ಸಂಜೆವಾಣಿ ವಾರ್ತೆ,
ವಿಜಯಪುರ, ಆ.೨: ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುವ ರಾಷ್ಟ್ರೀಯ ಸಹೋದರಿಯರ ದಿನ ಅಂಗವಾಗಿ ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ ಬಂಡೆ ಹಾಗೂ ಶ್ರೀನಿಧಿ ಬಂಡೆ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ವಿಶೇಷವಾಗಿ ದಿನವನ್ನು ಆಚರಿಸಿದರು. ರಾಷ್ಟ್ರೀಯ ಸಹೋದರಿಯರ ದಿನವನ್ನು ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರ ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಜೀವನದಲ್ಲಿ ಹೊಂದಿರುವ ಅನನ್ಯ ಸ್ಥಾನವನ್ನು ಸ್ಮರಿಸಲಾಯಿತು. ಸಹೋದರಿಯರು ನಿಸ್ವಾರ್ಥ ಪ್ರೀತಿ, ಅಚಲ ಬೆಂಬಲ, ವಿಶ್ವಾಸ ಮತ್ತು ಬಾಲ್ಯದ ಅಮೂಲ್ಯ ನೆನಪುಗಳ ಪ್ರತೀಕವಾಗಿದ್ದಾರೆ. ಜೀವನದ ಸುಖ-ದುಃಖಗಳಲ್ಲಿ ಜೊತೆ ನಿಂತು ಧೈರ್ಯ ತುಂಬುವ ಸ್ನೇಹಿತೆ, ಮಾರ್ಗದರ್ಶಕಿ ಹಾಗೂ ಆತ್ಮೀಯ ಬೆಂಬಲವಾಗಿ ಸಹೋದರಿಯರು ಸದಾ ವಿಶೇಷ ಸ್ಥಾನ ಹೊಂದಿದ್ದಾರೆ ಎಂಬ ಸಂದೇಶವನ್ನು ಮಕ್ಕಳು ಹಂಚಿಕೊAಡರು.
ರಾಷ್ಟ್ರೀಯ ಸಹೋದರಿಯರ ದಿನವು ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶೇಷ ಸಂದರ್ಭವಾಗಿದ್ದು, ಪರಸ್ಪರ ಗೌರವ, ಕೃತಜ್ಞತೆ ಮತ್ತು ಆತ್ಮೀಯತೆಯನ್ನು ವ್ಯಕ್ತಪಡಿಸುವ ದಿನವಾಗಿದೆ.