Home ಜಿಲ್ಲೆ ತಾರತಮ್ಯ ಬೇಡ

ತಾರತಮ್ಯ ಬೇಡ


ಚನ್ನಮ್ಮನ ಕಿತ್ತೂರ,ಅ.೮: ತಾಲೂಕಾಧ್ಯಂತ ರೈತರೆಲ್ಲರೂ ಸರ್ಕಾರದ ಆದೇಶದಂತೆ ರೈಲ್ವೆ ಮಾರ್ಗಕ್ಕಾಗಿ ತಮ್ಮ ಜಮೀನು ನೀಡಿದ್ದಾರೆ. ಆದರೆ ಬೆಳಗಾವಿ ತಾಲೂಕಿನಲ್ಲಿ ರೈತರು ನೀಡಿದ ಜಮೀನಿಗೆ ಪ್ರತಿ ೧ ಎಕರೆಗೆ ರೂ. ೪೫ ಲಕ್ಷ ನೀಡಿದ್ದು ಕಿತ್ತೂರ ತಾಲೂಕಿನ ರೈತರಿಗೆ ೧ ಎಕರೆಗೆ ರೂ. ೩೫ ಲಕ್ಷ ನೀಡುತ್ತಿದ್ದಾರೆ ಏಕೆ ತಾರತಮ್ಯ? ಇದಾಗ ಕೂಡದು ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ಇಲ್ಲಿಯ ರೈತರಿಗೂ ಸಹ ೧ ಎಕರೆಗೆ ರೂ. ೪೫ ಲಕ್ಷದಂತೆ ನೀಡಬೇಕು. ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ನಾವಲಗಟ್ಟಿಯ ರುದ್ರಗೌಡ ಪಾಟೀಲ ಹೇಳಿದರು.


ಗ್ರೇಡ-೨ ತಹಶೀಲ್ದಾರ ಪ್ರಕಾಶ ಕೋರೆಯವರಿಗೆ ಮನವಿ ಸಲ್ಲಿಸಿ ಮಾತನಾಡಿ ಕಛೇರಿಗಳಲ್ಲಿ ರೈತರ ದಾಖಲೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದು ಅದಷ್ಟು ಬೇಗನೇ ದಾಖಲೆಗಳನ್ನು ನೀಡಬೇಕು. ಸರ್ಕಾರ ಇವಾಗಲೇ `ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ’ ಈ ತಾರತಮ್ಯ ನಡೆಸಿದೆ. ಅಂತಹದರಲ್ಲಿ ರೈತರಿಗೆ ನಿಮ್ಮ ಕಛೇರಿಯಿಂದ ದಾಖಲೆ ನೀಡುವುದು ವಿಳಂಬವಾದಲ್ಲಿ ಕರವೇ ಸುಮ್ಮನೆ ಕುಳಿತುಕೊಳ್ಳುವುದಲ್ಲ ಇಡೀ ರಾಜ್ಯಾಧ್ಯಾಂತ ಉಗ್ರ ಹೋರಾಟ ಪ್ರತಿಭಟಿಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈಗಾಗಲೇ ಸಿಎಂರಿಗೆ, ಶಾಸಕರಿಗೆ, ಕೆನರಾ ಸಂಸದರಿಗೆ, ಜಿಲ್ಲಾಧಿಕಾರಿಗಳಿಗೂ ಪತ್ರದ ಮುಖಾಂತರ ತಿಳಿಸಲಾಗಿದೆ ಎಂದರು.
ಈ ವೇಳೆ ಕರವೇ ಉಪಾಧ್ಯಕ್ಷ ಆನಂದಗೌಡ ಪಾಟೀಲ, ಕಾರ್ಯದರ್ಶಿ ನಿತ್ಯಾನಂದ ಹಿರೇಮಠ, ಕರವೇ ಸರ್ವಸದಸ್ಯರು, ಇತರರಿದ್ದರು.