
ಬೀದರ: ಕಳೆದ ಐದು ದಿನಗಳಿಂದ ನಗರದ ಚಿಕ್ಕಪೇಟ ಓಣಿಯಲ್ಲಿ ಕುಡಿಯುವ ನೀರು ಬರುತ್ತಿಲ್ಲ. ಈ ಓಣಿಯ ಜನರ ಗೋಳು ಕೇಳಲು ಅಧಿಕಾರಿಗಳು ತಯ್ಯಾರಿಲ್ಲ. ಸಮಸ್ಯೆ ಹೇಳಿಕೊಳ್ಳಲು ಹೋದರೆ ಒಬ್ಬರ ಮೇಲೊಬ್ಬರು ಹಾಕಿಕೊಂಡು ನಿರ್ಲಕ್ಷö?? ತೋರುತಿದ್ದಾರೆ ಎಂದು ಓಣಿಯ ಮುಖಂಡರು ಹಾಗೂ ಪತ್ರಕರ್ತರಾದ ಎಂ.ಪಿ.ಮುದಾಳೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಮಹಾನಗರ ಪಾಲಿಕೆ ಜೆಇ ಸುನೀಲ ಅವರಿಗೆ ಕರೆ ಮಾಡಿದಾಗ ಕಳೆದ ನಾಲ್ಕು ದಿವಸಗಳಿಂದ ರಿಪೇರಿಗಾಗಿ ಕಳುಹಿಸುವೆ ಎಂದು ಸುಳ್ಳು ಹೇಳಿಕೊಂಡು ಕಾಲ ಕಳೆಯುತಿದ್ದಾರೆ. ಗ್ರಾಮಸ್ಥರು ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಕರೆ ಮಾಡಿದರೆ ಕಾಲ್ ರಿಕಾರ್ಡಿಂಗ್ ಮಾಡಿಕೊಂಡು ಜನರಿಗೆ ಹೆದರಿಸುವ ಕೆಲಸ ಮಾಡುತಿದ್ದಾರೆ. ಆದ್ದರಿಂದ ಕೂಡಲೇ ಅವರಿಗೆ ವರ್ಗಾವಣೆ ಮಾಡಬೇಕೆಂದು ಮುದಾಳೆ ಆಗ್ರಹಿಸಿದ್ದಾರೆ. ಕಳಪೆ ಕಾಮಗಾರಿಯಿಂದ ಮತ್ತು ವಿದ್ಯುತ್ ತಂತಿ ಸುಟ್ಟ ಕಾರಣ ಮೋಟಾರು ಬಂದ್ ಆಗಿ ನೀರಿನ ಸಮಸ್ಯೆ ಉಂಟಾಗಿದೆ. ಅದನ್ನು ರಿಪೇರಿ ಮಾಡಿಸುವ ಗೋಜಿಗೂ ಅಧಿಕಾರಿಗಳು ಹೋಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸಭೆಯಲ್ಲಿ ನೀರಿನ ಸಮಸ್ಯೆ ಉಂಟಾಗದAತೆ ನೋಡಿಕೊಳ್ಳಿ ಎಂದು ಹೇಳುತ್ತಾರೆ. ಆದರೆ ಅಧಿಕಾರಿಗಳು ನಮ್ಮ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಲಂಗು ಲಗಾಮಿಲ್ಲದೆ ನಿರ್ಲಕ್ಷö?? ತೋರುತ್ತಿರುವುದು ದುರಂತ. ಇಂತಹ ಮಳೆಗಾಲದಲ್ಲೂ ಚಿಕ್ಕಪೇಟ್ ಓಣಿಯಲ್ಲಿ ನೀರಿನ ಸಮಸ್ಯೆಯಿದೆ ಎಂದು ಹೇಳಿಕೊಳ್ಳಲು ನಮಗೆ ನಾಚಿಕೆಯಾಗುತ್ತಿದೆ ಎಂದು ಮುದಾಳೆ ದೂರಿದ್ದಾರೆ.
ಚಿಕ್ಕಪೇಟೆ ಗ್ರಾಮದಲ್ಲಿ ವಿದ್ಯುತ್ ದೀಪಗಳಿಲ್ಲ. ಓಣಿಯೆಲ್ಲ ಕತ್ತಲೆಯಿಂದ ತುಂಬಿದೆ. ಓಡಾಡಲು ಸರಿಯಾದ ರಸ್ತೆಗಳಿಲ್ಲ. ಜನರು ಕತ್ತಲೆಯಲ್ಲಿ ಬಿದ್ದು ಕೈಕಾಲುಗಳಿಗೆ ಗಾಯ ಮಾಡಿಕೊಳ್ಳುತ್ತಿದ್ದಾರೆ. ಮಳೆಗಾಲ ಇರುವ ಕಾರಣ ಕಾಲುವೆಗಳು ತುಂಬಿ ಹೊಲಸು ನೀರು ರಸ್ತೆ ಮೇಲೆ ನಿಲ್ಲುತ್ತಿವೆ. ಗಬ್ಬು ನಾರುತ್ತಿರುವ ಕಾರಣ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಬಂದಿದೆ. ಚಿಕ್ಕಪೇಟ್ ರಿಂಗ್ ರಸ್ತೆಯಲ್ಲಿ ಡಿವೈಡರ್‌ಗಳಿಲ್ಲ. ಕಾರಣ ಅಪಘಾತಗಳು ಸಂಭವಿಸುತ್ತಿವೆ. ಜನರ ಜೀವಕ್ಕೆ ಹೊಣೆಯಾರು? ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಎಂ.ಪಿ.ಮುದಾಳೆ ಪ್ರಶ್ನೆ ಮಾಡಿದ್ದಾರೆ.































