Home ಜಿಲ್ಲೆ ಕಲಬುರಗಿ ಕೊಲೆ; ಐವರು ಆರೋಪಿಗಳ ಬಂಧನ

ಕೊಲೆ; ಐವರು ಆರೋಪಿಗಳ ಬಂಧನ

ಕಲಬುರಗಿ,ಜು.29-ನಗರದ ಸೇಡಂ ರಸ್ತೆಯ ವೈನ್‍ಶಾಪ್ ಹತ್ತಿರ ಜು.26 ರಂದು ನಡೆದ ಆದರ್ಶ ನಗರದ ರವಿಚಂದ್ರ ಗುತ್ತೇದಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಎಂ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಕೆಬಿಎನ್ ದರ್ಗಾ ಬಳಿಯ ಚೌಕಿ ಮಜೀದ್ ಏರಿಯಾ ನಿವಾಸಿ ಅಬ್ದುಲ್ ಇಮ್ತಿಯಾಜ್ ತಂದೆ ಅಬ್ದುಲ್ ಅಬುಮಿಯಾ ಘನಿ (38), ಛೋಟಾ ರೋಜಾದ ಅಬ್ದುಲ್ ಸಮೀರ್ ತಂದೆ ಚಾಂದಪಟೇಲ್ (29), ಯದುಲ್ಲಾ ಕಾಲೋನಿಯ ಮೊಹ್ಮದ್ ಸರಫರಾಜ್ ತಂದೆ ಮೊಹ್ಮದ್ ವಾಜೀದ್ (29), ಹೈದ್ರಾಬಾದನ ಮೊಹ್ಮದ್ ಖಲೀಲ್ ತಂದೆ ಮೊಹ್ಮದ್ ಜಮೀಲ್ (29) ಮತ್ತು ಮಿಲ್ಲತ್ ನಗರದ ಮೊಹ್ಮದ್ ಫಸಿಯೋದ್ದಿನ್ ತಂದೆ ಮೊಹ್ಮದ್ ಖಾಜಾ ಮೈನೋದ್ದೀನ್ (34) ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿದ ಆಟೋ ರಿಕ್ಷಾ ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಳೆ ವೈಷಮ್ಯದಿಂದ ರವಿಚಂದ್ರ ಗುತ್ತೇದಾರ ಅವರನ್ನು ಆರೋಪಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಶಿವನಗೌಡ ಪಾಟೀಲ, ಎಂ.ಬಿ.ನಗರ ಪೊಲೀಸ್ ಠಾಣೆ ಪಿಐ ಖಾಜಾ ಹುಸೇನ್ ಮತ್ತು ಸಿಬದಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರು ಶ್ಲಾಘಿಸಿದ್ದಾರೆ.