Home ಜಿಲ್ಲೆ ಕಲಬುರಗಿ ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ

ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ

ಜೇವರ್ಗಿ,ಆ.24-ಪಟ್ಟಣದ ಹೊರವಲಯದ ಸರ್ಕಿಟ್ ಹೌಸ್ ಬಳಿ ಪ್ರಗತಿಪರ ಸಂಘಟನೆಗಳ ಮುಖಂಡರು ಸಚಿವ ಡಾ.ಅಜಯ್ ಸಿಂಗ್ ಅವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಸಚಿವರಾಗಿ ಡಾ.ಅಜಯ್ ಸಿಂಗ್ ಪ್ರಥಮ ಬಾರಿಗೆ ಜೇವರ್ಗಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿಪಿಐ ಪಕ್ಷದ ಜಿಲ್ಲಾ ಜಿಲ್ಲಾ ಕಾರ್ಯದರ್ಶಿ ಮಹೇಶ ರಾಠೋಡ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಪ್ಪು ಪಟ್ಟಿ ಪ್ರದರ್ಶಿಸಿದರು.
ಕಳೆದ ಕೆಲ ತಿಂಗಳಿಂದ ತಹಶೀಲ್ದಾರ್ ಕಚೇರಿ ಎದುರು ಪುರಸಭೆಯ 17 ಜನಪೌರಕಾರ್ಮಿಕರು ಸೇವೆ ಖಾಯಂಗೊಳಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದು, ಡಾ.ಅಜಯ್ ಸಿಂಗ್ ಅವರು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯ ಕುರಿತು ಪಟ್ಟಣದ ಹೊರವಲಯದಲ್ಲಿರುವ ಸರ್ಕಿಟ್ ಹೌಸ್‍ನಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಸಚಿವರು ಸಭೆ ನಡೆಸಿದರು. ಒಮ್ಮತಕ್ಕೆ ಬಾರದ ಕಾರಣ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಲ್ಲಣ್ಣಗೌಡ ಕೆಲ್ಲೂರ, ಪುಂಡಲೀಕ್ ಗಾಯಕವಾಡ, ಸಿದ್ರಾಮ ಕಟ್ಟಿ, ಶ್ರೀಹರಿ ಕರಕಿಹಳ್ಳಿ, ಸಿದ್ದು ಕೆರೂರು, ಮೈನೋದೀನ ಇನಾಂದಾರ, ಇಬ್ರಾಹಿ ಪಟೇಲ್ ಯಾಳವಾರ, ಬಿ. ಎಚ್.ಮಾಲಿಪಾಟೀಲ ಸೋಮನಾಥÀಹಳ್ಳಿ, ಮಲ್ಲಣ್ಣ ಕೊಡಚಿ, ಮಹಾಂತಗೌಡ ನಂದಿಳ್ಳಿ, ಅಜೀಶ್ ಪಟೇಲ್, ಸಿದ್ದುನಗೌಡ ರಾಜವಾಳ, ಬಾಬು ಪಟೇಲ್, ಅಮೃತಗೌಡ ಪೆÇಲೀಸ್ ಪಾಟೀಲ್ ಗುಡುರ್, ಭೀಮು ಬಿಲ್ಲಾಡ, ಅಜೀಜ ಪಟೇಲ್, ಮಹೇಶ ಕೋಕಿಲೆ, ಅಲ್ಲಾ ಪಟೇಲ್ ಇಜೇರಿ, ಪರಮಾನಂದ ಯಲಗೋಡ, ಪರಮೇಶ್ವರ್ ಬಿರಾಳ, ಮಹಾದೇವಿ ಯಾಳವಾರ, ದೇವಕ್ಕಿ ಯಾಳವಾರ, ಮಂಜುಳಾ ಭಜಂತಿ,್ರ ಬಸವರಾಜ ಇಂಗಳಗಿ, ಸಿದ್ದು ಜನಿವಾರ, ಶ್ರೀಮಂತ ಕಿಲ್ಲೆದಾರ, ರಾಘವೇಂದ್ರ ಬುದ್ಧನಗರ ಸೇರಿದಂತೆ ಅನೇಕರಿದ್ದರು.