
ಕಲಬುರಗಿ,ನ.19: ಇಲ್ಲಿನ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ದಾಸವರೇಣ್ಯ ವಿಜಯದಾಸರ ಆರಾಧನಾ ಪ್ರಯುಕ್ತ ಶ್ರೀ ವಿಜಯರಾಯರ ಕವಚ ಪಾರಾಯಣ, ಭಜನೆ ದೀಪೆÇೀತ್ಸವ ನೆರವೇರಿತು. ಅರ್ಚಕರಾದ ಗುಂಡಾಚಾರ್ಯ ನರಿಬೋಳ ಅವರು ಮಾತನಾಡಿ ದಾಸಸಾಹಿತ್ಯಕ್ಕೆ ವಿಜಯದಾಸರ ಕೊಡುಗೆ ಅಪಾರವಾಗಿದೆ. ಪುರಂದರದಾಸರ ನಂತರ ದಾಸಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಬೆಳೆಸಿದರು. ಗೋಪಾಲದಾಸರು, ಜಗನ್ನಾಥದಾಸರು, ಕಲ್ಲೂರು ಸುಬ್ಬಣ್ಣಾಚಾರ್ಯರು, ಹೀಗೆ ಅನೇಕ ದಾಸರಿಗೆ ಮಾರ್ಗದರ್ಶನ ಮಾಡಿದ ಮಹಾಮಹಿಮರು. ಅನೇಕ ಸುಳಾದಿಗಳನ್ನು ರಚನೆ ಮಾಡಿ, ಭಗವಂತನ ಅನೇಕ ನಾಮಗಳನ್ನು ರಚಿಸಿದರು. ಕಠಿಣವಾದ ವ್ಯಾಸಸಾಹಿತ್ಯವನ್ನು ದಾಸ ಸಾಹಿತ್ಯದ ಮೂಲಕ ಸಾಮಾನ್ಯ ಜನರಿಗೆ ತಿಳಿಸಿದವರು ವಿಜಯದಾಸರು ಎಂದರು.
ನರಸಿಂಹಾಚಾರ್ಯ ಅಗ್ನಿಹೋತ್ರಿ, ಗೋಪಾಲರಾವ ತೆಂಗಲಿ, ಮಾಧವಾಚಾರ್ಯ ಗುಡಿ, ಪುರುಷೋತ್ತಮ ಮಠ, ವಿಜಯಕುಮಾರ, ಶಾಮರಾವ್ ಕುಲಕರ್ಣಿ, ಗುರುರಾಜ ಭಂಕೂರ ಸೇರಿದಂತೆ ಭಜನಾ ಮಂಡಳಿಯ ಅನೇಕ ಸದಸ್ಯರು ಭಾಗವಹಿಸಿದ್ದರು.



















