Home ಜಿಲ್ಲೆ ಭರದಿಂದ ಸಾಗಿದೆ ಭಾರತ್ ಜೋಡೋ ಯುವ ಸಂಘದ ನೋಂದಣಿ

ಭರದಿಂದ ಸಾಗಿದೆ ಭಾರತ್ ಜೋಡೋ ಯುವ ಸಂಘದ ನೋಂದಣಿ

ಸಂಜೆವಾಣಿ ವಾರ್ತೆ:

ಕೊಟ್ಟೂರು:ಆಗಸ್ಟ್ 23:-  ಕೊಟ್ಟೂರು ಪಟ್ಟಣದಲ್ಲಿ ಈಗಾಗಲೇ ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ಅತೀ ವೇಗದಲ್ಲಿ ಸಾಗುತ್ತಿದ್ದು ಪ್ರತಿ ವಾರ್ಡಿನ 16 ರಿಂದ 35 ವರ್ಷದ ಒಳಗಿನ ಯುವಕ ಯುವತಿಯರು ಸದಸ್ಯತ್ವ ನೋಂದಣಿ ಮಾಡಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ.ಪಂ.ಮುಖ್ಯಧಿಕಾರಿ ಎ.ನಸರುಲ್ಲಾ ರವರು ತಿಳಿಸಿದರು.ಸರ್ಕಾರವು ಇತ್ತೀಚಿಗೆ ಘೋಷಿಸಿರುವ ಈ ಯೋಜನೆ ರಾಜ್ಯದ ಯುವ ಸಬಲೀಕರಣವು ಅಭಿವೃದ್ಧಿ ಹೊಂದಲು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲು ಈ ಯೋಜನೆ ಸಹಕಾರವಾಗಲಿದೆ ಆದ್ದರಿಂದಾಗಿ ಇದರ ಕೆಲಸವು ವೇಗವಾಗಿ ಸಾಗುತ್ತಿದೆ ನಮ್ಮ ಇಲಾಖೆ ಪ್ರತಿ ವಾರ್ಡಿಗೆ ಹೋಗಿ ಇದರ ದ್ಯೇಯ ಉದ್ದೇಶಗಳನ್ನು ತಿಳಿಸಿ ಸದಸ್ಯತ್ವವನ್ನು ಪಡೆದುಕೊಳ್ಳುತ್ತಿದ್ದಾರೆ 4 ಸಾವಿರ ಜನಸಂಖ್ಯೆ ಅನುಗುಣವಾಗಿ 100ಕ್ಕೂ ಹೆಚ್ಚು ಸದಸ್ಯತ್ವ ಹೊಂದಿರುವ ಯುವಕ ಯುವತಿಯರನ್ನು ಒಂದು ಸಂಘ ಎಂಬಂತೆ ರಚಿಸಬೇಕು ಈ ಯೋಜನೆ ಅಡಿಯಲ್ಲಿ ನೋಂದಾಯಿತ ಪ್ರತಿ ಸಂಘಕ್ಕೆ ವಾರ್ಷಿಕವಾಗಿ 10 ಲಕ್ಷ ರೂಪಾಯಿ ಅನುದಾನ ನೀಡಲು ಸರ್ಕಾರ ತೀರ್ಮಾನಿಸಿದೆ ಈಗಾಗಲೇ ಪಟ್ಟಣದಲ್ಲಿ 32 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಕಾರಣ ಇದರ ಅನುಗುಣವಾಗಿ 08 ಸಂಘ ರಚಿಸಲು ಅವಕಾಶ ಹೊಂದಿದೆ ಈಗಾಗಲೇ 70% ನಷ್ಟು ಸದಸ್ಯತ್ವ ಮುಗಿದಿದೆ ಇನ್ನೂ ಸದಸ್ಯತ್ವ ತೆಗೆದುಕೊಳ್ಳದೆ ಇರುವ ನಿರ್ದಿಷ್ಟ ವಯಸ್ಕರರು ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.

ಭಾರತ್ ಜೋಡೋ ಗುರಿ ಉದ್ದೇಶಗಳು.

*ಯುವ ಸಬಲೀಕರಣಕ್ಕೆ ಪ್ರೋತ್ಸಾಹ *

* ಕ್ರೀಡೆ ಮತ್ತು ಸಂಸ್ಕೃತಿ ವೈಜ್ಞಾನಿಕ ಮನೋಭಾವ ರೂಡಿಗತಗೊಳಿಸುವುದು.

* ಸಂವಿಧಾನದ ತತ್ವ ಸಿದ್ಧಾಂತಗಳನ್ನು ಪ್ರಚಾರ ಪಡಿಸುವುದು.

* ಯುವಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು.

* ಸಾಮಾಜಿಕ ಸಾಮರಸ್ಯ ಬೆಳೆಸುವುದು.