Home ಜಿಲ್ಲೆ ಕರ್ನಾಟಕದಲ್ಲಿ ಸ್ವತಂತ್ರ ಕನ್ನಡ ರಾಜ್ಯ ಸ್ಥಾಪಿಸಿದ ಮೊದಲ ರಾಜ ಮಯೂರ ವರ್ಮ :ಸುರೇಶ ಚನಶೆಟ್ಟಿ

ಕರ್ನಾಟಕದಲ್ಲಿ ಸ್ವತಂತ್ರ ಕನ್ನಡ ರಾಜ್ಯ ಸ್ಥಾಪಿಸಿದ ಮೊದಲ ರಾಜ ಮಯೂರ ವರ್ಮ :ಸುರೇಶ ಚನಶೆಟ್ಟಿ

ಬೀದರ:ಜೂ.೨:ಇತಿಹಾಸ ಪ್ರಸಿದ್ಧ ರಾಜನಾಗಿದ್ದ ಮಯೂರ ವರ್ಮ ಕದಂಬ ವಂಶದ ಸಂಸ್ಥಾಪಕರಾಗಿದ್ದು ಕರ್ನಾಟಕದಲ್ಲಿ ಸ್ವತಂತ್ರ ಕನ್ನಡ ರಾಜ್ಯ ಸ್ಥಾಪಿಸಿದ ಮೊದಲ ರಾಜ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸುರೇಶ ಚನಶೆಟ್ಟಿ ನುಡಿದರು.
ಅವರು  ಬೀದರ ಜಿಲ್ಲಾ   ಕನ್ನಡ ಸಾಹಿತ್ಯ ಪರಿಷತ್ತು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡಭವನದಲ್ಲಿ ಆಯೋಜಿಸಿದ ಮಯೂರ ವರ್ಮನ ೧೬೮೧ನೆಯ  ಜಯಂತ್ಯುತ್ಸವ ನಿಮಿತ್ತ ಕನ್ನಡ ಸಾಮ್ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಹಿಸಿ ಮಾತನಾಡುತ್ತ ಮಯೂರ ವರ್ಮನು ಬನವಾಸಿಯನ್ನು ಕೇಂದ್ರವಾಗಿಸಿಕೊAಡು ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಈ ರಾಜ್ಯವು ಕರ್ನಾಟಕದ ಮೊದಲ ಸ್ವದೇಶಿ ರಾಜವಂಶಗಳಲ್ಲಿ ಒಂದಾಗಿದ್ದ ಕರ್ನಾಟಕದಲ್ಲಿ ಸ್ವತಂತ್ರ ಆಡಳಿತ ಸ್ಥಾಪನೆ, ಕನ್ನಡ ಸಂಸ್ಕೃತಿ ಮತ್ತು ಆಡಳಿತ ಪರಂಪರೆಗೆ ಬುನಾದಿ ಹಾಕಿ ಬನವಾಸಿಯನ್ನು ರಾಜಧಾನಿಯಾಗಿ ಅಭಿವೃದ್ಧಿಪಡಿಸಿರುವುದು, ಧರ್ಮ, ಶಿಕ್ಷಣ ಮತ್ತು ಕಲೆಗಳಿಗೆ ಪ್ರೋತ್ಸಾಹ ನಿಡಿದ್ದು ಮಯೂರ ವರ್ಮನ ಅಗ್ಗಳಿಕೆಯಾಗಿದೆ. ಕರ್ನಾಟಕದ ಸ್ವಾಭಿಮಾನ ಮತ್ತು ಸ್ವಾತಂತ್ರ‍್ಯದ ಪ್ರತೀಕವಾದ ಈ ದೊರೆ ಕದಂಬರ ಆಡಳಿತದಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡಿದ್ದು ಗಮನಾರ್ಹವಾಗಿದೆ. ಇಂದಿಗೂ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಕದಂಬರ ವೈಭವದ ಸ್ಮಾರಕಗಳು ಹಾಗೂ ದೇವಾಲಯಗಳು ಕಾಣಸಿಗುತ್ತವೆ. ಕರ್ನಾಟಕ ಇತಿಹಾಸದಲ್ಲಿ ಮಯೂರ ವರ್ಮನ ಹೆಸರು ಗೌರವದಿಂದ ಸ್ಮರಿಸುವ ಭಾಗವಾಘಿ ಈ ಸಮಾರಂಭ ಏರ್ಪಡಿಸಲಾಗಿದೆ ಎಂದು ನಡಿದರು. 
ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ ಬಲ್ಲೂರ್ ವಿಶೇಷ ಉಪನ್ಯಾಸ ನೀಡಿ ಮಯೂರ ವರ್ಮ ಜೀವನ ಸಾಧನೆಗಳನ್ನು ವಿವರಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲ್ಯಾಣರಾವ ಚಳಕಾಪುರೆ, ಬೀದರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಟಿ. ಎಂ. ಮಚ್ಚೆಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲ್ಲೂಕು ಕಸಾಪ ಕಾರ್ಯದರ್ಶಿ ಉಮೇಶ ಜಾಬಾ, ಸಂಜುಕುಮಾರ ಅಲ್ಲೂರೆ, ಆನಂದ ಪಾಟೀಲ, ಅಶೋಕ ದೀಡಗೆ ಮೊದಲಾದವರು ಭಾಗವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಮ್. ಎಸ್ ಮನೋಹರ, ಸ್ವಾಗತಿಸಿದರೆ ಜಗನ್ನಥ ಕಮಲಾಪುರೆ ವಂದಿಸಿದರು. ವೀರಶೆಟ್ಟಿ ಚನಶೆಟ್ಟಿ ನಿರೂಪಿಸಿದರು.