Home ಮುಖಪುಟ ಸುದ್ದಿ ವಿಪಕ್ಷಗಳಿಂದ ನಾಳೆ ವಿಧಾನಸೌಧ ಮುತ್ತಿಗೆ

ವಿಪಕ್ಷಗಳಿಂದ ನಾಳೆ ವಿಧಾನಸೌಧ ಮುತ್ತಿಗೆ

ಬೆಂಗಳೂರು, ಆ. ೨೩- ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಗೆ ಅಗ್ರಹಿಸಿ ಸದನದಲ್ಲಿ ಹೋರಾಟ ನಡೆಸಿರುವ ಪ್ರತಿಪಕ್ಷಗಳಾದ ಬಿಜೆಪಿ ಜೆಡಿಎಸ್ ನಾಳೆ ವಿಧಾನಸೌಧ ಮುತ್ತಿಗೆ ಆಂದೋಲನ ನಡೆಸಲಿವೆ,.


ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ಅವರು ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ , ನಾಳೆ ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶ ನಡೆಸಿ ನಂತರ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.


ಫ್ರೀಡಂ ಪಾರ್ಕ್‌ನಿಂದ ಆರಂಭವಾಗಲಿರುವ ‘ವಿಧಾನಸೌಧ ಮುತ್ತಿಗೆ’ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎಂದರು ನಾಳೆಯಿಂದ ಸಚಿವರಾದ ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಡೆಸಿರುವ ಹೋರಾಟ ಸದನದ ಒಳಗೂ ಮತ್ತು ಹೊರಗೂ ಪ್ರತಿಭಟನೆ ತೀವ್ರಗೊಳ್ಳಲಿದೆ. ಎಂದು ತಿಳಿಸಿದರು ಸುದ್ದಿಗೋಷ್ಠಿಯ ಪ್ರಮುಖ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ೧೮೭ ಕೋಟಿ ರೂ. ಹಣವನ್ನು ಲೂಟಿ ಮಾಡಿ, ಅದನ್ನು ತೆಲಂಗಾಣ ಹಾಗೂ ಕರ್ನಾಟಕದ ಚುನಾವಣೆಗಳಿಗೆ ಕಾಂಗ್ರೆಸ್ ಬಳಸಿಕೊಂಡಿದೆ. ಈ ಅಕ್ರಮದಲ್ಲಿ ಮಾಜಿ ಸಚಿವ ನಾಗೇಂದ್ರ ಭಾಗಿಯಾಗಿದ್ದು, ಅವರ ವಿರುದ್ಧ ಸಿಬಿಐ ಹಾಗೂ ಇಡಿ ಚಾರ್ಜ್‌ಶೀಟ್ ಸಲ್ಲಿಸಿವೆ. ಸುಪ್ರೀಂ ಕೋರ್ಟ್‌ನ “ಮನೋಜ್ ವರ್ಸಸ್ ಕೇಂದ್ರ ಸರ್ಕಾರ” (೨೦೦೫) ತೀರ್ಪಿನ ಮಾನದಂಡಗಳ ಪ್ರಕಾರವೂ ಅವರು ಸಚಿವರಾಗಲು ಅನರ್ಹರು ಎಂದರು.


ನಾಗೇಂದ್ರ ವಿರುದ್ಧ ಕನಿಷ್ಠ ೩೫ ಪ್ರಮುಖ ಪ್ರಕರಣಗಳಿವೆ. ಎಂದು ಹೇಳಿದ ಆರ್ ಅಶೋಕ್ ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದಾಗ ಸಿಬಿಐ ಹಾಗೂ ಇಡಿ ತನಿಖೆ ಸರಿಯಾಗಿದೆ ಎಂದಿದ್ದರು. ಆದರೆ ಉಪಮುಖ್ಯಮಂತ್ರಿಯಾದ ತಕ್ಷಣ ತನಿಖಾ ಸಂಸ್ಥೆಗಳು ದುರುದ್ದೇಶಪೂರಿತವಾಗಿ ನಡೆದುಕೊಳ್ಳುತ್ತಿವೆ ಎಂದು ಹೇಳಿಕೆ ನೀಡುತ್ತಿರುವುದು ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಎಂದರು ಸಿಬಿಐ ರಾಜ್ಯಪಾಲರಿಂದ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರೂ ಸರ್ಕಾರ ಅನುಮತಿ ನೀಡದೆ ರಕ್ಷಣೆ ಮಾಡುತ್ತಿದೆ. ಎಂದು ದೂರಿದರು ಅದಾನಿ ಭೇಟಿ ಹಾಗೂ ರಾಹುಲ್ ಗಾಂಧಿ ನಿಲುವು:ಎಐಸಿಸಿ ನಾಯಕ ರಾಹುಲ್ ಗಾಂಧಿ ನಿರಂತರವಾಗಿ ಅದಾನಿ ವಿರುದ್ಧ ಆರೋಪ ಮಾಡುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅದೇ ಅದಾನಿಗೆ ರೆಡ್ ಕಾರ್ಪೆಟ್ ಹಾಸಿ ಉದ್ಯಮಕ್ಕೆ ಸ್ವಾಗತ ಕೋರುತ್ತಿದೆ.


ಅದಾನಿ ಒಬ್ಬ ಉದ್ಯಮಿ ಎಂಬುದನ್ನು ಡಿಕೆಶಿ ಅವರು ರಾಹುಲ್ ಗಾಂಧಿಗೆ ಮನವರಿಕೆ ಮಾಡಿಕೊಡಲಿ. ದೆಹಲಿಯಲ್ಲಿ ವಿರೋಧ, ರಾಜ್ಯದಲ್ಲಿ ಸ್ವಾಗತ ಎನ್ನುವುದು ಕಾಂಗ್ರೆಸ್‌ನ ಮತ್ತೊಂದು ನಾಟಕ ಎಂದು ವಾಗ್ದಾಳಿ ನಡೆಸಿದರು.


ಉದ್ಯಾನವನಗಳ ಜಾಗ ಬಳಕೆ ಕಾಯ್ದೆಗೆ ವಿರೋಧ:ಟನೆಲ್ ರೋಡ್ ಯೋಜನೆಗೆ ನಗರದ ಶೇ. ೫ರಷ್ಟು ಪಾರ್ಕ್ ಜಾಗ ಹಾಗೂ ಓಪನ್ ಸ್ಪೇಸ್ ಬಳಸಿಕೊಳ್ಳಲು ಕಾಯ್ದೆ ತರಲು ಸರ್ಕಾರ ಹೊರಟಿದೆ. ಲಾಲ್‌ಬಾಗ್, ಸ್ಯಾಂಕಿ ಕೆರೆ ಭಾಗದ ಮರಗಳನ್ನು ಕಡಿಯಲು ಸಚಿವ ಡಿಕೆಶಿ ಕಣ್ಣಿಟ್ಟಿದ್ದಾರೆ. ಎಂದು ದೂರಿದರು
ಪರಿಸರ ಪ್ರೇಮಿ ಎಂದು ತೋರ್ಪಡಿಸಿಕೊಳ್ಳುವ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಇಲ್ಲಿ ಕಡಿಯಲಿರುವ ಮರಗಳನ್ನು ತಬ್ಬಿಕೊಂಡು ಪ್ರತಿಭಟಿಸಲಿ ಎಂದು ಅಶೋಕ್ ಸವಾಲು ಹಾಕಿದರು.

ನೈಸ್ ಯೋಜನೆಯು ರೈತರ ಜಮೀನನ್ನು ಅಕ್ರಮವಾಗಿ ಕಬಳಿಸಿದ ಕಪಟ ಯೋಜನೆಯಾಗಿದ್ದು, ಈ ಯೋಜನೆ ವಿರುದ್ಧ ಬಿಜೆಪಿ ಈ ಹಿಂದೆಯೂ ಹೋರಾಟ ನಡೆಸಿದೆ ಹೆಚ್.ಡಿ. ಕುಮಾರಸ್ವಾಮಿ ಅವರ ನೈಸ್ ಟೋಲ್ ಕಟ್ಟಬೇಡಿ ಎಂಬ ಕರೆಯನ್ನು ನಾವು ಬೆಂಬಲಿಸುತ್ತೇವೆ ಎಂದರು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಕೋರ್ಟ್‌ನಲ್ಲಿದೆ. ನಮ್ಮ ಸುದೀರ್ಘ ಪಾದಯಾತ್ರೆಯ ಹೋರಾಟದ ಫಲವಾಗಿ ಸಿಎಂ ೧೪ ನಿವೇಶನಗಳನ್ನು ವಾಪಸ್ ನೀಡಿದ್ದಾರೆ, ಕೋರ್ಟ್‌ನ ಮುಂದಿನ ಆದೇಶ ಆಧರಿಸಿ ಮುಂದಿನ ಹೋರಾಟ ರೂಪಿಸಲಾಗುವುದು.