
ನಗರದ ಮಾಗಡಿ ರಸ್ತೆಯ, ವಿದ್ಯಾರಣ್ಯ ನಗರದಲ್ಲಿರುವ ಸೆಂಟ್ ಪ್ಲವರ್‍ಸ್ ಹೈಸ್ಕೂಲ್ ನಲ್ಲಿ ಪುಟ್ಟ ಮಕ್ಕಳಿಗೆ ನಡೆದ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಶ್ರೀ ಮುತ್ತಾಂಜನೇಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮೋಹನ ಸ್ವಾಮೀಜಿಯವರು ಉದ್ಘಾಟಿಸಿದರು. ಶಾಲೆ ಸಂಸ್ಥಾಪಕ ಡಾ. ಜಿ.ಆರ್. ಕೃಷ್ಣಪ್ಪ, ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಕೃಷ್ಣ, ಪ್ರಾಂಶುಪಾಲರು, ಶಿಕ್ಷಕರು ಉಪಸ್ಥಿತರಿದ್ದರು.


























