Home ಜಿಲ್ಲೆ ಕಲಬುರಗಿ ಮಟಕಾ: ಬಂಧನ

ಮಟಕಾ: ಬಂಧನ

ಕಲಬುರಗಿ,ಆ.3-ನಗರದ ಹುಮನಾಬಾದ ಬೇಸ್ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್‍ಐ ತಾರಾಸಿಂಗ್, ಸಿಬ್ಬಂದಿಗಳಾದ ಸುರೇಶ್, ಅಭಿಷೇಕ್ ಅವರು ದಾಳಿ ನಡೆಸಿ ನಗರದ ಎಪಿಎಂಸಿ ಏರಿಯಾ ನಿವಾಸಿ ವೆಂಕಟ್ ನಾಗನಾಥ ರೋಡೆ (56) ಎಂಬಾತನನ್ನು ಬಂಧಿಸಿ 2,100 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.