗ್ಯವಂತ ಸಮಾಜ, ಆರೋಗ್ಯವಂತ ಭಾರತ ಎಂಬ ಸಂದೇಶದೊAದಿಗೆ ಮಕ್ಕಳಿಗೆ ಸುರಕ್ಷಿತವಾಗಿ ಜಂತುಹುಳು ನಿವಾರಣಾ ಚೀಪುವ ಮಾತ್ರೆ ನೀಡುವುದು, ಜಂತುಹುಳು ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಮಕ್ಕಳ ಆರೋಗ್ಯ, ಪೌಷ್ಠಿಕತೆ ಹಾಗೂ ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸುವುದು ಎಲ್ಲಾ ಮಕ್ಕಳು ಮತ್ತು ಹದಿಹರೆಯದವರಲ್ಲಿ ಪರಾವಂಲAಬಿ ಕರುಳಿನ ಹುಳುಗಳು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಮಣ್ಣಿನಿಂದ ಹರಡುವ ಹೆಲ್ಮಿಂತ್‌ಗಳು ಹರಡುವಿಕೆಯನ್ನು ಕಡಿಮೆ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್ ವಿಭಾಗ, ಜಿಲ್ಲಾ ಐ.ಇ.ಸಿ. ವಿಭಾಗ ಸಹಯೋಗದೊಂದಿಗೆ ಕೆ.ಇ. ಬೋರ್ಡ ಹೈಸ್ಕೂಲ್‌ನ ಮಾಳಮಡ್ಡಿಯಲ್ಲಿ ನಡೆದ ಜಂತುಹುಳು ನಿವಾರಣಾ ದಿನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟಿçÃಯ ಜಂತುಹುಳು ನಿವಾರಣಾ ದಿನವನ್ನು ೨೦೧೫ ರಲ್ಲಿ ಪ್ರಾರಂಭಿಸಲಾಯಿತು. ಮತ್ತು ಇದು ಪ್ರತಿ ವರ್ಷ ಎರಡು ಸುತ್ತುಗಳ ಮೂಲಕ ಕೋಟ್ಯಂತರ ಮಕ್ಕಳು ಮತ್ತು ಹದಿಹರೆಯದವರನ್ನು ತಲುಪುವ ಒಂದೇ ದಿನದಲ್ಲಿ ಜಾರಿಗೊಳಿಸಲಾದ ಅತೀ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಸರ್ಕಾರದ ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ೧ ರಿಂದ ೧೯ ವರ್ಷದೊಳಗಿನ ಮಕ್ಕಳು ಮತ್ತು ಕಿಶೋರರು, ಶಾಲೆಯಲ್ಲಿ ಓದುತ್ತಿರುವವರು ಹಾಗೂ ಶಾಲೆಯಿಂದ ಹೊರಗಿರುವವರನ್ನು ಒಳಗೊಂಡಿದೆ. ಶಾಲೆಗಳು ಮತ್ತು ಅಂಗನವಾಡಿಗಳ ಮೂಲಕ ಸೇವೆ ತಲುಪಿಸಲಾಗುತ್ತದೆ ಎಂದು ಅವರು ಹೇಳಿದರು.

ನಮ್ಮ ಸುತ್ತಮುತ್ತಲಿನ ಮಣ್ಣು, ಅಶುದ್ಧ ನೀರು, ಸ್ವಚ್ಛತೆಯ ಕೊರತೆ ಮತ್ತು ವಯಕ್ತಿಕ ಸ್ವಚ್ಚತೆಯ ನಿರ್ಲಕ್ಷದಿಂದ ಜಂತುಹುಳುಗಳ ಸೋಂಕು ಉಂಟಾಗಬಹುದು. ಜಂತುಹುಳುಗಳು ಮಕ್ಕಳ ದೇಹದಲ್ಲಿರುವ ಪೋಷಕಾಂಶಗಳ ಹೀರಿಕೆಗೆ ಅಡ್ಡಿಪಡಿಸಬಹುದು. ಇದರಿಂದ ರಕ್ತಹೀನತೆ, ಅಪೌಷ್ಠಿಕತೆ, ದೈಹಿಕ ಬೆಳವಣಿಗೆಯಲ್ಲಿ ಕುಂಠಿತತೆ ಹಾಗೂ ಕಲಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಜಂತುಹುಳು ನಿವಾರಣೆ ಎಂದರೆ ಕೇವಲ ಒಂದು ಮಾತ್ರೆ ನೀಡುವುದಲ್ಲ, ಮಕ್ಕಳ ಆರೋಗ್ಯ, ಪೌಷ್ಠಿಕತೆ, ಶಿಕ್ಷಣ ಮತ್ತು ಭವಿಷ್ಯವನ್ನು ರಕ್ಷಿಸುವ ಕಾರ್ಯವಾಗಿದೆ. ನಮ್ಮ ಮಕ್ಕಳು ನಿಯಮಿತವಾಗಿ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು, ಶೌಚಾಲಯವನ್ನು ಬಳಸಬೇಕು, ಶುದ್ಧ ನೀರನ್ನು ಕುಡಿಯಬೇಕು, ಹಣ್ನು ತರಕಾರಿಗಳನ್ನು ಚನ್ನಾಗಿ ತೊಳೆದು ಸೇವಿಸಬೇಕು, ಉಗುರುಗಳನ್ನು ಚಿಕ್ಕದಾಗಿ ಮತ್ತು ಸ್ವಚ್ಛವಾಗಿಟ್ಟುಕೊಳ್ಳಬೇಕು, ಬರಿಗಾಲಿನಲ್ಲಿ ಮಣ್ಣು ಅಥವಾ ಕಲುಷಿತ ಪ್ರದೇಶಗಳಲ್ಲಿ ನಡೆಯುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಸ್ವಚ್ಛ ಕೈ, ಶುದ್ಧ ನೀರು, ಸ್ವಚ್ಛ ಪರಿಸರ ಜಂತುಹುಳು ಮುಕ್ತ ಬಾಲ್ಯ ಎಂಬ ಸಂದೇಶ ಪ್ರತಿಯೊಂದು ಮನೆಗೂ ತಲುಪಬೇಕು. ಜಂತುಹುಳು ನಿವಾರಣಾ ದಿನವನ್ನು ಕೇವಲ ಒಂದು ಸರಕಾರಿ ಕಾರ್ಯಕ್ರಮವಾಗಿ ನೋಡದೇ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿ ಮಾಡೋಣ ಎಂದು ಅವರು ಹೇಳಿದರು.

ತೀವ್ರತರದ ಜಂತುಹುಳದ ಬಾಧೆ ಇರುವಂತಹ ಮಕ್ಕಳಲ್ಲಿ ಅಲ್ಬೆಂಡಝೋಲ್ ಚೀಪುವ ಮಾತ್ರೆ ತಿಂದ ಬಳಿಕ ಸಣ್ಣ ಪ್ರಮಾಣದಲ್ಲಿ ಜ್ವರ ಬರಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ, ತೀವ್ರತರ ಜ್ವರ, ವಾಂತಿ ಬೇಧಿಯಂತಹ ಸಮಸ್ಯಗಳಿಗೆ ಔಷದೋಪಚಾರ ಪಡೆಯುತ್ತಿರುವ ಮಕ್ಕಳು ಹಾಗೂ ಶಾಲೆಗೆ ಗೈರುಹಾಜರಾಗಿರುವ ಮಕ್ಕಳಿಗೆ ಅಗಸ್ಟ್ ೧೭, ೨೦೨೬ ರ ಮಾಪ್-ಅಪ್ ದಿನದಂದು ಅಲ್ಬೆಂಡಝೋಲ್ ಚೀಪುವ ಮಾತ್ರೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಒಂದು ವೇಳೆ ಕೆಲವೇ ದಿನಗಳ ಮೊದಲು ಮಾತ್ರೆಯನ್ನು ನೀಡಿದ್ದರೂ ಈ ಕಾರ್ಯಕ್ರಮದಲ್ಲಿ ಮಾತ್ರೆಯನ್ನು ಸೇವಿಸುವುದರಿಂದ ಯಾವುದೇ ತೊಂದರೆ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಇ.ಬೋರ್ಡ ಹೈಸ್ಕೂಲ್‌ನ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಅವರು ವಹಿಸಿದರು.

ಕಾರ್ಯಕ್ರಮದಲ್ಲಿ ಜಂತುಹುಳು ನಿವಾರಣಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಲ್ಬೆಂಡಝೋಲ್ ಚೀಪುವ ಮಾತ್ರೆಯನ್ನು ನೀಡಲಾಯಿತು.

ಕಾರ್ಯಕ್ರಮವನ್ನು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್ ಅಗಡಿ ಸ್ವಾಗತಿಸಿ-ನಿರೂಪಿಸಿದರು. ಕೆ.ಇ. ಬೋರ್ಡ ಹೈಸ್ಕೂಲ್‌ನ ಪ್ರಾಂಶುಪಾಲರಾದ ಎನ್.ಎಸ್. ಗೋವಿಂದ ರೆಡ್ಡಿ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಮಹೇಶ ಚಿತ್ತರಗಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮೇಶ ಬೊಮ್ಮಕ್ಕನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ವೀರಣ್ಣಗೌಡ ಪಾಟೀಲ, ಧಾರವಾಡ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ತಿಮ್ಮಾಪೂರ, ಯಲ್ಲಪ್ಪ ಹುಬ್ಬಳ್ಳಿ ವಿಷಯ ಪರಿವೀಕ್ಷಕರು, ಡಿ.ಡಿ.ಪಿ.ಐ ಕಚೇರಿ, ಸರಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲರಾದ ನಂದೀಶ ಕಾಕಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್ ಅಗಡಿ, ಸುಧಾ ತಿವಾರಿ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಉಪನ್ಯಾಸಕರು, ಆರ್.ಬಿ.ಎಸ್.ಕೆ. ತಂಡದ ಎಲ್ಲ ವ್ಶೆದ್ಯಾಧಿಕಾರಿಗಳು, ಸಿಬ್ಬಂದಿ ವರ್ಗವದರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.