Home ಜಿಲ್ಲೆ ಬೆಂಗಳೂರು ಸಮಾನತೆ ಮೇಲೆ ಬೆಳಕು ಚೆಲ್ಲುವ ಲಕ್ಷ್ಯಯ್ಯರ ಕೃತಿಗಳು

ಸಮಾನತೆ ಮೇಲೆ ಬೆಳಕು ಚೆಲ್ಲುವ ಲಕ್ಷ್ಯಯ್ಯರ ಕೃತಿಗಳು

ಬಂಗಾರಪೇಟೆ.ಜೂ೧೬: ರಾಜ್ಯ ಮಟ್ಟದಲ್ಲಿ ತನ್ನದೇ ಆದ ಕವನ, ಲೇಖನ, ಪುಸ್ತಕಗಳ ರಚನೆಯ ಮೂಲಕ ಕವಿ, ಸಾಹಿತಿಯಾಗಿ ರಾಜ್ಯ ಅರಳು ಸಾಹಿತ್ಯ, ಜಿಲ್ಲಾ ಕನ್ನಡ ರಾಜ್ಯೋತ್ಸವ, ಸದ್ಭಾವನಾ ಪ್ರಶಸ್ತಿ, ಪ್ರಜಾರತ್ನ ಪ್ರಶಸ್ತಿ, ಕನ್ನಡ ಕಟ್ಟಾಳು ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದು ಕೋಲಾರ ಜಿಲ್ಲೆಯಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ ಗಳಲ್ಲಿ ವೈಚಾರಿಕತೆ, ಪ್ರಸ್ತುತ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವ ಹಲವಾರು ಸ್ವಾಸ್ತ್ಯ ಕವನಗಳು ಸಮಾನತೆಯ ಸಮಾಜದ ಮಾರ್ಪಡುವಿಕೆಗೆ ಮುಖ್ಯ ಪಾತ್ರವಾಗಿ ಇಂದು ಕವಿ ಲಕ್ಷ್ಮಯ್ಯ ವಿ ರವರ ಕೃತಿಗಳು ಬೆಳಕು ಚೆಲ್ಲುತ್ತಿವೆ.


ಜಾನಪದ ಕಲಾವಿದ ವೆಂಕಟಾಚಲಪತಿ ರವರ ನೇತೃತ್ವದಲ್ಲಿ ಕೋಲಾರದ ಈ ನೆಲ ಈ ಜಲ ಮತ್ತು ಸಾಂಸ್ಕೃತಿಕ ಸಂಸ್ಥೆ, ದಲಿತ ಸಂಘರ್ಷ ಸಮಿತಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟ ವತಿಯಿಂದ ಹಿರಿಯ ಜಾನಪದ ಹಾಡುಗಾರರು, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು ಆದ ಡಾ ಬಾನಂದೂರು ಕೆಂಪಯ್ಯ ರವರ ೭೫ ನೇ ಜನ್ಮ ದಿನದ ಅಂಗವಾಗಿ ಕೋಲಾರದ ಸುವರ್ಣ ಕನ್ನಡ ಭವನದಲ್ಲಿ ಡಾ ಬಾನಂದೂರು ಕೆಂಪಯ್ಯ ರವರ ಹುಟ್ಟುಹಬ್ಬದಲ್ಲಿ ಮೂಡಲ ಸೀಮೆಯ ಜನಪದ ಗಾಯಕರಿಂದ ಗಂಧರ್ವ ಜಾನಪದ ಗೀತ ಗಾಯನ ಗುಚ್ಚ ಅರ್ಪಣೆಯ ಹಾಡುಗಳ ಸುಗ್ಗಿಯಲ್ಲಿ
ಸ್ವತಃ ಡಾ ಬಾನಂದೂರು ಕೆಂಪಯ್ಯ ರವರಿಂದಲೇ ಕೋಲಾರ ಜಿಲ್ಲೆಯ ಕವಿ ಸಾಹಿತಿ ಆದ “ಲಕ್ಷ್ಮಯ್ಯ ವಿ ರವರಿಗೆ ಬಾನಂದೂರು ಕೆಂಪಯ್ಯ ಪ್ರಶಸ್ತಿ ಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವ ಸನ್ಮಾನ ಮಾಡಿದರು.


ಜಾನಪದ ಕಲಾವಿದ ಡಿ ಆರ್ ರಾಜಪ್ಪ, ಗಾಯಕರು ವೇಮಗಲ್ ನಾರಾಯಣ ಸ್ವಾಮಿ, ಹಿರಿಯ ಪತ್ರಕರ್ತ ಕೆ ಎಸ್ ಗಣೇಶ್,ಎಂಜಿನಿಯರ್ ಮಂಜುನಾಥ್, ಮಾರ್ಜೆನಹಳ್ಳಿ ಬಾಬು, ದಲಿತ ಹೋರಾಟಗಾರರು ಟಿ ವಿಜಯ ಕುಮಾರ್, ಪಂಡಿತ್ ಮುನಿವೆಂಕಟಪ್ಪ, ಡಾ ಶರಣಪ್ಪ ಗಬ್ಬೂರ್,ಗಮನ ಶಾಂತಮ್ಮ, ಗಾಯಕರು ರೆಡ್ಡಪ್ಪ,ಹಾಗೂ ಜಾನಪದ ಗಾಯಕರುಗಳು ಹಾಜರಿದ್ದರು.