
ಕಲಬುರಗಿ,ಆ,೨: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಖಿಲ ಭಾರತೀಯ ಶಿಕ್ಷಾ ಸಮಾಗಮ ಆಶ್ರಯಲ್ಲಿ (ಎಬಿಬಿಎಸ್-೨೦೨೬) ರಾಷ್ಟ್ರೀಯ ಶಿಕ್ಷಣ ನೀತಿ೨೦೨೦ರ ವಿಮರ್ಶೆ ಹಾಗೂ ಯಶಸ್ವಿಯಾಗಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಮಾತನಾಡಿ, ಎನ್‌ಇಪಿ-೨೦೨೦ ಭಾರತೀಯ ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿಯೇ ಒಂದು ಐತಿಹಾಸಿಕ ಹಾಗೂ ಪರಿವರ್ತನಾತ್ಮಕ ಸುಧಾರಣೆಯಾಗಿದೆ ಎಂದು ಅವರು ಹೇಳಿದರು. ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಖಿಲ ಭಾರತೀಯ ಶಿಕ್ಷಾ ಸಮಾಗಮವು ಶಿಕ್ಷಣ ತಜ್ಞರು, ನೀತಿ ನಿರೂಪಕರು, ಉದ್ಯಮ ಮತ್ತು ಸರ್ಕಾರದ ಅಂಗಸAಸ್ಥೆಗಳಿಗೆ ಎನ್.ಇ.ಪಿ ೨೦೨೦ ರ ಅಡಿಯಲ್ಲಿ ಸಾಧಿಸಲಾದ ಗಮನಾರ್ಹ ಪ್ರಗತಿಯನ್ನು ಪರಿಶೀಲಿಸಲು ಮತ್ತು ಮುಂದಿನ ಮಾರ್ಗವನ್ನು ರೂಪಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ದೇಶದ ಉನ್ನತ ಶಿಕ್ಷಣದಲ್ಲಿ ಬಹುಶಿಸ್ತೀಯ ಆಯ್ಕೆಯ ಸ್ವಾತಂತ್ರö್ಯ, ಮೌಲ್ಯಾಧಾರಿತ ಮತ್ತು ಕೌಶಲ್ಯಾಧಾರಿತ ಪಠ್ಯಕ್ರಮಗಳು, ಅಪ್ರೆಂಟಿಸ್‌ಶಿಪ್ ಅವಕಾಶಗಳು ಮತ್ತು ವಿದ್ಯಾರ್ಥಿ ಕೇಂದ್ರಿತ ಕಲಿಕಾ ಮಾರ್ಗಗಳನ್ನು ಪರಿಚಯಿಸುವ ಮೂಲಕ ರಾಷ್ಟಿçÃಯ ಶಿಕ್ಷಣ ನೀತಿಯು ಇಡೀ ವಿದ್ಯಾರ್ಥಿಗಳ ಸಮೂಹದ ಕಲಿಕಾ ವಿಧಾನವನ್ನೇ ಬದಲಿಸಿದೆ ಇದರಿಂದ ವಿದ್ಯಾರ್ಥಿಗಳನ್ನು ಕೇವಲ ಶಿಕ್ಷಣಕ್ಕಾಗಿ ಮಾತ್ರವಲ್ಲದೇ ಉದ್ಯೋಗಕ್ಕಾಗಿ, ಹೊಸ ನವೋದ್ಯಮ, ಉದ್ಯಮಶೀಲತೆ ಆಧಾರಿತ ಮತ್ತು ವಿದ್ಯಾರ್ಥಿಗಳು ಜೀವನಪರ್ಯಂತ ಕಲಿಕೆಯತ್ತ ಸಿದ್ಧಗೊಳಿಸುತ್ತಿದೆ ಎಂದು ಅವರು ಹೇಳಿದರು.
ಇಂದಿನ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಹಿಂದಿನ ಶಿಕ್ಷಣದ ವ್ಯವಸ್ಥೆಯ ಮಾದರಿಗಿಂತ ಬಹಳ ವಿಭಿನ್ನವಾಗಿದ್ದು, ಎನ್‌ಇಪಿ-೨೦೨೦ ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದೂರದೃಷ್ಟಿತ್ವವನ್ನು ಹಾಗೂ ಸಮಗ್ರ ಬದಲಾವಣೆಗಳನ್ನು ತಂದಿದೆ ಎಂದು ಅವರು ಹೇಳಿದರು.
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ , ಸ್ವಯಂ ಸೇರಿದಂತೆ ಪ್ರಮುಖ ವಿದ್ಯಾರ್ಥಿಸ್ನೇಹಿ ಯೋಜನೆಗಳನ್ನು ನಮ್ಮ ವಿ.ವಿ.ಯಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದ್ದು, ವಿದ್ಯಾರ್ಥಿಗಳು ಡಿಜಿಟಲ್ ಹಾಗೂ ಹೊಸ ಕಲಿಕಾ ಅವಕಾಶಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದರು.
ಎನ್.ಇ.ಪಿ-೨೦೨೦ ರ ಈ ಆರು ವರ್ಷದ ಯಶಸ್ವಿ ಶೈಕ್ಷಣಿಕ ಪಯಣದಲ್ಲಿ ಶ್ರಮಿಸಿದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಕುಲಪತಿಗಳು ಅಭಿನಂದನೆ ಸಲ್ಲಿಸಿದರು. ಎನ್‌ಇಪಿ ಅಡಿಯಲ್ಲಿ ಆರಂಭವಾದ ನಾಲ್ಕು ವರ್ಷದ ಸ್ನಾತಕ ಪದವಿ (ಯುಜಿ) ಕಾರ್ಯಕ್ರಮದ ಮೊದಲ ಬ್ಯಾಚ್ ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ಯಶಸ್ವಿಯಾಗಿ ಪೂರೈಸಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ನಮ್ಮ ವಿಶ್ವವಿದ್ಯಾಲಯದ ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ ಸೌಲಭ್ಯಗಳು ಹಾಗೂ ಒಂದು ದೇಶ-ಒಂದು ಚಂದಾದಾರಿಕೆವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ವಿಶೇಷವಾಗಿ ಕಲಾ ವಿಭಾಗದ ವಿದ್ಯಾರ್ಥಿಗಳು ವಿಜ್ಞಾನ ಸಂಬAಧಿತ ಕೋರ್ಸ್ಗಳನ್ನು ಕೂಡ ಅಧ್ಯಯನ ಮಾಡಬೇಕು ಇದರಿಂದ ಅಂತರಶಿಸ್ತೀಯ ಕಲಿಕೆ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಭವಿಷ್ಯದ ವೃತ್ತಿಜೀವನದಲ್ಲಿ ಮಹತ್ವದ ಸಹಾಯವಾಗಲಿದೆ. ಎಂದು ಹೇಳಿದರು. ವಿದ್ಯಾರ್ಥಿಗಳು ಶೇ.೭.೫ ಕ್ಕಿಂತ ಹೆಚ್ಚಿನ ಸಿಜಿಪಿಎ ಪಡೆಯಲು ಹಗಲಿರುಳು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ವಿ.ವಿ.ಯ ಪರೀಕ್ಷಾ ನಿಯಂತ್ರಕ (ಪ್ರಭಾರ) ಪ್ರೊ. ಭರತ್ ಕುಮಾರ್ ಮಾತನಾಡಿ, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ) ವ್ಯವಸ್ಥೆಯ ಸಂಪೂರ್ಣ ಕಾರ್ಯವೈಖರಿ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳ ಕೋರ್ಸ್ಗಳು ಪೂರ್ಣಗೊಂಡ ಬಳಿಕ ಶೈಕ್ಷಣಿಕ ಕ್ರೆಡಿಟ್‌ಗಳು ಸ್ವಯಂಚಾಲಿತವಾಗಿ ವಿದ್ಯಾರ್ಥಿಗಳ ಎಬಿಸಿ ಖಾತೆಗೆ ಜಮೆಯಾಗುತ್ತವೆ. ಇದರಿಂದ ಆನ್‌ಲೈನ್ ಮತ್ತು ಆಫ್‌ಲೈನ್ ಕಲಿಕೆಯ ಸಮನ್ವಯ ಸಾಧ್ಯವಾಗುತ್ತದೆ ಹಾಗೂ ವಿದ್ಯಾರ್ಥಿ ಸ್ನೇಹಿ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಮತ್ತಷ್ಟು ಇದರಿಂದ ಬಲಗೊಳ್ಳುತ್ತದೆ ಎಂದು ಹೇಳಿದರು.
ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಸಂದೀಪ್ ಸ್ವಯಂ ಪೋರ್ಟಲ್ ಕುರಿತು ಮಾಹಿತಿ ನೀಡಿ, ನಮ್ಮ ಸಿಯುಕೆಯಲ್ಲಿ ಈಗಾಗಲೇ ಸ್ವಯಂ ಆಧಾರಿತ ಪರೀಕ್ಷಾ ಸುಧಾರಣೆಗಳನ್ನು ಜಾರಿಗೆ ತರಲಾಗಿದ್ದು, ಸುಮಾರು ೮೦೦ ಪ್ರಥಮ ವರ್ಷದ ವಿದ್ಯಾರ್ಥಿಗಳು ಸ್ವಯಂ ಯೋಜನೆಯಡಿ ನೋಂದಾಯಿಸಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪ್ರಭಾರ ಕುಲಸಚಿವರಾದ ಪ್ರೊ. ವೆಂಕಟ ರಮಣ ದೊಡ್ಡಿ ಅವರು ಮಾತನಾಡಿ, ಹಿಂದಿನ ಹಾಗೂ ಇಂದಿನ ಪ್ರಸ್ತುತ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ರಚನೆಗಳನ್ನು ಹೋಲಿಸಿ ವಿವರವಾಗಿ ಮಾತನಾಡಿದರು. ಎನ್‌ಇಪಿ-೨೦೨೦ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿ, ಕೌಶಲ್ಯ, ಮೌಲ್ಯ ಆಧಾರಿತ ಮತ್ತು ವೃತ್ತಿ ಆಧಾರಿತ, ವಿದ್ಯಾರ್ಥಿಗಳ ಭವಿಷ್ಯದ ಅನುಗುಣವಾಗಿ ಪಠ್ಯ ಹಾಗೂ ಕೋರ್ಸ್ಗಳ ಆಯ್ಕೆ ಮಾಡುವ ಸ್ವಾತಂತ್ರ‍್ಯ ನೀಡಿದೆ ಎಂದು ಹೇಳಿದರು.
ಸಿಯುಕೆಯ ಎನ್‌ಇಪಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಪ್ರೊ. ಚನ್ನವೀರ ಆರ್.ಎಂ. ಅವರು ಮಾತನಾಡಿ ೧೯೬೮ ಮತ್ತು ೧೯೮೮ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗಳ ನಂತರ ಎನ್‌ಇಪಿ-೨೦೨೦ ಮೂರು ದಶಕಗಳಲ್ಲಿನ ಅತ್ಯಂತ ಮಹತ್ವದ ಶೈಕ್ಷಣಿಕ ಸುಧಾರಣೆಯಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಜ್ಞಾನ, ಕೌಶಲ್ಯ, ಉದ್ಯಮಮುಖಿ ಕಲಿಕೆ, ವಿಭಾಗಗಳ ಸಮನ್ವಯ ಹಾಗೂ ಉದ್ಯೋಗಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಈ ನೀತಿಯು ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗ ಹುಡುಕುವವರಾಗಿಯೇ ಅಲ್ಲ, ಉದ್ಯೋಗ ಸೃಷ್ಟಿಸುವವರಾಗಿಯೂ ರೂಪಿಸುವಲ್ಲಿ ಸಹಕಾರಿಯಾಗಿದೆ. ಪಿಎಂ ಫೆಲೋಶಿಪ್‌ಗಳಂತಹ ವಿವಿಧ ಅವಕಾಶಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಹಾಗೂ ಕಾನೂನು ನಿಕಾಯದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಅವರು ಮಾತನಾಡಿ, ಎನ್‌ಇಪಿ-೨೦೨೦ ಯು ಸಾಂಪ್ರದಾಯಿಕ ಗುರುಕುಲ ವ್ಯವಸ್ಥೆಯ ಕಲ್ಪನೆಯಾಗಿದೆ ಎಂದು ಹೇಳಿದರು. ವಿಜ್ಞಾನ ವಿದ್ಯಾರ್ಥಿಗಳು ಕಲಾ ವಿಷಯಗಳನ್ನು ಹಾಗೂ ಕಲಾ ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡುವ ಅವಕಾಶ ನೀಡುವ ಮೂಲಕ ನಿಜವಾದ ಬಹುಶಿಸ್ತೀಯ ಶಿಕ್ಷಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳ ಮಾನಸಿಕ ಒತ್ತಡದ ಪರಿಹಾರಕ್ಕಾಗಿ ಕುಲಪತಿಗಳು ವಿಶೇಷವಾಗಿ ವಿ.ವಿ.ಯಲ್ಲಿ ಕೌನ್ಸಿಲಿಂಗ್ ಕೇಂದ್ರ ಸ್ಥಾಪಿಸಿದ್ದಾರೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು. ವಿ.ವಿ.ಯು ಮಾನಸಿಕ ಒತ್ತಡಮುಕ್ತ ಕ್ಯಾಂಪಸ್‌ನತ್ತ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿ ನೀರವ್ ಕುಮಾರ್ ವಿದ್ಯಾರ್ಥಿ ಸಮುದಾಯದ ಪರವಾಗಿ ಮಾತನಾಡಿದರು.ಎನ್‌ಇಪಿ ಸಂಯೋಜಕರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಎಂ. ಪ್ರಶಾಂತ್ ಅವರು ಸ್ವಾಗತ ಭಾಷಣ ಹಾಗೂ ಸಿಯುಕೆಯ ಎನ್‌ಇಪಿ ಅನುಷ್ಠಾನದ ಸಮಗ್ರ ಅವಲೋಕನವನ್ನು ವಿವರವಾಗಿ ಹೇಳಿದರು. ಡಾ. ಉದಯ್ ಪಾಟೀಲ್ ಕಾರ್ಯಕ್ರಮವನ್ನು ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಆರ್.ಎಸ್.ಹೆಗಡಿ, ಪ್ರೊ.ಎ.ಎನ್.ವಿಜಯಕುಮಾರ್, ಪ್ರೊ.ರೊಮೇಟ್ ಜಾನ್, ಪ್ರೊ.ಜೆಯವೇಲ್ ಎಸ್., ಪ್ರೊ.ಮಹಮ್ಮದ್ ಜೋಹಿಯರ್, ಪ್ರೊ.ಪವಿತ್ರಾ ಆರ್.ಆಲೂರ್, ಪ್ರೊ.ಪಾಂಡುರAಗ ವಿ., ಪ್ರೊ.ದೇವರಾಜಪ್ಪ ಎಸ್., ಪ್ರೊ.ಎಂ.ಅಮರೇAದ್ರ, ಪ್ರೊ.ರಾಜೀವ ಶೇಷ ಜೋಷಿ, ಪ್ರೊ.ವಿಜಯೇಂದ್ರ ಪಾಂಡಾ, ಪ್ರೊ.ಕೆ.ಹನುಮೇಗೌಡ, ಡಾ.ಬಾಬು ನಲ್ಲುಸಾಮಿ, ಡಾ.ಶ್ಯಾಮಲ ಆರ್., ಡಾ.ದೀಪಕ್ ಸ್ಯಾಮ್ಯುಯೆಲ್, ಡಾ.ಸಫಿಯಾ ಪರ್ವೀನ್, ಡಾ.ಶುಷ್ಮಾ ಎಚ್., ಡಾ.ಶೈಲಜಾ, ಡಾ.ಹರೀಶ್ ಹೊಳ್ಳ, ಡಾ.ಪಿ.ಕುಮಾರ್ ಮಂಗಲA, ಡಾ.ತೇಜಸ್ವಿ ಲಕ್ಕುಂಡಿ, ಡಾ.ಪಿ.ರಾಜಲಿಂಗೇಗೌಡ, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ವಂದೇ ಮಾತರಂನೊAದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.






























