Home ಜಿಲ್ಲೆ ಚಡಚಣ ಪಟ್ಟಣದಲ್ಲಿ ರೈತರ ಸಂಪರ್ಕ ಕೇಂದ್ರದಲ್ಲಿ ರಸಗೊಬ್ಬರ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಸಭೆ

ಚಡಚಣ ಪಟ್ಟಣದಲ್ಲಿ ರೈತರ ಸಂಪರ್ಕ ಕೇಂದ್ರದಲ್ಲಿ ರಸಗೊಬ್ಬರ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಸಭೆ

ಚಡಚಣ, ಜೂ.೩- ಈ ಬಾರಿ ಮುಂಗಾರು ೨೦೨೬- ೨೭ ಸಾಲಿನ ಹಂಗಾಮಿ ರಸಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ವಿತರಿಸಲು ಚಡಚಣ ತಾಲೂಕಿನ ಎಲ್ಲ ವಿತರಕರನ್ನು ಕರಾಸಲಾಯಿತು ಸಭೆಯ ಅಧ್ಯಕ್ಷತಯನ್ನು ಉಪ ಕೃಷಿ ನಿರ್ದೇಶಕರಾದ ಶ್ರೀ ಚಂದ್ರಕಾAತ ಪವಾರ ಅವರು ವಹಿಸಿಕೊಂಡಿದ್ದರು ಮತ್ತು ಕೃಷಿ ಅಧಿಕಾರಿಗಳಾದ ಶ್ರೀ ದಾನಪ್ಪ ಕತ್ನಳ್ಳಿ ಅವರು ಮಾತನಾಡಿ ಚಡಚಣ ತಾಲೂಕಿನಲ್ಲಿ ಮುಂಗಾರು ಹಂಗಾಮಿ ರಸ ಗೊಬ್ಬರ ಸರಬರಾಜು ಮತ್ತು ವಿತರಣೆ ಬಗ್ಗೆ ನಮ್ಮ ಅಂಗಡಿಗಳಲ್ಲಿ ಸೂಕ್ತ ನಿಯಮ ಪಾಲಿಸಬೇಕು ಮತ್ತು ಕಲಿಸಬೇಕೆಂದು ಸೂಚಿಸಿದರು ನಂತರ ಇಂಡಿ ಉಪ ನಿರ್ದೇಶಕರಾದ ಶ್ರೀ ಚಂದ್ರಕಾAತ ಪವಾರ ಅವರು ರಸಗೊಬ್ಬರ ವಿಚಾರಕರು ನಿಯಮ ಪ್ರಕಾರ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು ಮತ್ತು ರೈತರಿಗೆ ವಿತರಣೆ ಮಾಡಬೇಕು ಮತ್ತು ರಸಗೊಬ್ಬರ ನಿಯಮಗಳನ್ನು ಕಡ್ಡಾಯವಾಗಿ ತಿಳಿಸಬೇಕು ಎಂದು ರಸಗೊಬ್ಬರ ವಿತರಣೆ ಮಾಡುವವರಿಗೆ ಈ ನಿಯಮ ಸೂಚಿಸಿದರು ಮತ್ತು ಚಡಚಣ ತಾಲೂಕಿನ ಸುಮಾರು ೩೫ ವಿತರಣೆ ಮಾಡುವವರಿಗೆ ಈ ನಿಯಮಗಳು ರಸಗೊಬ್ಬರ ವ್ಯಾಪಾರಸ್ಥರಿಗೆ ಈ ಸಭೆಯಲ್ಲಿ ಹೇಳಲಾಯಿತು