Home ಜಿಲ್ಲೆ ಉಚಿತ ಬಸ್‌ಪಾಸ್ ಅರ್ಜಿ ಸಲ್ಲಿಕೆ: ತಾಂತ್ರಿಕ ಸಮಸ್ಯೆ ಸರಿಪಡಿಸಲು ಆಗ್ರಹ

ಉಚಿತ ಬಸ್‌ಪಾಸ್ ಅರ್ಜಿ ಸಲ್ಲಿಕೆ: ತಾಂತ್ರಿಕ ಸಮಸ್ಯೆ ಸರಿಪಡಿಸಲು ಆಗ್ರಹ

ಗುರುಮಠಕಲ್,ಜೂ ೧೬: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಅರ್ಜಿ ಸಲ್ಲಿಕೆಯ ತಾಂತ್ರಿಕ ಸಮಸ್ಯೆ ಸರಿಪಡಿಸಲು ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ನಾಗೇಶ್ ಗದ್ದಿಗಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ,ರಾಜ್ಯದ ಇತರೆ ಭಾಗಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದAತೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದೆ. ಆದರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಇನ್ನೂವರೆಗೂ ಸಂಪೂರ್ಣ ಆನ್‌ಲೈನ್ ಬಸ್ ಪಾಸ್ ಸೌಲಭ್ಯ ಲಭ್ಯವಾಗದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದರು.
ಶಾಲಾ-ಕಾಲೇಜುಗಳು ಆರಂಭವಾಗಿ ದಿನಗಳು ಉರುಳುತ್ತಿದ್ದರೂ, ಪಾಸ್ ಇಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ನಗದು ಹಣ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪ್ರತಿವರ್ಷ ತಾಂತ್ರಿಕ ಕಾರಣಗಳನ್ನು ನೀಡಿ ಪಾಸ್ ವಿತರಣೆಯನ್ನು ವಿಳಂಬ ಮಾಡುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆಯೂ ಪ್ರಭಾವ ಬೀರುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆಗೆ ಸರ್ವರ್, ಒಟಿಪಿ ಸಮಸ್ಯೆ ಹಾಗೂ ಹತ್ತುವ ಇಳಿಯುವ ಸ್ಥಳ ಬಗ್ಗೆ ಗೊಂದಲ (ಬೋರ್ಡಿಂಗ್ ಮತ್ತು ಡ್ರಾಪಿಂಗ್ ಪಾಯಿಂಟ್) ಕುರಿತು ತಾಂತ್ರಿಕ ದೋಷಗಳು ಎದುರಾಗಿ ವಿಧ್ಯಾರ್ಥಿಗಳು ದಿನನಿತ್ಯ ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಅಲೆದಾಡುವಂತಾಗಿದೆ,
ಆದಕಾರಣ? ವಿದ್ಯಾರ್ಥಿಗಳಿಗೆ ತಕ್ಷಣವೇ ಸೇವಾ ಸಿಂಧು ಅಥವಾ ಕೆಕೆಆರ್ ಟಿಸಿ ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಮುಕ್ತ ಅವಕಾಶ ನೀಡಬೇಕು.ತಾಂತ್ರಿಕ ಅಡಚಣೆಗಳಿದ್ದರೆ, ತಕ್ಷಣವೇ ಕೌಂಟರ್‌ಗಳ ಮೂಲಕ ಆಫ್‌ಲೈನ್ ಪಾಸ್ ವಿತರಣೆಗಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅವರು
ಆಗ್ರಹಿಸಿದರು.ಮುಂದಿನ ೨-೩ ದಿನಗಳಲ್ಲಿ ಬಸ್ ಪಾಸ್ ಸಮಸ್ಯೆಯನ್ನು ಬಗೆಹರಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ಮಲ್ಲಿಕಾರ್ಜುನ ಕಾಕಲವಾರ, ಕಾಶಪ್ಪ ಭೋಯ, ನರಸಿಂಹಲು ಗಂಗನೋಳ, ಎಸ್ ಪಿ, ಮಹೇಶ್ ಗೌಡ, ಭೀಮಶಪ್ಪ ತಲಾರಿ, ರಾಮುಲು ಕೋಡಿಗಂಟಿ, ಉದಯಕುಮಾರ ಕೊಂಕಲ, ಅಯಾಝ್ ಅಲಿ, ಅಂಜಿ, ಬನ್ನು , ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಇದ್ದರು.