Home ಜಿಲ್ಲೆ ತದ್ದೇವಾಡಿ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ

ತದ್ದೇವಾಡಿ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ

ಚಡಚಣ,ನ.19: ತಾಲ್ಲೂಕಿನ ತದ್ದೇವಾಡಿ ಗ್ರಾಮದಲ್ಲಿ ಬುಧವಾರ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.
ಈ ಚಿರತೆ ಹಿಡಿಯಲು ವಿಜಯಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ. ಕುಶನಾಳ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಲ್ವರಾಜ್ ನಾಯಕ ಅವರ ಮಾರ್ಗದರ್ಶನದಲ್ಲಿ ಬೋನು ಅಳವಡಿಸಲಾಗಿತ್ತು ಎಂದು ಧುಳೆ ಮಾಹಿತಿ ನೀಡಿದರು.
ಈ ವೇಳೆ, ಚಡಚಣ ತಹಶೀಲ್ದಾರ ಎಸ್ ಎ.ಇಂಗಳೆ, ಚಡಚಣ ಪಿಎಸ್ ಐ ಮಂಜುನಾಥ ತಿರಕನ್ನವರ ಹಾಗೂ ಪೆÇಲೀಸ್ ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿಗಳಾದ ಎಚ್ ಕೆ.ಮಳ್ಳಿ, ಹಣಮಂತ ಲೋಣಿ, ಯಲ್ಲಪ್ಪ, ಸಿಂಧಖೇಡ, ಪ್ರವೀಣ ಹಚ್ಚಾಳಕರ ಹಾಗೂ ನಾಗನಾಥ ಗೌಡ ಬಿರಾದಾರ, ಇದ್ದರು.