Home ಜಿಲ್ಲೆ ಮುಂದಿನ ವೃತ್ತಿ ಜೀವನ ಉತ್ತಮವಾಗಿರಲಿ:ಹಿಚ್ಗೇರಿ

ಮುಂದಿನ ವೃತ್ತಿ ಜೀವನ ಉತ್ತಮವಾಗಿರಲಿ:ಹಿಚ್ಗೇರಿ

ಸೈದಾಪುರ:ಜೂ.೧೬:ಶಿಕ್ಷಕರಾಗಿ ಸೇವಾ ಮನೋಭಾವನೆಯೊಂದಿಗೆ ಸೇವೆ ಸಲ್ಲಿಸುತ್ತಿದ್ದ ಹಸೀನಾ ಬಾನು ಬಡ್ತಿ ಹೊಂದಿರುವುದು ಅವರಲ್ಲಿನ ಜವಬ್ದಾರಿ ಹೆಚ್ಚಾದಂತಾಗಿದೆ. ಮುಂದಿನ ವೃತ್ತಿ ಜೀವನ ಉತ್ತಮವಾಗಿರಲಿ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಲ್ಲಾಭಾಷಾ ಹಿಚ್ಗೇರಿ ಅಭಿಪ್ರಾಯಪಟ್ಟರು.
ಇಲ್ಲಿನ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಹಸೀನಾ ಬಾನು ಅವರು ಕಡೇಚೂರು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯಗುರುಗಳಾಗಿ ಬಡ್ತಿ ಹೊಂದಿ ವರ್ಗಾವಣೆ ಹೊಂದಿದ ನಿಮಿತ್ತಾ ಶಾಲಾ ವತಿಯಿಂದ ಹಮ್ಮಿಕೊಂಡ ಬೀಳ್ಕೊಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದಾಗಿತ್ತು. ಹತ್ತು ವರ್ಷಗಳಿಂದ ನಮ್ಮ ಶಾಲೆಯಲ್ಲಿ ಅವರು ಸಲ್ಲಿಸಿದ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತಾ ಮುಖ್ಯಗುರು ಸಯ್ಯದ್ ಶೇರಅಲಿ, ಸಿದ್ದಲಿಂಗಯ್ಯ ಸ್ವಾಮಿ, ಲಿಂಗನಗೌq,À ಶರಣಬಸಪ್ಪ, ಶ್ರೀನಿವಾಸ್, ಶಾಲಾ ಮುಖ್ಯಗುರು ಪರಕುಂದ ಬೇಗಂ. ಶಿಕ್ಷಕಿ ಖಾಜಾ ಬೇಗಮ್, ಮಂಜುಳಾ ಗಂಗಮ್ಮ, ಶೃತಿ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.