Home ಜಿಲ್ಲೆ ಕಲಬುರಗಿ ಡಿ. 20ರಂದು ಕಲಬುರಗಿಯಲ್ಲಿ ‘ನಾರಿ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ

ಡಿ. 20ರಂದು ಕಲಬುರಗಿಯಲ್ಲಿ ‘ನಾರಿ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ (ರಿ), ಬೆಂಗಳೂರು, ಜಿಲ್ಲಾ ಘಟಕ ಕಲಬುರಗಿ ವತಿಯಿಂದ ವಿವಿಧ ಮಹಿಳಾ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಡಿ. 20ರಂದು ನಗರದ ಶರಣಬಸವೇಶ್ವರ ಕೆರೆಯ ಸಮೀಪದ ಡಾ. ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್‍ನಲ್ಲಿ ‘ನಾರಿ ಶಕ್ತಿ ಸಂಗಮ ಮಹಿಳಾ ಸಮ್ಮೇಳನ ಮತ್ತು ಕನ್ನಡ ಸಾಂಸ್ಕೃತಿಕ ಹಬ್ಬ’ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳು ಹಾಗೂ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ‘ವೀರ ಕನ್ನಡಿಗ’ ಹಾಗೂ ‘ವೀರ ಕನ್ನಡತಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಹಾರ ಮೇಳ, ವಿವಿಧ ಮಾರಾಟ ಮಳಿಗೆಗಳು, ವಸ್ತು ಪ್ರದರ್ಶನ ಹಾಗೂ ‘ಸಖೀ ಸೌರಭ’ ಕಾರ್ಯಕ್ರಮವೂ ನಡೆಯಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.
ಕಾರ್ಯಕ್ರಮದ ಪೆÇೀಸ್ಟರ್ ಬಿಡುಗಡೆ ಸಮಾರಂಭವು ನ. 15ರಂದು ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕುಲಪತಿಗಳ ಆಶ್ರಯದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಬಸವರಾಜ ದೇಶಮುಖ, ಡಾ. ಅಲ್ಲಮಪ್ರಭು ದೇಶಮುಖ ಹಾಗೂ ಭಾಲ್ಕಿ ಶ್ರೀಗಳು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ, ಶ್ರೀ ಶರಣಬಸವೇಶ್ವರ ಸಂಸ್ಥಾನ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಪ್ರಾಥಮಿಕ, ಪ್ರೌಢ, ದೈಹಿಕ ಹಾಗೂ ಜಿಪಿಟಿ ಶಿಕ್ಷಕರ ಸಂಘಗಳು, ಸರ್ಕಾರಿ ಮತ್ತು ಅನುದಾನಿತ ಕನ್ನಡ ಹಾಗೂ ಉರ್ದು ಶಿಕ್ಷಕರ ಸಂಘಗಳು, ಎಸ್‍ಸಿ-ಎಸ್‍ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ, ಕನ್ನಡಪರ ಸಂಘಟನೆಗಳು, ಮಹಿಳಾ ಸ್ವಸಹಾಯ ಸಂಘಗಳು, ಹೇಮರೆಡ್ಡಿ ಮಲ್ಲಮ್ಮ ಸ್ವಸಹಾಯ ಸಂಘ, ರೈತ ಸಂಘಟನೆಗಳು, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಂಘಟನೆಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಘಟನೆಗಳು, ಎಬಿವಿಪಿ, ಮಹಾನಗರ ಪಾಲಿಕೆ ಕಾರ್ಮಿಕ ಸಂಘಟನೆ, ಆರೋಗ್ಯ ಬ್ಲಡ್ ಕಾಂಪೆÇನೆಂಟ್ಸ್ ಹಾಗೂ ಕನಸು ಸೇವಾ ಸಂಸ್ಥೆ ಸೇರಿದಂತೆ ಅನೇಕ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಆಹಾರ ಮೇಳ ಹಾಗೂ ವಿವಿಧ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಆಸಕ್ತರು 7411176831, 9845695023, 9591632789, 9900761665 ಹಾಗೂ 9980391324 ಸಂಖ್ಯೆಗಳ ಸಂಪರ್ಕಿಸಬಹುದು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಸಂಘಟನೆಗಳು ಕೈಜೋಡಿಸಬೇಕು ಎಂದು ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ನಂದಿನಿ ಸನಬಾಳಾ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸವಿತಾ ಬಿ. ನಾಸಿ ತಿಳಿಸಿದ್ದಾರೆ.