Home ಜಿಲ್ಲೆ ಕಲಬುರಗಿ ಜೂಜಾಟ:ಐವರ ಬಂಧನ

ಜೂಜಾಟ:ಐವರ ಬಂಧನ

ಕಲಬುರಗಿ,ಆ.31-ನಗರದ ಗಂಜ್ ಏರಿಯಾದ ಹನುಮಾನ ಗುಡಿ ಪಕ್ಕದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್‍ಐ ರಮೇಶ ಗುತ್ತೇದಾರ, ಸಿಬ್ಬಂದಿಗಳಾದ ಶಿವಾನಂದ, ಸುರೇಶ, ಶಿವಶರಣ ಅವರು ದಾಳಿ ನಡೆಸಿ ಐವರು ಜೂಜುಕೋರರನ್ನು ಬಂಧಿಸಿದ್ದಾರೆ.
ಮಲ್ಲಿಕಾರ್ಜುನ ಪರಸ್ಥಿ, ಜಗನಸಿಂಗ್ ರಜಪೂತ, ಅಶೋಕ ಬಿರಾದಾರ, ಚಂದ್ರಕಾಂತ ಕಣಜಗಿ, ಕಾಶಿನಾಥ ರೋಡೆ ಎಂಬುವವರನ್ನು ಬಂಧಿಸಿ 15,100 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.