
ಕಲಬುರಗಿ, ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಇಂಜಿನಿಯರಿAಗ ನಿಕಾಯದ ೩ ವಾರದ ಇಂಡಕ್ಷಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಶುಕ್ರವಾರ ಜರುಗಿತು.
ಮುಖ್ಯ ಅತಿಥಿ ಇಂಜಿನಿಯರ ವಿಭಾಗದ ಡೀನ ಡಾ ಸುಭಾಸ ಕಮಲ ಇವರು, ಮಾತನಾಡುತ್ತ ಇಂಜಿನಿಯರನಲ್ಲಿ ಎಲ್ಲ ಬ್ರಾಂಚಗಳನ್ನು ನಾನು ಪರಿಶೀಲಿಸಿದ್ದು, ಈ ಬಾರಿ ಹೊಸ ಪಠ್ಯಕ್ರಮಗಳನ್ನು ಪರಿಚಯಿಸಿಲಾಗಿದೆ. ಡಿಸ್ಟಿಂಕ್ಷನ ಮಾಡುವುದರ ಬಗ್ಗೆ ಗುರಿಯನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕು, ಬ್ಯಾಕ ಲಾಗಗಳು ಬೇಡ. ೮ ಸಿಜಿಪಿ ಇರಬೇಕು. ಕ್ಲಾಸ್ ಮಿಸ್ ಮಾಡುವುದು ಸಲ್ಲದು ಇಲ್ಲಿ ಶೇ. ೮೦% ಹಾಜರಾತಿ ಕಡ್ಡಾಯಾ ವಾಗಿರುತ್ತದೆ.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಅಸಿಸ್ಟೆಂಟ್ ಡೀನ ಡಾ ಮಾರುಫ ಅವರು, ಮಾತನಾಡಿ ವಿದ್ಯಾರ್ಥಿಗಳಿಗೆ ಶಿಸ್ತು ಬದ್ಧ ಕಲಿಕೆಯ ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಉಪನ್ಯಸಕರನ್ನು ಗೌರವಿಸಬೇಕು. ಕಲಿಕೆ ನಿರಂತರವಾದುದು, ನಿಮ್ಮ ಬ್ರಾಂಚನ್ ಕೌಶಲ್ಯಗಳನ್ನು ಕಲಿಯಿರಿ. ಸಂಶೋಧನಾ ಮನೋಭಾವ ಅತ್ಯಗತ್ಯ ಎಂದರು.
ಕ್ಯಾಂಪಸ್ ಡೀನ ಡಾ. ಕಮಾಲ ಆಜಮ ಮಾತನಾಡುತ್ತ ಈ ವಿವಿಯಲ್ಲಿ ಒಳ್ಳೆಯ ವಿದ್ಯಾಭ್ಯಾಸ ನೀಡಲಾಗುತ್ತಿದ್ದು, ಡಿಗ್ರಿಯ ನಂತರ ತಾವು ಎಲ್ಲೂ ಕೆಲಸ ಮಾಡಲು ಸಿದ್ಧಾರಗುತ್ತಿರಿ. ದೇಶಕ್ಕಾಗಿ ಸಲ ಕ್ರಿಯವಾಗಿ ಭಾಗವಹಿಸಿ ಎಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಬಂಧ ಮತ್ತು ಅಡುಗೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಮದೀಹಾ, ಜೂಬೈರ್ ಅಹ್ಮದ, ಸುಮಯ್ಯ, ಮೋಹಿನುದ್ದಿನ್ ಖಾನ ತಮ್ಮ ಅನುಭವ ಹಂಚಿಕೊAಡರು. ಸಂಯೋಜಕರಾದ ಡಾ ಶ್ರೀನಿವಾಸ ೩ ವಾರಗಳ ದಿನಗಳ ವರದಿ ವಾಚಿಸಿದರು. ಮೊಹಮ್ಮದ್ ರಾಜಾ ಪಟೀಲ್ ಕಿರಾತ ಪಠಿಸಿದರು. ಡಾ ಮಲ್ಲನಗೌಡ ಸ್ವಾಗತಿಸಿದರು. ಡಾ ನಸ್ರಿನ ಅವರು ವಂದಿಸಿದರು.






























