
ಕಲಬುರಗಿ,ಆ.31-ಪುಸ್ತಕಗಳು ಜ್ಞಾನ, ಅನುಭವ ಹಾಗೂ ಜೀವನದ ಮಾರ್ಗದರ್ಶಕಗಳಾಗಿವೆ, ಒಂದು ಉತ್ತಮ ಪುಸ್ತಕ ನೆಮ್ಮದಿಯ ಬದುಕಿಗೆ ಬೆಳಕಾಗಿದೆ ಎಂದು ಖ್ಯಾತ ಸಾಹಿತಿಗಳು ಹಾಗೂ ರಂಗಾಯಣದ ಮಾಜಿ ನಿರ್ದೇಶಕರಾದ ಪ್ರಭಾಕರ ಜೋಶಿ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಮಹಾಲಕ್ಷ್ಮೀ ಲೇಔಟ್ ನಲ್ಲಿ ಹಿರಿಯ ಸಾಹಿತಿಗಳಾದ ನರಸಿಂಗರಾವ್ ಹೇಮನೂರ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಉದ್ಘಾಟನೆ ಮಾಡಿ ಮಾತನಾಡಿದರು ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಒಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರುವ ಹಾಗೆ ಮಾಡುತ್ತಿರುವುದು ಶ್ಲಾಘನೀಯ, ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ ಮ್ಯಾನ್ ಆಗಿರುವ, ಅವರನ್ನು ಪುಸ್ತಕ ಓದುವ ರುಚಿಯನ್ನು ಹಚ್ಚುವ ವಿಶೇಷ ಕಾರ್ಯಕ್ರಮ ಪ್ರಾಧಿಕಾರದು ಎಂದು ಜೋಶಿ ಹೇಳಿದರು.
ಕಾರ್ಯಕ್ರಮ ಆಶಯ ನುಡಿಯನ್ನುಆಡುತ್ತಾ ರಾಜ್ಯ ಸದಸ್ಯರಾದ ಬಿ ಎಚ್ ನೀರಗುಡಿ ಅವರು ಮಾತನಾಡಿ ಪುಸ್ತಕ ಪ್ರಾಧಿಕಾರ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ಅಂಗಳದಲ್ಲಿ ತಿಂಗಳ ಪುಸ್ತಕ ವಿಶೇಷ ಕಾರ್ಯಕ್ರಮಗಳ ಹಮ್ಮಿಕೊಳ್ಳೊದರ ಜೊತೆಗೆ ಈ ಭಾಗದ ಸಾಹಿತಿಗಳ ಸಂಪುಟಗಳನ್ನು ಹೊರ ತರುವುದು ಶಾಲಾ-ಕಾಲೇಜುಗಳಲ್ಲಿ ನನ್ನ ನೆಚ್ಚಿನ ಪುಸ್ತಕ , ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ಭಾಗದ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವುದು.ಮನೆ ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಮಾಡುವುದು ಅವರನ್ನು ಪ್ರಾಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸುವದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿಗಳಾದ ಡಾ ವಿಜಯಕುಮಾರ್ ಪರುತೆ ಅವರು ಮಾತನಾಡುತ್ತಾ ಮನೆ ಮನೆಗಳಲ್ಲಿ ಗ್ರಂಥಾಲಯ ನಿರ್ಮಾಣ ಆಗಬೇಕು ಪುಸ್ತಕಗಳಿಂದ ಮನುಷ್ಯನ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿದ ಹಿರಿಯ ಸಾಹಿತಿ ನರಸಿಂಗರಾವ್ ಹೇಮನೂರ ಅವರು ಸಾಹಿತ್ಯದ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಓದಲು ನೀಡುತ್ತಿದ್ದೇನೆ. ಇನ್ನು ದೊಡ್ಡದಾದ ಗ್ರಂಥಾಲಯ ಮನೆಯಲ್ಲಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದೇನೆ ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎನ್ನುವ ಮನೋಭಾವನೆ ಹೊಂದಿದ್ದೇನೆ ಎಂದು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರಾದ ಡಾ. ಶೋಭಾದೇವಿ ಚೆಕ್ಕಿ ಕಾರ್ಯಕ್ರಮ ನಿರ್ವಹಿಸಿದರು ಕಲ್ಬುರ್ಗಿ ನಗರದಲ್ಲಿ ಸಾವಿರ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಜಾಗೃತ ಸಮಿತಿ ಸದಸ್ಯ ಡಾ ಪರ್ವೀನ್ ಸುಲ್ತಾನಾ , ರೇವಣಸಿದ್ದಪ್ಪ ದುಕಾನ, ಶ್ರೀಶೈಲ ಮದಾನೆ, ವಿಜಯಕುಮಾರ್ ರೋಣದ ಇದ್ದರು.ಸುರೇಶ ಪತ್ತಾರ, ಚಂದ್ರಕಾಂತ ಅಡ್ವೊಕೇಟ್, ಶುಭಾ, ರಾಜೇಶ್,ಸಾವಿತ್ರಿ, ಸುನೀತಾ ಮುಂತಾದವರು ಉಪಸ್ಥಿತರಿದ್ದರು































