Home ಜಿಲ್ಲೆ ಕಲಬುರಗಿ ಅಡ್ಡಿ ಪಡಿಸುವವರ ನಡುವೆಯೇ ಅಜೇಯರಾಗಬೇಕು

ಅಡ್ಡಿ ಪಡಿಸುವವರ ನಡುವೆಯೇ ಅಜೇಯರಾಗಬೇಕು

ಕಲಬುರಗಿ: ಆ 31 : ನಮ್ಮ ಕೆಲಸ ಕಾರ್ಯಗಳಿಗೆ ಕಾಲು ಎಳೆಯುವವರು, ಅಡ್ಡಿ ಪಡಿಸುವವರು, ಹೊಟ್ಟೆಕಿಚ್ಚು ಪಡುವವರು ಸುತ್ತಮುತ್ತ ಲೂ ಇದ್ದೇ ಇರುತ್ತಾರೆ. ಆದರೆ ಅವರನ್ನು ನಿರ್ಲಕ್ಷಿಸಿ, ಪ್ರಾಮಾಣಿಕ ವಾಗಿ ನಮ್ಮ ಕರ್ತವ್ಯಗಳನ್ನು ಮಾಡುತ್ತ ಸಾಧಿಸಬೇಕು ಎಂದು ಖ್ಯಾತ ನಗೆಗಾರ ಗುಂಡಣ್ಣ ಡಿಗ್ಗಿ ಅವರು ತಮ್ಮ ಸಹಜವಾದ, ಅನುಭವ ಜನ್ಯ ವಾದ ಹಾಸ್ಯ ಚಟಾಕಿಗಳ ಮೂಲಕ ಸಂದೇಶ ನೀಡಿದ್ದಾರೆ. ಕಲಬುರಗಿಯ ಅಡ್ವೊಕೇಟ್ಸ್ ಕಾಲನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಾಸ್ಯ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ, ಶ್ರೋತೃಗಳ ನ್ನು ನಗೆಗಡಲಲ್ಲಿ ಮುಳುಗಿಸುವಲ್ಲಿ ತೊಡಗಿದ್ದರು.
ತಮ್ಮ ಸ್ಥಳೀಯ ಭಾಷೆಯ ಸವಿಯ ಸೊಗಡು , ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳಲ್ಲಿ ಅಡಗಿರುವ ಹಾಸ್ಯ ವನ್ನು ನವಿರಾಗಿ ಪ್ರಸ್ತುತ ಪಡಿಸುವ ಅವರು, ಸದ್ಯದ ಡಿಜಿಟಲ್ ಸಂವಹನದ ಸಮಯದಲ್ಲಿ ಉದ್ಭವವಾಗುವ ಹಾಸ್ಯ ಸನ್ನಿವೇಶ ಗಳನ್ನು ರುಚಿ ರುಚಿಯಾಗಿ ಬಡಿಸಿದರು.
ಹಿರಿಯ ಕಲಾವಿದ ಅಮರಪ್ರಿಯ ಅಮರ ಹಿರೇಮಠ, ಕುಮಾರಿಯರಾದ ಚಂದ್ರಕಲಾ, ವೈಷ್ಣವಿ ಅವರ ಗಾಯನ, ಸಂಗೀತ ಜನರನ್ನು ಭಕ್ತಿಯ ಮಳೆಯಲ್ಲಿ ಮೀಯುವಂತೆ ಮಾಡಿತು.
ನಿವೃತ್ತ ಜೆಸ್ಕಾಂ ಅಧಿಕಾರಿ ಸದಾಶಿವ ಇವಣಿ ಅವರು ಮಾತಾಡಿ, ನಮ್ಮ ಸಂಸ್ಕøತಿಯ ಲಾಂಛನಗಳಾದ ವಿಭೂತಿ, ಕುಂಕುಮ, ಬಳೆ, ಮೂಗುತಿ, ಕಾಲುಂಗುರಗಳನ್ನು ಢಾಳಾಗಿ ಧರಿಸುವ ಮಹಿಳೆಯರು ತಮ್ಮ ತಮ್ಮ ಪತಿದೇವರಿಗೆ ದೀರ್ಘಾಯುಷ್ಯ ತರುತ್ತಾರೆ ಎಂದು ಹೇಳಿದರು.ಅಧ್ಯಕ್ಷ ಮಂಜುನಾಥ್ ಜೇವರ್ಗಿ ಅವರು ವಂದಿಸಿದರು. ಗುರುಮೂರ್ತಿ ಚತುರಾಚಾರಿಮಠ ಅವರು ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಜಿ ಎಸ್ ಬಿರಾದಾರ, ಆರ್ ಜೆ ಭೂಸಾರೆ, ಎಸ್ ಜಿ ಪಾಟೀಲ ಓಕಳಿ, ಅಶೋಕ ಜೇವರ್ಗಿ,ಸುಭಾಷ್ ಕೊಣಿನ್, ತಂಗಾ, ಸೋಮಾ, ಜಗದೇವಪ್ಪಾ ಭೂಸಾರೆ, ನಾಗೇಂದ್ರ ಕಾರಭಾರಿ, ಶಿವಶರಣಪ್ಪ ಗೌಡ, ಸೋಮಾ, ಭೀಮಾ ಶಂಕರ ಇಂಗಳೇಶ್ವರ್, ನರಸಿಂಹ ಮಾನಕರ, ನರಸಿಂಹ ದೇಶಪಾಂಡೆ, ಮಹಿಳಾ ಒಕ್ಕೂಟದ ಸದಸ್ಯೆಯರು ಉಪಸ್ಥಿತರಿದ್ದರು.