Home ಜಿಲ್ಲೆ ಕಲಬುರಗಿ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ;ದಂಡ

ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ;ದಂಡ

ಕಲಬುರಗಿ : ಫರಹತಾಬಾದ ಪೆÇಲೀಸ ಠಾಣೆ ವ್ಯಾಪ್ತಿಯ ಹೊನ್ನಕಿರಣಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ ಅಪರಾಧಿ ನಾಗಯ್ಯ ಶಿವಲಿಂಗಯ್ಯ ಸ್ವಾಮಿ (40 ) ಎಂಬುವವರಿಗೆ ನಗರದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ.
ನಾಗಯ್ಯನು ಅದೇ ಗ್ರಾಮದ ಈರಣ್ಣ ಎಂಬ ವ್ಯಕ್ತಿಯೊಂದಿಗೆ ಮನೆ ಕಟ್ಟುವಾಗ ಪಾಯದ ಸಂಬಂಧ ಜಗಳವಾದ ಬಗ್ಗೆ ದ್ವೇಷ ಇಟ್ಟುಕೊಂಡಿದ್ದನು. ಈರಣ್ಣನು ನಾಗಯ್ಯನ ಪತ್ನಿಯೊಂದಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಸಂಬಂಧ ಹೊಂದಿದ್ದಾನೆಂಬ ಕಾರಣದಿಂದ 2024 ರ ಏಪ್ರಿಲ್ 17 ರಂದು ಗ್ರಾಮದ ಗುಂಡದಾರಿ ಹಳ್ಳದಲ್ಲಿರುವ ಹ್ಯಾಂಡ ಪಂಪಿಗೆ ಹೋಗಿ ನೀರು ತರಲು ಹೋದಾಗ ಈರಣ್ಣನ ಕೊಲೆ ಮಾಡಿರುತ್ತಾನೆ.
ಈ ಬಗ್ಗೆ ಫರಹತಾಬಾದ ಪೆÇಲೀಸ ಠಾಣೆಯಲ್ಲಿ ಮೃತನ ತಾಯಿ ಪ್ರಕರಣ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ನಂತರ ಪ್ರಕರಣದ ವಿಚಾರಣೆಯನ್ನು ನಡೆಸಿದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎ.ವಿ.ಶ್ರೀನಾಥ ಅವರು ಸಾಕ್ಷ್ಯಾಧಾರಗಳನ್ನು ಪರಾಮಾರ್ಷಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಎಸ್. ಆರ್ ನರಸಿಂಹಲು ಅವರು ವಾದ ಮಂಡಿಸಿದ್ದರು.