Home ಜಿಲ್ಲೆ ಕಲಬುರಗಿ ಸಿಯುಕೆಗೆ ಕನ್ನಡಿಗ ಕುಲಪತಿ ನೇಮಕಕ್ಕೆ ಆಗ್ರಹ

ಸಿಯುಕೆಗೆ ಕನ್ನಡಿಗ ಕುಲಪತಿ ನೇಮಕಕ್ಕೆ ಆಗ್ರಹ

ಕಲಬುರಗಿ,ನ.19: ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಕನ್ನಡಿಗರನ್ನು ಆಯ್ಕೆ ಮಾಡಿ. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ
ಎಂ ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ. ಹಿಂದುಳಿದ ಭಾಗವಾದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ 2009 ರಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ( ಸಿಯುಕೆ) ಸ್ಥಾಪನೆಯಾಗಿದೆ. ಈ ವಿಶ್ವವಿದ್ಯಾಲಯವೂ ಈ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಾಕಷ್ಟು ಪ್ರಯತ್ನ ಪಡುತ್ತಿದೆ. ಹೀಗಾಗಿ ನಮ್ಮ ನಾಡಿನಲ್ಲಿರುವ ವಿಶ್ವವಿದ್ಯಾಲಯಕ್ಕೆ ಕನ್ನಡಿಗರೇ ಕುಲಪತಿಗಳಾದರೆ ಮತ್ತಷ್ಟು ಅನೂಕುಲವಾಗುತ್ತದೆ. ಈ ಮೊದಲು ಕನ್ನಡಿಗರನ್ನೇ ಕುಲಪತಿಗಳನ್ನಾಗಿ ನೇಮಕ ಮಾಡಲಾಗುತ್ತಿತ್ತು.ಆದರೆ ಕಳೆದ ಐದು ವರ್ಷಗಳಿಂದ ಅನ್ಯರಾಜ್ಯವರನ್ನ ಕುಲಪತಿಗಳನ್ನಾಗಿ ನೇಮಿಸಲಾಗುತ್ತಿದೆ. ಇದರಿಂದ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಅಲ್ಲದೇ ಬಹಳಷ್ಟು ಕನ್ನಡಿಗರಿಗೆ ನೇಮಕಾತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನ್ಯಾಯವಾಗಿದೆ. ನೂರಕ್ಕಿಂತ ಹೆಚ್ಚು ಹುದ್ದೆಗಳಲ್ಲಿ ತೆಲಂಗಾಣ,ಆಂಧ್ರದ ಜನರನ್ನೇ ಭರ್ತಿಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ತೆಲಂಗಾಣ,ಆಂಧ್ರದವರಿಗೆ ನೇಮಕವನ್ನು ಮಾಡಿದರೆ ಮತ್ತೊಮ್ಮೆ ಕನ್ನಡಿಗರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಕನ್ನಡಿಗರ ಕಡೆಗಣನೆ ಮುಂದುವರೆಸಿದ್ದೆ ಉಗ್ರಹೋರಾಟ ಮಾಡಲಾಗುವದು ಎಂದಿದ್ದಾರೆ