
ಭಾಲ್ಕಿ: ದುಡಿವ ಕಾರ್ಮಿಕ ಕೈಗಳಿಗೆ ಕೆಲಸ ನೀಡಲು ಹಾಗೂ ಎಲ್ಲ ಅರ್ಹ ಬಡ ಗ್ರಾಮೀಣರಿಗೆ ಉದ್ಯೋಗ ಖಾತ್ರಿಪಡಿಸಲು ವಿಬಿಜಿ-ರಾಮ್ ಜಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿದ ಕೂಲಿಕಾರರ ಪ್ರತಿ ಕುಟುಂಬಕ್ಕೆ ೧೨೫ ದಿನ ಕೂಲಿ ಕೆಲಸ ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಹೊರವಲಯದಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಸೋಮವಾರ ನಡೆಯುತ್ತಿದ್ದ ಸಮುದಾಯ ಗೋಕಟ್ಟೆ ಪುನಶ್ಚೇತನ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿಕಾರರನ್ನುದ್ದೇಶಿಸಿ ಅವರು ಮಾತನಾಡಿದರು.
ಯೋಜನೆಯಡಿ ೩೮೨ ರೂಪಾಯಿ ದಿನಗೂಲಿ ಲಭ್ಯವಿದ್ದು, ಜಾಬ್ ಕಾರ್ಡ್ ಹೊಂದಿದ ಕುಟುಂಬವೊAದು ಒಂದು ಆರ್ಥಿಕ ವರ್ಷದಲ್ಲಿ ೧೨೫ ದಿನ ಕೂಲಿ ಕೆಲಸದಂತೆ ೪೭,೭೫೦ ರೂಪಾಯಿಗಳಿಸಬಹುದು. ಈ ಹಣ ತಾವು ತಮ್ಮ ಮಕ್ಕಳ ವಿದ್ಯಾಬ್ಯಾಸಕ್ಕೆ ಹಾಗೂ ಕುಟುಂಬದ ಇನ್ನಿತರ ಖರ್ಚುಗಳಿಗೆ ಬಳಸಬಹುದು ಎಂದರು.
ಸಮುದಾಯ ಗೋಕಟ್ಟೆಯ ಸಮಗ್ರ ಅಭಿವೃದ್ಧಿಗಾಗಿ ವಾರದೊಳಗೆ ಅಂದಾಜು ವೆಚ್ಚ ಒಳಗೊಂಡAತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿAಗ್ ಅಧಿಕಾರಿಗೆ ಸಚಿವರು ನಿರ್ದೇಶಿಸಿದರು.
ಸ್ಥಳದಲ್ಲೇ ಕಾಮಗಾರಿ ಆದೇಶ ಪತ್ರ ವಿತರಣೆ:
ವಿಬಿ ಜಿ ರಾಮ್ ಜಿ ಯೋಜನೆಯ ಅನುಮೋದಿತ ಕ್ರಿಯಾ ಯೋಜನೆಯಲ್ಲಿನ ಆರು ಮಂದಿ ರೈತ/ವೈಯಕ್ತಿಕ ಫಲಾನುಭವಿಗಳಿಗೆ ಸಚಿವರು ಸ್ಥಳದಲ್ಲೇ ಕಾಮಗಾರಿ ಆದೇಶ ಪತ್ರ ವಿತರಿಸಿದರು. ಇದರಲ್ಲಿ ತೆರೆದ ಬಾವಿ, ಜಾನುವಾರು ಶೆಡ್, ಮಾವು ಕೃಷಿ, ಒಳಗೊಂಡಿವೆ.
ಕೂಲಿಕಾರರ ಎಸ್‌ಎಂಎAಎಸ್ ಹಾಜರಾತಿ ಪಡೆದರು:
ಇದೇ ವೇಳೆ ಸಚಿವರು ಕೂಲಿಕಾರರೊಂದಿಗೆ ಸಂವಾದಿಸಿ ಸಮಸ್ಯೆಗಳನ್ನು ಆಲಿಸಿದರು. ನಂತರ ಕೂಲಿಕಾರರೊಂದಿಗೆ ಬೆರೆತು ಕೂಲಿಕಾರರು ಅಗೆದ ಮಣ್ಣನ್ನು ಬುಟ್ಟಿಯಲ್ಲಿ ತುಂಬಿ ಪಕ್ಕದ ಬದು ಮೇಲೆ ಹಾಕಿ ಶ್ರಮದಾನ ಮಾಡಿದರು.
ಸ್ವತಃ ಸಚಿವರು ಕಾಮಗಾರಿಯಲ್ಲಿ ತೊಡಗಿದ್ದ ಕೂಲಿಕಾರರ ಎಸ್ ಎಂಎAಎಸ್ ಮೊಬೈಲ್ ಆಪ್
ಮೂಲಕ ಮುಖ ಹಾಜರಾತಿ ಪಡೆದು ಯಾಪ್ ಕಾರ್ಯವೈಖರಿ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೀರೆಂದ್ರಸಿAಗ್ ಠಾಕೂರ್, ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರಿAಗ್ ಎಇಇ ರಾಜಕುಮಾರ ಸಾಹುಕಾರ, ಸಹಾಯಕ ನಿರ್ದೇಶಕ ಬಾಲಾಜಿ ಕೋಟೆ, ಕೋನಮೇಳಕುಂದಾ ಗ್ರಾಪಂ ಪಿಡಿಒ ವಿಶ್ವಶಾಲಾ, ತಾಂತ್ರಿಕ ಸಂಯೋಜಕ ಅಮರನಾಥ ಪಾಟೀಲ್, ಎಂಐಎಸ್ ಸಂಯೋಜಕ ಯುವರಾಜ ರಾಜಾಪೂರೆ, ಐಇಸಿ ಸಂಯೋಜಕ ಗಣಪತಿ ಹರಕೂಡೆ, ಟಿಎಇ ಆನಂದಸಾಗರ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇನ್ನಿತರು ಇದ್ದರು.































