Home ಜಿಲ್ಲೆ ಕಲಬುರಗಿ ಸಾಮಾಜಿಕ ಜ್ಞಾನ ಒದಗಿಸುವ ಶಿಕ್ಷಣ ಇಂದಿನ ಅಗತ್ಯ

ಸಾಮಾಜಿಕ ಜ್ಞಾನ ಒದಗಿಸುವ ಶಿಕ್ಷಣ ಇಂದಿನ ಅಗತ್ಯ

ವಾಡಿ: ಸಾಂಸ್ಕøತಿಕ ಅಧಃಪತನದಿಂದ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಮೇಲೆ ಸುಸಂಸ್ಕತಿ ಸವಾರಿ ಮಾಡುತ್ತಿದೆ. ಮಕ್ಕಳಿಗೆ ಸಾಮಾಜಿಕ ಜ್ಞಾನ ಒದಗಿಸುವ ವೈಚಾರಿಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಪತ್ರಕರ್ತ ರಾಯಣ್ಣ ಕಮರವಾಡಿ ಹೇಳಿದರು.

ಪಟ್ಟಣದ ಶ್ರೀ ಬಸವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ್ದ ಬಸವ ಜ್ಞಾನ ಪರಂಪರೆ ಹಾಗೂ ಮಕ್ಕಳ ಮಾದರಿ ವಸ್ತುಪ್ರದರ್ಶನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಬದಲಾದ ವ್ಯವಸ್ಥೆಯಲ್ಲಿ ನಾವಿಂದು ಶಿಕ್ಷಣದಲ್ಲೂ ಹೊಸ ಬದಲಾವಣೆಗಳೇನು ಕಾಣುತ್ತಿದ್ದೇವೆ. ಮಕ್ಕಳನ್ನು ಯಾಂತ್ರಿಕರನ್ನಾಗಿಸುವ ಅಂಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ ವೈಜ್ಞಾನಿಕ ಮನೋಭಾವ ಸೃಷ್ಟಿಸುವ ಮತ್ತು ಕೌಶಲ್ಯ ಜ್ಞಾನಕ್ಕೆ ಉತ್ತೇಜನ ನೀಡುವ ಶಿಕ್ಷಣ ಕಣ್ಮರೆಯಾಗುತ್ತಿದೆ. ಮಕ್ಕಳಲ್ಲಿ ಮತ್ತು ಪೆÇೀಷಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಪ್ರಯತ್ನವಾಗಿ ಪ್ರದರ್ಶನಗಳನ್ನು ಹೆಚ್ಚು ಹೆಚ್ಚು ಆಯೋಜನೆಗೊಳ್ಳಬೇಕು. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರಂತೆ ಶ್ರೀ ಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಪಾಟೀಲ ಹಾಗೂ ಕಾರ್ಯದರ್ಶಿ ರಜನಿ ಪಾಟೀಲ್ ಅವರು ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆ ಶ್ರಮಿಸಲಿ ಎಂದರು.

ಶ್ರೀ ಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಪಾಟೀಲ, ಮುಖ್ಯ ಅತಿಥಿಗಳಾಗಿದ್ದ ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ ಇಂಧೂರ, ಪ್ರಗತಿಪರ ಚಿಂತಕ ಸಾಯಬಣ್ಣ ಗುಡುಬಾ, ಮಡಿವಾಳಪ್ಪ ಹೇರೂರ ಮಾತನಾಡಿದರು. ಇಂಗಳೇಶ್ವರ ಆಸ್ಪತ್ರೆಯ ಡಾ.ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಸಂಸ್ಥೆಯ ಕಾರ್ಯದರ್ಶಿ ರಜನಿ ಜೆ.ಪಾಟೀಲ್, ಪ್ರಾಂಶುಪಾಲೆ ಕವಿತಾ ಪಾಟೀಲ ರದ್ದೇವಾಡಿ, ವಿನ್ನೀ ಪರ್ಷಿಸ್ ಸೇರಿದಂತೆ ಶಿಕ್ಷಕರು ಹಾಗೂ ಪೆÇೀಷಕರು ಪಾಲ್ಗೊಂಡಿದ್ದರು. ಶಿಕ್ಷಕ ರಾಘವೇಂದ್ರ ಪತ್ತಾರ, ಸರಸ್ವತಿ ಚಿತ್ತಾಪುರ ನಿರೂಪಿಸಿದರು. ಲಕ್ಷ್ಮೀ ಬೆನಕೊಂಡ ವಂದಿಸಿದರು. 180 ವಿದ್ಯಾರ್ಥಿಗಳು ವಸ್ತುಪ್ರದರ್ಶನಲ್ಲಿ ಪಾಲ್ಗೊಂಡಿದ್ದರು.