
ಸೇಡಂ, ನ,19: ಜೀವನದಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ನಮ್ಮ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಬೇಕು.ಆಧುನಿಕ ಸಮೂಹ ಮಾಧ್ಯಮಗಳನ್ನು ಧನಾತ್ಮಕವಾಗಿ ಹಾಗೂ ಸೃಜನಾತ್ಮಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.ಸೋಲುಗಳನ್ನು ಹಿನ್ನಡೆಯೆಂದು ಭಾವಿಸದೆ, ಗೆಲುವಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಶ್ರೀಮತಿ ನಥಿಬಾಯಿ ಸೀತಾರಾಮ್ ಜೇಠಮಲ್ ತಾಪಾಡಿಯಾ ಮಾತೃಛಾಯಾ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆಯೋಜಿತ ಮಾತೃಸ್ಮೃತಿ ದಿನಾಚರಣೆಯ ಸಂದರ್ಭದಲ್ಲಿ ತಾಪಡಿಯಾ ಪರಿವಾರದ ಶ್ರೀಮತಿ ಪ್ರಾಚೀ ಮಹೇಶ್ವರಿ ತಾಪಡಿಯಾ ಅವರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ಸುನಿತಾ ಕೊಡ್ಲಿಕರ್ ಅವರು ಮಾತೃಸ್ಮೃತಿ ದಿನಾಚರಣೆಯ ಮಹತ್ವ ವಿವರಿಸುತ್ತಾ, ಮಾತೆಯ ರೂಪದಲ್ಲಿ ಭಗವಂತನನ್ನು ಕಂಡು, ಸಮಾಜಮುಖಿ ಕೆಲಸದಲ್ಲಿ ತೊಡಗಿ ಸದಾ ಸ್ಮರಣಿಯರಾಗಬೇಕೆಂದರು.ಶಾಲೆಯ ಹಿರಿಯ ವಿದ್ಯಾರ್ಥಿ, ಶ್ರೀಮತಿ ಅನುಷಾ ಪಾಟೀಲ ಅವರು ಮಾತನಾಡಿ, ಜೀವನದಲ್ಲಿ ಶಿಸ್ತು, ಸoಯಮ, ಜವಾಬ್ದಾರಿ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಂಡರೆ ಯಶಸ್ಸು ಖಂಡಿತ ಎಂದರು.ಪೂಜ್ಯ ಶ್ರೀ ಸದಾಶಿವ ಶ್ರೀಗಳು ಆಶೀರ್ವಚನ ನೀಡಿ ಪ್ರೀತಿ, ಮಮತೆ, ಕರುಣೆ, ತ್ಯಾಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶ್ರೀಮತಿ ಅನುರಾದಾ ಪಾಟೀಲ ಅವರು ಅಧ್ಯಕ್ಷಿಯ ಮಾತುಗಳನ್ನಾಡಿದರು. ಪ್ರಾಚಾರ್ಯರಾದ ಶ್ರೀಮತಿ ಗಿರಿಜಾ ಕೆ. ಸ್ವಾಗತ, ಮುಖ್ಯ ಗುರುಗಳಾದ ಶ್ರೀ ಮನ್ಸೂರ್ ಆವಂಟಿ ಪ್ರಾಸ್ತಾವಿಕ, ವಿದ್ಯಾರ್ಥಿನಿ ಕು ಅನನ್ಯ ಹಾಗೂ ಸಂಗಡಿಗರು ಪ್ರಾರ್ಥನೆ, ರಾಜಕುಮಾರ ಚೆನ್ನಿರ ನಿರೂಪಣೆ, ಶ್ರೀಮತಿ ಮಂಜುಳಾ ಪಾಟೀಲ ವಂದನಾರ್ಪಣೆಗೈದರು.




















