Home ಜಿಲ್ಲೆ ಕಲಬುರಗಿ ಸೇಡಂ ತಾಲೂಕಾ ಬರಪೀಡಿತ ಘೋಷಣೆಗೆ ರೈತರ ಬೃಹತ್ ಪ್ರತಿಭಟನೆ: 12 ತಾಸು ರಾಜ್ಯ ಹೆದ್ದಾರಿ ಸ್ತಬ್ಧ,...

ಸೇಡಂ ತಾಲೂಕಾ ಬರಪೀಡಿತ ಘೋಷಣೆಗೆ ರೈತರ ಬೃಹತ್ ಪ್ರತಿಭಟನೆ: 12 ತಾಸು ರಾಜ್ಯ ಹೆದ್ದಾರಿ ಸ್ತಬ್ಧ, ರಾತ್ರಿ 12ಕ್ಕೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್

ಸುರೇಶ್ ಬಿಜನಳ್ಳಿ
ಸೇಡಂ,ಸೆ ,16:ಸೇಡಂ ತಾಲೂಕಾ ತಕ್ಷಣವೇ ಬರಪೀಡಿತ ಪ್ರದೇಶ ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಅಧ್ಯಕ್ಷರಾದ ಶಾಂತಕುಮಾರ ಚನ್ನಕ್ಕಿ ಅವರ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹ ತೀವ್ರ ಸ್ವರೂಪ ಪಡೆದುಕೊಂಡಿತ್ತು, ಎತ್ತಿ ಬಂಡಿ ಹಾಗೂ ಟ್ರ್ಯಾಕ್ಟರ್‍ಗಳನ್ನು ಚಿಂಚೋಳಿ ಕ್ರಾಸ್ ನ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ ಸುಮಾರು 12 ಗಂಟೆಗಳ ಕಾಲ ಸುದೀರ್ಘ ರಸ್ತೆ ತಡೆ ನಡೆಸಿದ ಅನ್ನದಾತರು, ತಾಲೂಕಾಡಳಿತ ಜಿಲ್ಲಾಡಳಿತ ಯಂತ್ರವನ್ನು ಬೆಚ್ಚಿ ಬೀಳಿಸಿದರು.ಬೆಳಿಗ್ಗೆ 10:30 ಕ್ಕೆ ಶ್ರೀ ಕೊತ್ತಲ ಬಸವೇಶ್ವರರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ಚೌರಸ್ತಾ, ಬಸ್ಟ್ಯಾಂಡ್ ಬಸವೇಶ್ವರ ಸರ್ಕಲ್ ಮುಖಾಂತರ ಚಿಂಚೋಳಿ ಕ್ರಾಸ್ ವರೆಗೆ ಪ್ರತಿಭಟನೆಯಲ್ಲಿ ನೂರಾರು ರೈತರು ತಮ್ಮ ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್‍ಗಳೊಂದಿಗೆ ರಾಜ್ಯ ಹೆದ್ದಾರಿಗೆ ಲಗ್ಗೆ ಇಟ್ಟರು. ರಸ್ತೆಯಲ್ಲೇ ಎತ್ತುಗಳಿಗೆ ಹುಲ್ಲು ಹಾಕಿ, ಟ್ರ್ಯಾಕ್ಟರ್‍ಗಳನ್ನು ಸಾಲಾಗಿ ನಿಲ್ಲಿಸಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ತಬ್ಧ ಗೊಳಿಸಿದರು. ಹೆದ್ದಾರಿಯಲ್ಲೇ ಧರಣಿ ಕುಳಿತ ರೈತರು ಭಜನೆ ಮತ್ತು ಜಾನಪದ ಪದಗಳನ್ನು ಹಾಡುವ ಜೊತೆಗೆ ಹಲಗೆಯ ನಾದಕ್ಕೆ ಕುಣಿಯುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು. ಸೇಡಂ ನಗರದಿಂದ ಮಳಖೇಡ ವರೆಗೆ ಹಾಗೂ ಕೊಡ್ಲಾ ಕ್ರಾಸ್ ರಸ್ತೆ ತಡೆಯಿಂದಾಗಿ ಕಿಲೋಮೀಟರ್‍ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಸಾರ್ವಜನಿಕರು ಹಾಗೂ ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೆÇಲೀಸರು ಮತ್ತು ತಹಶೀಲ್ದಾರ್ ಶ್ರೀಮತಿ ಶ್ರೀಯಾಂಕ್ ಧನಶ್ರೀ ಮನವೊಲಿಸಲು ಯತ್ನಿಸಿದರೂ ಜಿಲ್ಲಾಧಿಕಾರಿಗಳೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದು ರೈತರು ಹೋರಾಟ ಮಧ್ಯರಾತ್ರಿ 12 ಗಂಟೆಗೆ ಜಿಲ್ಲಾಧಿಕಾರಿಗಳಾದ ಇಕ್ರಮ್ ಶರೀಫ್ ಅವರು ಸ್ವತಃ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರಾಜ್ಯ ಹೆದ್ದಾರಿಯಲ್ಲೇ ಕುಳಿತಿದ್ದ ರೈತರ ಬಳಿ ತೆರಳಿ ರೈತರಿಂದ 6 ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ತಾಲೂಕಿನ ಬರ ಪರಿಸ್ಥಿತಿಯ ಕುರಿತು ಸರ್ಕಾರಕ್ಕೆ ತಕ್ಷಣವೇ ಸಮಗ್ರ ವರದಿ ಸಲ್ಲಿಸಲಾಗುವುದು ಮತ್ತು ಪರಿಹಾರ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು ನಂತರ ರೈತರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಮಟ್ಟದ ಅಧ್ಯಕ್ಷರಾದ ಶಾಂತಕುಮಾರ ಚನ್ನಕ್ಕಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೇಡಂ ತಾಲೂಕಾ ಬರಪೀಡಿತ ಘೋಷಣೆಗೆ ಒತ್ತಾಯಿಸಿ ಸೇಡಂ ಬಂದ್ ಮಾಡಿ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆಗೆ ಮಹಾತ್ಮ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಬಿಜೆಪಿಯ ಹಿರಿಯ ಮುಖಂಡ ಶಿವಕುಮಾರ್ ಪಾಟೀಲ್ ತೇಲ್ಕೂರ್, ಸೇಡಂ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್ ಆಡಕಿ, ಕಲ್ಯಾಣ ಜನಪದ ವೇದಿಕೆಯ ತಾಲೂಕು ಘಟಕ, ಹಾಗೂ ರಾಜ್ಯ ಉಪಾಧ್ಯಕ್ಷ ವರದ ಸ್ವಾಮಿ, ನೃಪತುಂಗ ನಾಟ್ಯ ಸಂಘ, ವಿವಿಧ ಕನ್ನಡ ಪರ ಸಂಘಟನೆ ಹಾಗೂ ವರ್ತಕರ ಸಂಘ ಎಪಿಎಂಸಿ ಮಾರುಕಟ್ಟೆ ವ್ಯಾಪಾರ ಬಂದು ಮಾಡಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿದರು. ಈ ವೇಳೆಯಲ್ಲಿ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ್ ಬೋಳಶೆಟ್ಟಿ ಭೀಮರಾವ್ ಪಾಟೀಲ್ ಮಳಖೇಡ, ರವಿ ಸೂರವಾರ, ಅಶೋಕ್ ಬಂಡಿ ಬಿಜನಳ್ಳಿ,ಅಮರ ಪಾಟೀಲ್, ದೊಡ್ಡಪ್ಪ ಗೌಡ ಹಳ್ಳಿಖೇಡ, ಶರಣು ಅವಂಟಿ ಮಳಖೇಡ, ಅಮಶೆಟ್ಟಿ ಯಡ್ಡಳ್ಳಿ, ಮೋಹನ್ ರೆಡ್ಡಿ ಬಟಗೇರಾ, ನಾಗೇಂದ್ರಪ್ಪ ಪಾಟೀಲ್ ಕುಕ್ಕುಂದ, ರವಿ ಕಡತಾಲ್, ವಿರೇಶ ಹೂಗಾರ, ಚಂದ್ರಕಾಂತ್ ತೋಟ್ನಳ್ಳಿ, ಸಾಬಣ್ಣ ಹೂಡಾ, ದೇವಿಂದ್ರಪ್ಪ ಗೌಡ , ರಾಜಶೇಖರ್ ಬಂಡಿ, ಅಣಿವೀರಪ್ಪ, ರಾಕೇಶ್ ಕೊರವಾರ, ಕಲ್ಯಾಣಿ ಪೂಜಾರಿ, ಮಂಜುನಾಥ್, ಸೇರಿದಂತೆ ವಿವಿಧ ಹಳ್ಳಿಯ ರೈತರು ಪಾಲ್ಗೊಂಡಿದ್ದರು.

ಸೇಡಂ ತಾಲೂಕ ಬರ ಘೋಷಣೆ ಮಾಡುವಲ್ಲಿ ಸ್ಥಳೀಯ ಆಡಳಿತ ಶಾಸಕರು ವಿಫಲರಾಗಿದ್ದಾರೆ, ಒಂದು ವೇಳೆ ರಾಜ್ಯ ಸರ್ಕಾರ ಸೇಡಂ ತಾಲೂಕು ಬರ ಘೋಷಣೆ ಮಾಡದೇ ಇದ್ದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಮಾಡಲಾಗುವುದು.
ಶಿವಕುಮಾರ್ ಪಾಟೀಲ್ ತೇಲ್ಕೂರ್ ಬಿಜೆಪಿ ಹಿರಿಯ ಮುಖಂಡರು ಸೇಡಂ,

ಸೇಡಂ ತಾಲೂಕಾ ಬರಪೀಡಿತ ಪ್ರದೇಶ ಒತ್ತಾಯಿಸಿದ ರೈತ ಸಂಘಟನೆಗೆ ಸೇಡಂ ಜಿಲ್ಲಾ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡಲಾಗಿದ್ದು ರಾಜ್ಯ ಸರ್ಕಾರ ತಕ್ಷಣ ಸೇಡಂ ತಾಲೂಕವನ್ನು. ಬರ ಪೀಡಿತ ಘೋಷಿಸಬೇಕು.
ವಿಜಯಕುಮಾರ್ ಆಡಕಿ ಸೇಡಂ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರು

ಮಳೆ ಇಲ್ಲದೆ ಬೆಳೆಯು ಇಲ್ಲದೆ ರೈತರು ಕಂಗಳಾಗಿದ್ದು ಅವರ ಬೆಂಬಲಕ್ಕೆ ನಮ್ಮ ವರ್ತಕರ ಸಂಘ ಸಂಪೂರ್ಣ ಬೆಂಬಲವಾಗಿ ನಿಂತಿದೆ, ರಾಜ್ಯ ಸರ್ಕಾರವು ಸೇಡಂ ತಾಲೂಕವನ್ನು ಸಂಪೂರ್ಣ ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು.
ಶಿವಕುಮಾರ್ ಬೋಳಶೆಟ್ಟಿ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಕಾರ್ಯದರ್ಶಿ

ಸೇಡಂ ತಾಲೂಕಾ ಬರ ಪೀಡಿತ ಘೋಷಣೆಗೆ ಒತ್ತಾಯಿಸಿ 12 ಗಂಟೆಗಳ ನಿರಂತರ ಪ್ರತಿಭಟನೆಗೆ ಬೆಂಬಲ ನೀಡಿದ ವಿವಿಧ ಸಂಘದ ಸದಸ್ಯರಿಗೆ, ವಿವಿಧ ಹಳ್ಳಿಯ ರೈತರಿಗೆ, ಪೆÇಲೀಸ್ ಇಲಾಖೆಯವರಿಗೆ, ಮೊದಲನೇದಾಗಿ ಧನ್ಯವಾದಗಳು ತಿಳಿಸುತ್ತೇನೆ, ಪ್ರತಿಯೊಬ್ಬ ರೈತರು ಒಗ್ಗಟ್ಟಿನಿಂದ ಇದ್ದರೆ ರೈತರ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ಪಡೆಯುವಂತ ಪ್ರಯತ್ನ ಸಾಧ್ಯವಾಗುತ್ತದೆ,

ಶಾಂತಕುಮಾರ ಚನ್ನಕ್ಕಿ ತಾಲೂಕಾ ಅಧ್ಯಕ್ಷರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇಡಂ

ರೈತರಿಗೆ ಜಮ ವಾಗಿರುವ ಇನ್ಸೂರೆನ್ಸ್ ಹಣ ವಿವಿಧ ಬ್ಯಾಂಕ್ ಅಧಿಕಾರಿಗಳು ವಿವಿಧ ಸಾಲಕ್ಕೆ ಜಮಾವನೆ ಮಾಡಿಕೊಳ್ಳುತ್ತಿದ್ದಾರೆ ತಕ್ಷಣ ತಡೆಯುವಂತ ಪ್ರಯತ್ನ ನಿಮ್ಮ ಜಿಲ್ಲಾಡಳಿತದಿಂದ ಮಾಡಿ.
ಭೀಮರಾವ್ ಪಾಟೀಲ್ ರೈತರು ಮಳಖೇಡ