Home ಮುಖಪುಟ ಸುದ್ದಿ ೧೦೫ ಅಡಿಗೆ ತಲುಪಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

೧೦೫ ಅಡಿಗೆ ತಲುಪಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

ಮಂಡ್ಯ,ಆ.೫:ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು,ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದ್ದು, ಕಾವೇರಿ ಕೊಳ್ಳದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಡ್ಯಾಂಗಳಲ್ಲಿಯೂ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದೆ.


ಸದ್ಯ ಕಾವೇರಿ ಕೊಳ್ಳದ ಪ್ರಮುಖ ಡ್ಯಾಂ ಕೆಆರ್‌ಎಸ್‌ನಲ್ಲಿ ಇಂದಿನ ನೀರಿನ ಮಟ್ಟ ೧೦೫.೧೦ ಅಡಿಯಷ್ಟಿದೆ (ಗರಿಷ್ಠ ಮಟ್ಟ: ೧೨೪.೮೦ ಅಡಿ). ೪೯.೪೫೨ ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ ೨೭.೦೭೭ ಟಿಎಂಸಿ ನೀರು ಸಂಗ್ರಹವಿದ್ದು, ೧೯,೨೭೫ ಕ್ಯೂಸೆಕ್ ಒಳಹರಿವು ಮತ್ತು ೧,೯೮೫ ಕ್ಯೂಸೆಕ್ ಹೊರಹರಿವು ದಾಖಲಾಗಿದೆ.


ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ೮೧ ಅಡಿಗೆ ಕುಸಿದಿದ್ದಾಗ, ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ರೈತರಿಗೆ ಕಠಿಣ ಸೂಚನೆಯೊಂದನ್ನು ನೀಡಿತ್ತು. ಯಾವುದೇ ಹೊಸ ಬೆಳೆ ಬಿತ್ತನೆ ಮಾಡಬೇಡಿ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗಿದೆ ಎಂದು ರೈತರನ್ನು ಕೈ ಕಟ್ಟಿ ಹಾಕಿತ್ತು. ಆದರೆ ಈಗ ಜಲಾನಯನ ಪ್ರದೇಶ ಹಾಗೂ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಆರ್‌ಎಸ್ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರ ಪರಿಣಾಮ ಡ್ಯಾಂ ನೀರಿನ ಮಟ್ಟ ಭರಪೂರ ೧೦೫ ಅಡಿ ತಲುಪಿದೆ.


ಕಾವೇರಿ ಜಲಾನಯನ ಪ್ರದೇಶದಲ್ಲಿ ಸದ್ಯ ಮಳೆ ಚುರುಕುಗೊಂಡ ಬೆನ್ನಲ್ಲೇ, ಸಕ್ಕರೆ ನಾಡು ಮಂಡ್ಯದ ರೈತರ ಮೊಗದಲ್ಲಿ ಹೊಸ ಭರವಸೆ ಮೂಡಿದೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಈಗ ೧೦೫ ಅಡಿಗೆ ಏರಿಕೆಯಾಗಿದ್ದು, ಮುಂಗಾರು ಬೆಳೆಗೆ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕೆಂದು ಮಂಡ್ಯ ಜಿಲ್ಲೆಯ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.


ಡ್ಯಾಂನ ನೀರಿನ ಮಟ್ಟ ೧೦೫ ಅಡಿಗೆ ಏರಿಕೆಯಾಗುತ್ತಿದ್ದಂತೆ ಮಂಡ್ಯ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗೆ ಸಜ್ಜಾಗುತ್ತಿದ್ದಾರೆ. ಮುಂಗಾರು ಹಂಗಾಮಿನ ಹೊಸ ಬೆಳೆಗೆ ಕೂಡಲೇ ನಾಲೆಗಳಿಗೆ ನೀರು ಹರಿಸುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಬಿತ್ತನೆಗೆ ಇದು ಸೂಕ್ತ ಸಮಯವಾಗಿದ್ದು, ಸರ್ಕಾರ ತಡ ಮಾಡಿದರೆ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗುತ್ತದೆ ಎಂಬುದು ರೈತರ ಆತಂಕವಾಗಿದೆ.

ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ

ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೧೨೪.೮೦
ಇಂದಿನ ಮಟ್ಟ: ೧೦೨.೦೯
ಒಳಹರಿವು: ೩೨,೦೪೮
ಹೊರಹರಿವು: ೧,೮೨೧ ಕ್ಯೂಸೆಕ್

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೨,೮೫೯
ಇಂದಿನ ಮಟ್ಟ: ೨,೮೫೭.೦೧
ಒಳಹರಿವು: ೧೧,೬೪೫
ಹೊರಹರಿವು: ೧೦,೭೫೦ ಕ್ಯೂಸೆಕ್

ಕಬಿನಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೨,೨೮೪.೦೦
ಇಂದಿನ ಮಟ್ಟ: ೨೨೮೨.೫೯
ಒಳಹರಿವು: ೩೧,೭೪೬
ಹೊರಹರಿವು: ೨೭೦೦೦ ಕ್ಯೂಸೆಕ್

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೨,೯೨೨
ಇಂದಿನ ಮಟ್ಟ: ೨೯೧೧.೭೫
ಒಳಹರಿವು: ೧೨,೮೫೯
ಹೊರಹರಿವು: ೫೦೦ ಕ್ಯೂಸೆಕ್

ಲಿಂಗನಮಕ್ಕಿ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೧,೮೧೯
ಇಂದಿನ ಮಟ್ಟ: ೧,೭೮೪.೭೦
ಒಳಹರಿವು: ೫೯,೨೦೩
ಹೊರಹರಿವು: ೭೬೧ ಕ್ಯೂಸೆಕ್

ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): ೫೬೪
ಇಂದಿನ ಮಟ್ಟ: ೫೪೦.೩೦
ಒಳಹರಿವು: ೪೪,೦೬೨
ಹೊರಹರಿವು: ೦ ಕ್ಯೂಸೆಕ್

ಮಾಣಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೫೯೫
ಇಂದಿನ ಮಟ್ಟ: ೫೮೨.೭೮
ಒಳಹರಿವು: ೧೦,೦೦೩
ಹೊರಹರಿವು: ೦

ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೧,೬೩೩
ಇಂದಿನ ಮಟ್ಟ: ೧,೬೧೩.೧೬
ಒಳಹರಿವು: ೫೭,೭೮೫
ಹೊರಹರಿವು: ೧,೩೯೦

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೨,೦೭೯.೫೦
ಇಂದಿನ ಮಟ್ಟ: ೨,೦೬೦.೬೦
ಒಳಹರಿವು: ೧೧,೭೦೩
ಹೊರಹರಿವು: ೧,೧೯೪

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೨,೧೭೫
ಇಂದಿನ ಮಟ್ಟ: ೨,೧೫೮.೩೩
ಒಳಹರಿವು: ೨೦,೭೮೨
ಹೊರಹರಿವು: ೧,೭೬೫

ತುಂಗಾ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೫೮೮.೨೪
ಇಂದಿನ ಮಟ್ಟ: ೫೮೬.೮೩
ಒಳಹರಿವು: ೮೬,೧೨೩
ಹೊರಹರಿವು: ೮೯,೫೦೩

ಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): ೧೮೬
ಇಂದಿನ ಮಟ್ಟ: ೧೬೩.೬
ಒಳಹರಿವು: ೩೬,೧೦೩
ಹೊರಹರಿವು: ೧೮೯

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): ೫೧೯.೬೦
ಇಂದಿನ ಮಟ್ಟ: ೫೧೮.೯೪
ಒಳಹರಿವು: ೧,೨೫,೮೫೫
ಹೊರಹರಿವು: ೧,೫೦,೦೦೦

ನಾರಾಯಣಪುರ ಜಲಾಶಯ
ಗರಿಷ್ಠ ಮಟ್ಟ (ಮೀ. ಗಳಲ್ಲಿ): ೪೯೨.೨೫
ಇಂದಿನ ಮಟ್ಟ: ೪೯೧.೪೦
ಒಳಹರಿವು: ೧,೩೦,೦೦೦
ಹೊರಹರಿವು: ೧,೫೫,೧೪೪