Home ಜಿಲ್ಲೆ ಗುರುವಿನಿಂದ ಬದುಕು ಆರಂಭ

ಗುರುವಿನಿಂದ ಬದುಕು ಆರಂಭ

ಬೀದರ್: ಜು.31:ನಮ್ಮ ಬದುಕು ಆರಂಭವಾಗುವುದೇ ಗುರುವಿನಿಂದ ಎಂದು ಹಲಬರ್ಗಾ, ಶಿವಣಿ ಹಾಗೂ ಹೈದರಾಬಾದ್ ಮಠದ ಪೀಠಾಧಿಪತಿ ಡಾ. ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಸಂಸ್ಕಾರ ಕೊಟ್ಟು, ಜ್ಞಾನದ ಮೂರ್ತಿ ಆಗಿಸುವವನೇ ಗುರು ಎಂದು ತಿಳಿಸಿದರು.
ಗುರು ಅಜ್ಞಾನ, ಅಂಧಕಾರಗಳನ್ನು ಕಳೆಯುತ್ತಾನೆ. ಮೋಕ್ಷದ ದಾರಿ ತೋರುತ್ತಾನೆ ಎಂದು ತಿಳಿಸಿದರು.
ಗುರುವಿನ ಅನುಗ್ರಹದಿಂದ ಅಸಾಧ್ಯವೂ ಸಾಧ್ಯವಾಗುತ್ತದೆ. ಭವಸಾಗರ ದಾಟಲು ಗುರುವಿನ ಮಾರ್ಗದರ್ಶನ ಅತ್ಯವಶ್ಯಕ ಎಂದು ಹೇಳಿದರು.
ಭೂ ಲೋಕದಲ್ಲಿ ಗುರುವೇ ಶ್ರೇಷ್ಠ. ಅಂತೆಯೇ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ. ಎಲ್ಲರೂ ಗುರುವಿನ ವಾಣಿ ಆಲಿಸಬೇಕು. ಅವರು ತೋರಿದ ಮಾರ್ಗದಲ್ಲಿ ನಡೆದು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪತ್ರಕರ್ತರಾದ ಅಶೋಕ ರಾಜೋಳೆ, ಸಂತೋಷ್ ಬಿ.ಜಿ. ಪಾಟೀಲ, ಜಯರಾಜ ದಾಬಶೆಟ್ಟಿ, ಮಾಣಿಕ ಮರಕಲೆ, ಇಂದ್ರಜೀತ್ ಪಾಂಚಾಳ್, ಪ್ರವೀಣ್, ದಿಲೀಪ್, ಭದ್ರೇಶ್ ಹಾಗೂ ಇತರರನ್ನು ಸನ್ಮಾನಿಸಲಾಯಿತು.
ಧನ್ನೂರ(ಎಚ್) ಠಾಣೆ ಪಿಎಸ್‍ಐ ರಾಜಕುಮಾರ ಜತಗೊಂಡ ಉದ್ಘಾಟಿಸಿ ಮಾತನಾಡಿದರು. ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ದಾಸೋಹಿ ಗುಂಡಯ್ಯ ಸ್ವಾಮಿ ತರನಳ್ಳಿ ಗುರು ಪೂಜೆ ನೆರವೇರಿಸಿದರು.
ಸೇನೆಯ ಯುವ ಘಟಕದ ಅಧ್ಯಕ್ಷ ಸುದೀಪ್, ಪ್ರಮುಖರಾದ ಗಿರೀಶ್ ಬಿರಾದಾರ, ಬಸವರಾಜ ಕಾರಬಾರಿ, ಅನಿಲ್ ರಾಜಗೀರಾ, ಕಾಶಿನಾಥ ಚಳಕಾಪುರೆ, ಸಂಗಮೇಶ ಮಾರ್ಗೆ, ಸಂಗಮೇಶ ಬಿರಾದಾರ, ಸಂತೋಷ್ ಪಾಟೀಲ, ಅನಿಲ್ ರೆಡ್ಡಿ, ರಾಜು ಕುಂಬಾರ, ಮಹಾರುದ್ರ, ವಿಜಯಕುಮಾರ ಪಾಂಚಾಳ, ರಮೇಶ್ ಸುತಾರ್, ಡಾ. ಪ್ರವೀಣ್, ಡಾ. ಸುಶೀಲಕುಮಾರ, ಮಹೇಶ ಮಠಪತಿ ಮತ್ತಿತರರು ಇದ್ದರು.