Home ಜಿಲ್ಲೆ ಬೆಂಗಳೂರು ಜಿಲ್ಲಾ ಆಡಳಿತ ನಿರ್ಲಕ್ಷ ವಿರುದ್ದ ಕೆ.ಆರ್.ಎಸ್ ಅಕ್ರೋಶ

ಜಿಲ್ಲಾ ಆಡಳಿತ ನಿರ್ಲಕ್ಷ ವಿರುದ್ದ ಕೆ.ಆರ್.ಎಸ್ ಅಕ್ರೋಶ

ಕೋಲಾರ,ಜೂ,೧೧- ಜಿಲ್ಲೆಯಲ್ಲಿನ ಹಿರಿಯ ಅಧಿಕಾರಿಗಳೇ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸದೆ ನಿರ್ಲಕ್ಷಿಸುತ್ತಿರುವುದರಿಂದ ಜಿಲ್ಲಾ ಆಡಳಿತ ವ್ಯವಸ್ಥೆಗಳು ತೀವ್ರ ಹದಗೆಟ್ಟಿದೆ. ಗ್ರಾಮೀಣ ಜನತೆಯ ಆಸ್ತಿಗಳನ್ನು ಸರ್ಕಾರದ ಆಸ್ತಿಗಳನ್ನು ಸಿಕ್ಕಿದವರು ಲೂಟಿ ಹೊಡೆಯುತ್ತಿದ್ದರೂ ಸಹ ಕ್ರಮ ಕೈಗೊಳ್ಳ ಬೇಕಾದ ಅಧಿಕಾರಿಗಳೇ ಶಾಮೀಲಾಗಿ ಕರ್ತವ್ಯ ಲೋಪವೇಸಗುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು ತೀವ್ರ ಅಕೋಶ ವ್ಯಕ್ತ ಪಡೆಸಿದರು.


ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲೆಯ ಸಾಔತೋಪಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು. ತಾಲ್ಲೂಕು ದಂಡಾಧಿಕಾರಿಗಳು, ಕಂದಾಯಾ ನಿರೀಕ್ಷಕರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷಿಸುತ್ತಿದ್ದಾರೆ ತಮ್ಮ ಸಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವುದನ್ನು ಖಂಡಿಸುತ್ತೇವೆಂದರು.


ಕೋಲಾರ ತಾಲ್ಲೂಕಿನ ಕಸಬಾ ಹೋಬಳಿ ಚೋಳಘಟ್ಟ ಗ್ರಾಮದ ಸರ್ವೆ ಸಂಖ್ಯೆ ೪೯ರಲ್ಲಿ ೩ ಎಕರೆ ೨೦ ಗುಂಟೆ ಜಾಗವನ್ನು ಸಾರ್ವಜನಿಕ ಸ್ಮಶಾನದ ದಾರಿಯೆಂದು ಗುರುತಿಸಿ ಕೊಡುವುದು. ಸರ್ವೆ ಸಂಖ್ಯೆ ೨೬ರಲ್ಲಿ ೨೮ ಗುಂಟೆ ಸರ್ಕಾರಿ ಗುಂಡು ತೋಪು ಒತ್ತುವರಿ ತೆರವು ಮಾಡಿಸಲು ಕಳೆದ ವರ್ಷ ತಾಲ್ಲೂಕು ದಂಡಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಜಿಲ್ಲಾಕಛೇರಿಗೆ ಹಲವಾರು ಬಾರಿ ಅಲೆದಾಡಿ ಸುಸ್ತಾಗಿ ಪ್ರತಿಭಟನೆ ನಡೆಸಿದರೂ ಸಹ ಯಾವೂದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡೆಸಿದರು.


ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ ೩೪.೧೯.೪ ಮತ್ತು ೧೫ರಲ್ಲಿಯ ಸರ್ಕಾರಿ ಆಸ್ತಿಗಳು ಒತ್ತುವರಿಯಾಗಿದ್ದು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಂದಾಯ ನಿರೀಕ್ಷಕರು ಮತ್ತು ಭೂ ಮಾಪಕರು ಸರ್ವೆ ಮಾಡುವ ಬದಲು ಒತ್ತುವರಿದಾರರ ಮನೆಗಳಲ್ಲಿ ಸಭೆ ನಡೆಸಿ ಸರ್ವೆ ಮಾಡದೆ ಹೋಗಿದ್ದಾರೆ ಎಂದು ಆರೋಪಿಸಿದರು.


ತಾಲ್ಲೂಕಿನ ಗದ್ದೆಕಣ್ಣೂರು ಗ್ರಾಮದ ಸರ್ವೆ ಸಂಖ್ಯೆ ೧೭೭ರಲ್ಲಿಯ ಓಣಿ ಇರುವುದನ್ನು ಸಾರ್ವಜನಿಕರು ತಿಳಿಸಿದರೂ ಸಹ ಸರ್ವೇ ಮಾಡಿ ಗುರುತಿಸಿ ಕೊಡುವಂತ ಕಾಳಜಿ ತೋರಲಿಲ್ಲ ಇದರಿಂದ ಅಕ್ಕಪಕ್ಕದ ಖಾತೆದಾರರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ದೂರಿದರು.


ತಾಲ್ಲೂಕಿನ ಅಬ್ಬಣಿ ಗ್ರಾಮದ ಸರ್ವೆ ನಂ ೨೪೨ರಲ್ಲಿ ಸುಮಾರು ೩ ಎಕರೆ ೧ ಗುಂಟೆ ಸರ್ಕಾರಿ ಗುಂಡು ತೋಪು ಒತ್ತುವರಿಯಾಗಿದ್ದು ತೆರವುಗೊಳಿಸಿ ಒತ್ತುವರಿದಾರರ ವಿರುದ್ದ ಕ್ರಮ ಜರುಗಿಸಿ ಮನೆಗಳವರಿಗೆ ದಾರಿ ಗುರುತಿಸಿ ಕೊಡದೆ ಪ್ರಭಾವಿಗಳಿಗೆ ಮಣೆ ಹಾಕುವಂತ ಕೆಲಸ ಮಾಡುತ್ತಿದ್ದಾರೆಂದು ಕಿಡಿಕಾರಿದರು.


ಕಳೆದ ಒಂದು ಶತಮಾನದ ಇತಿಹಾಸವುಲ್ಲ ೧೦ ಗ್ರಾಂಗಳ ೭ ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಉಪಯುಕ್ತವಾಗಿರುವ ಬಾನಹಳ್ಳಿ ಸರ್ವೆ ನಂ ೨೩೪ ಹಾಗೂ ಜಕ್ಕಸಂದ್ರ ಸರ್ವೆ ನಂ ೯೫ರಲ್ಲಿ ಸುಮಾರು ೬೦ ಎಕರೆ ವಿಸ್ತೀರ್ಣಾದ ದೊಡ್ಡ ಕರೆಯ ಸರ್ಕಾರಿ ಜಾಗದ ಮೇಲಿನ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಸಾರ್ವಜನಿಕರ ಹಿತದೃಷ್ಠಿಯಿಂದ ಸಂರಕ್ಷಿಸುವಂತಾಗ ಬೇಕೆಂದು ಆಗ್ರಹ ಪಡೆಸಿದರು


ಈ ಸಂಬಂಧವಾಗಿ ಕೆ.ಆರ್.ಎಸ್. ಪಕ್ಷವು ಚೋಳಘಟ್ಟ ಗ್ರಾಮಾಸ್ಥರು ಸಂಘಟಿತರಾಗಿ ಜೂ ೧೧ರ ಗುರುವಾರ ಸಮಸ್ಯೆಗಳನ್ನು ಬಗೆಹರಿಸುವವರೆಗೆ ಅನಿರ್ದಿಷ್ಟಾವಧಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿದೆ ಸಮಸ್ಯೆ ಬಗೆಸದೆ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.


ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯದ ಸಂಘಟನಾ ಕಾರ್ಯದರ್ಶಿ ಮಹೇಶ್.ಎಂ.ವಿ. ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿದರು. ಪದಾಧಿಕಾರಿಗಳು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.