Home ಜಿಲ್ಲೆ ಉತ್ತಮ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯಾಗಲಿ : ಕನ್ನಾಳೆ

ಉತ್ತಮ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯಾಗಲಿ : ಕನ್ನಾಳೆ

ಭಾಲ್ಕಿ: ಉತ್ತಮ ತಂತ್ರಜ್ಞಾನದಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆಯುವಂತಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಓ ಮಲ್ಲಿಕಾರ್ಜುನ ಕನ್ನಾಳೆ ಹೇಳಿದರು.
ಪಟ್ಟಣದ ಶಾರದಾ ಶಾಲೆಯಲ್ಲಿ ಬುಧವಾರ ಗುರುಪೂರ್ಣಿಮೆ ನಿಮಿತ್ಯ ಆಯೋಜಿಸಿದ್ದ ಗುರುವಂದನಾ, ಪತ್ರಿಕಾ ದಿನಾಚರಣೆ ಹಾಗು 3ಡಿ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ 3ಡಿ ಲ್ಯಾಬ್ ಸೇರಿದಂತೆ ಇತರೆ ತಂತ್ರಜ್ಞಾನಗಳನ್ನು ಬಳಸುವ ಅವಕಾಶ ಸಿಗುವುದಿಲ್ಲ. ಆದರೆ ಶಾರದಾ ಶಾಲೆಯಲ್ಲಿ ವಸಂತ ಪಾಟೀಲ ನೇತೃತ್ವದಲ್ಲಿ ಉತ್ತಮ ತಂತ್ರಜ್ಞಾನವನ್ನು ಬಳಸಿ ಪಾಠ ಮಾಡುತ್ತಿರುವುದು ಮೆಚ್ಚುವಂತಹ ಕಾರ್ಯವಾಗಿದೆ. ಇಲ್ಲಿಯ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಶಾಲೆಯ ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಪರಿಶ್ರಮವಾಗಿದೆ ಎಂದು ಹೇಳಿದರು.
ಶಾರದಾ ಶಾಲೆಯ ಅಧ್ಯಕ್ಷ ವಸಂತ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿ ಮಹಾದೇವ ಪಟ್ನೆ ಪ್ರಾಸ್ತಾವಿಕನುಡಿ ನುಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಪ್ರಭು ಡಿಗ್ಗೆ, ಅಂಬರೀಶ ಖಂಡ್ರೆ, ಶೈನಾಜ ಬೇಗಂ, ಅಶ್ವಿನಿ ರಾಜೋಳೆ, ಸುಮಿತ್ರಾ ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಶೋಕ ರಾಜೋಳೆ, ಸಂತೋಷ ಬಿಜಿಪಾಟೀಲ, ಜಯರಾಜ ದಾಬಶೆಟ್ಟಿ, ಗಣಪತಿ ಬೋಚರೆ, ಸಂತೋಷ ಬೇಲೂರೆ, ಭದ್ರೇಶ ಗುರಯ್ಯಾ ಸ್ವಾಮಿ ಉಪಸ್ಥಿತರಿದ್ದರು.
ಶೈನಾಜ ಬೇಗಂ ಸ್ವಾಗತಿಸಿದರು. ಸುಮಿತ್ರಾ ಪಾಟೀಲ ನಿರೂಪಿಸಿದರು. ಅಶ್ವಿನಿ ರಾಜೋಳೆ ವಂದಿಸಿದರು.