Home ಜಿಲ್ಲೆ ಕಲಬುರಗಿ ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ:ನ್ಯಾಯಮೂರ್ತಿ ಆರ್. ದೇವದಾಸ

ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ:ನ್ಯಾಯಮೂರ್ತಿ ಆರ್. ದೇವದಾಸ

ಕಲಬುರಗಿ, ಆ.16: ನ್ಯಾಯಾಂಗ ರಂಗದಲ್ಲಿ ಭ್ರμÁ್ಟಚಾರ ಮುಕ್ತ, ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆಯನ್ನು ರೂಪಿಸಲು ಬಾರ್ ಮತ್ತು ಬೆಂಚ್ ಒಟ್ಟಾಗಿ ಕೆಲಸ ಮಾಡಬೇಕಿದೆ. ನ್ಯಾಯಾಂಗದ ಮೇಲಿರುವ ಸಾರ್ವಜನಿಕರ ಅಚಲ ನಂಬಿಕೆಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಕರ್ನಾಟಕ ಹೈಕೋರ್ಟಿನ ಕಲಬುರಗಿ ಪೀಠದ ಗೌರವಾನ್ವಿತ ಹಿರಿಯ ನ್ಯಾಯಮೂರ್ತಿ ಆರ್. ದೇವದಾಸ ಹೇಳಿದರು.

ಶನಿವಾರ ನಗರದ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ಆವರಣದಲ್ಲಿ ಹಮ್ಮಿಕೊಂಡಿರುವ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕಾನೂನಿನ ವಿಳಂಬವು ನ್ಯಾಯ ನಿರಾಕರಣೆಗೆ ಸಮಾನ. ಈ ಭಾಗದ ಕಡುಬಡವರು, ರೈತರು ಹಾಗೂ ಶೋಷಿತರು ತಮ್ಮ ಹಕ್ಕುಗಳಿಗಾಗಿ ವμರ್Áನುಗಟ್ಟಲೆ ಕಾಯಬಾರದು. ವಕೀಲರು ಅನಗತ್ಯವಾಗಿ ಪ್ರಕರಣಗಳನ್ನು ಮುಂದೂಡುವುದನ್ನು ಕಡಿಮೆ ಮಾಡಿ, ಶೀಘ್ರ ನ್ಯಾಯದಾನ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಸಣ್ಣಪುಟ್ಟ ಜಗಳಗಳನ್ನು ನ್ಯಾಯಾಲಯಕ್ಕೆ ತರುವ ಬದಲು ರಾಜಿ ಸಂಧಾನಗಳ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ. ಇದರಿಂದ ಸಮಾಜದಲ್ಲಿ ಸೌಹಾರ್ದತೆ ಹೆಚ್ಚಿ, ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ.

ಕಲ್ಯಾಣ ಕರ್ನಾಟಕದ ನೆಲದಿಂದ ನ್ಯಾಯದ ಧ್ವನಿ ಎಂದಿಗೂ ಕುಗ್ಗಬಾರದು ಮತ್ತು ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯುವ ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಬೇಕು, 2047ರ ವೇಳೆಗೆ ನಮ್ಮ ದೇಶದ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸುವಾಗ ಭಾರತವನ್ನು ವಿಕಸಿತ ಭಾರತವನ್ನಾಗಿ ನಿರ್ಮಿಸುವುದು ಪ್ರತಿಯೊಬ್ಬರ ಸಂಕಲ್ಪವಾಗಬೇಕು.

ಸ್ವಾತಂತ್ರಹೋರಾಟದ ಐತಿಹಾಸಿಕ ಘಟನೆಗಳನ್ನು ಸ್ಮರಿಸಿದ ಅವರು ದೇಶಭಕ್ತಿಯ ಕಿಚ್ಚು ಹೊತ್ತಿಸಿದ ವಂದೇ ಮಾತರಂ ಗೀತೆಗೆ 150 ವರ್ಷ ಪೂರೈಸಿರುವುದನ್ನು ಉಲ್ಲೇಖಿಸಿದರು. ಈ ಬಾರಿಯ ಸ್ವಾತಂತ್ರದಿನಾಚರಣೆಯು ವಿಕಸಿತ ಭಾರತಕ್ಕಾಗಿ ಯುವಶಕ್ತಿ ಎಂಬ ಪ್ರಮುಖ ಸಂಕಲ್ಪ ದೊಂದಿಗೆ ಮೂಡಿಬಂದಿದೆ ಎಂದರು.

ಇಂದಿನ ಆಧುನಿಕ ಯುಗದಲ್ಲಿ ನ್ಯಾಯಾಲಯಗಳು ಡಿಜಿಟಲ್ ಕ್ರಾಂತಿಗೆ ಸಾಕ್ಷಿಯಾಗಿದ್ದು, ಈ-ಕೋಟ್ರ್ಸ್, ವರ್ಚುವಲ್ ವಿಚಾರಣೆ ಹಾಗೂ ಕ್ವಿಕ್ ಈ-ಫೈಲಿಂಗ್ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಲಾಗಿದೆ. ಗ್ರಾಮೀಣ ಭಾಗದ ಕಕ್ಷಿದಾರರಿಗೆ ಅನುಕೂಲವಾಗುವಂತೆ ಕನ್ನಡ ಭಾμÉಯಲ್ಲಿಯೇ ತೀರ್ಪು ನೀಡಲು ಮತ್ತು ಕಲಾಪ ನಡೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜೂನ್ 1, 2026 ರಿಂದ ಜಾರಿಗೆ ತರಲಾದ ಹಾರ್ಡ್ ಬೋರ್ಡ್ ಫೈಲಿಂಗ್ ಪ್ರಕ್ರಿಯೆಯನ್ನು ಮೂರೂ ಪೀಠಗಳ ಪೈಕಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದ ಹೆಮ್ಮೆ ಕಲಬುರಗಿ ಪೀಠಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.

ಕಲಬುರಗಿ ಪೀಠವು ಆರಂಭಗೊಂಡ 2008 ರ ಜುಲೈ 7 ರಿಂದ 2026ರ ಆಗಸ್ಟ್ 14 ರವರೆಗೆ ಒಟ್ಟು 1,78,631 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 1,54,873 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ವಕೀಲರು ಮತ್ತು ನ್ಯಾಯಾಧೀಶರು ನ್ಯಾಯದಾನ ಎಂಬ ರಥದ ಎರಡು ಚಕ್ರಗಳಿದ್ದಂತೆ. ಉಚಿತ ಕಾನೂನು ನೆರವು ಹಾಗೂ ಲೋಕ್ ಅದಾಲತ್ ಸಕ್ರಿಯ ಬಳಕೆಯ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವುದು ನಮ್ಮ ಹೊಣೆ ಎಂದು ಹೇಳಿದರು.

ನೈಜ ದೇಶಭಕ್ತಿ ಮತ್ತು ಸೌಹಾರ್ದತೆಯಿಂದ ವಿಕಸಿತ ಭಾರತ ಸಾಧ್ಯ ನೈಜ ದೇಶಭಕ್ತಿಯು ಕೇವಲ ಗಡಿಯಲ್ಲಿ ನಿಂತು ಹೋರಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು, ಕಾನೂನನ್ನು ಗೌರವಿಸುವುದು, ಪರಿಸರವನ್ನು ಸ್ವಚ್ಛವಾಗಿಡುವುದು ಹಾಗೂ ಮಹಿಳೆಯರನ್ನು ಗೌರವಿಸುವುದು ಸಹ ದೊಡ್ಡ ದೇಶಭಕ್ತಿಯಾಗಿದೆ ಎಂದರು.

ದ.ರಾ. ಬೇಂದ್ರೆಯವರ ಕವನದ ಸಾಲುಗಳನ್ನು ಸ್ಮರಿಸುತ್ತಾ, ನಮ್ಮ ರಾಷ್ಟ್ರಧ್ವಜವು ಹಿಮಾಲಯದಿಂದ ದಕ್ಷಿಣದ ಜಲರಾಶಿಯವರೆಗೆ ಸದಾ ಹಾರಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯದ ಗೌರವ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ, ಟಿ.ಎನ್.ಇನವಳ್ಳಿ, ಶ್ರೀ ಬೃಂಗೇಶೆ ಎಂ., ಅಪರ ಮಹಾವಿಲೇಖನಾಧಿಕಾರಿಗಳಾದ ಶ್ರೀ ಬಸವರಾಜ ಚೇಂಗಟಿ, ಅಪರ ವಿಲೇಖನಾಧಿಕಾರಿ (ನ್ಯಾಯಾಂಗ) ಶ್ರೀ ಕುಮಾರ ಡಿ.ಕೆ. ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಸ್.ವಿ. ಪಸಾರ, ಉಚ್ಫನ್ಯಾಯಾಲಯ ಘಟಕದ ಉಪಾಧ್ಯಕ್ಷರಾದ ಶ್ರೀ ಅನಂತ ಜಹಾಗೀರದಾರ, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗೌರೀಶ ಎಸ್. ಕಾಶಂಪೂರ, ಸರ್ಕಾರಿ ವಕೀಲರು ಮತ್ತು ಕಿರಿಯ ವಕೀಲರು ಉಚ್ಫನ್ಯಾಯಾಲಯ ಸಿಬ್ಬಂದಿ ವರ್ಗದವರು ಇನ್ನಿತರ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.