
ಬೀದರ:ಜೂ.೨: ಕನ್ನಡದ ಕಾರ್ಯಕ್ರಮಗಳು ಪದವಿ ಕಾಲೇಜುಗಳಲ್ಲಿ ನೋಡಿದ್ದೇನೆ. ಪಿ.ಜಿ ಕಾಲೇಜುಗಳಲ್ಲಿ ನೋಡಿದ್ದೇನೆ. ಆದರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಾನು ಪ್ರಥಮ ಬಾರಿಗೆ ಕನ್ನಡದ ಸಂಘದ ಮೂಲಕ ಕಲಾ ತರಂಗ ಕಾರ್ಯಕ್ರಮ ಆಯೋಜಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತಹ ಕಾರ್ಯಾ ತುಂಬಾ ಶ್ಲಾಘನೀಯವಾಗಿದೆ ಎಂದು ಹಿರಿಯ ಸಾಹಿತಿ ಭಾರತಿ ವಸ್ತçದ್ ನುಡಿದರು.
ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೀದರ, ಬ್ರಿಮ್ಸ್ ಕನ್ನಡ ಸಂಘ ಬೀದರ-೨೦೨೪ರ ‘ಸಂಯುಕ್ತನ್ಸ್’ ವೈದ್ಯಕೀಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಕಲಾ ತರಂಗ ೨೦೨೬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಎಂಬುದು ನಮ್ಮ ಅನ್ನದ ಭಾಷೆಯಾಗಿದೆ. ಹೃದಯದ ಕಲರವವಾಗಿದೆ. ಕನ್ನಡವನ್ನು ಕೊರಳ ಬಾಷೆಯಾಗಿ ನೋಡದೆ ಕರುಳ ಭಾಷೆಯಾಗಿ ನೋಡಿದಾಗ ಮಾತ್ರ ಮಾತೃಭಾಷೆ ಉಳಿಸಲು ಸಾಧ್ಯವಾಗಿದೆ. ಹೊರಗಿನಿಂದ ಬಂದ ವಿದ್ಯಾರ್ಥಿಗಳ ಮೇಲೂ ಕನ್ನಡದ ಪ್ರಭಾವ ಬೀರಲು ಇಂತಹ ಕಲಾತರಂಗ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಸಾಹಿತ್ಯ ಸಂಸ್ಕೃತಿ ಚಿಂತಕ ಹಾಗೂ ಬೀದರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರಮೇಶ್ ಕುಲಕರ್ಣಿ ಮಾತನಾಡಿ ಕನ್ನಡ ನಾಡು ನುಡಿ ಸ್ವಚ್ಛಂದವಾಗಿದೆ. ನಾವು ಯಾವುದೇ ಭಾಷೆ ಮೂಲಕ ಶಿಕ್ಷಣ ಪಡೆದರೂ ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಅಭಿಮಾನ ಹೊಂದಿರಬೇಕು. ಕನ್ನಡವೇ ನಮ್ಮ ಉಸಿರಾಗಬೇಕು. ಹಸಿರಾಗಬೇಕು. ಜೀವನದ ಭಾಗವಾಗಬೇಕೆಂದು ತಿಳಿಸಿದರು.
ಬ್ರಿಮ್ಸ್ ಕನ್ನಡ ಸಂಘ ಸಂಯೋಜಕ ಡಾ .ರಾಜಕುಮಾರ್ ಹೆಬ್ಬಾಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬ್ರಿಮ್ಸ್ ಕನ್ನಡ ಸಂಘವೊAದನ್ನು ಕಟ್ಟಿಕೊಂಡು ನಿರಂತರವಾಗಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಹಿಂದಿನಿAದಲೂ ಎಲ್ಲಾ ನಿರ್ದೇಶಕರು, ಜಿಲ್ಲಾ ಶಸ್ತçಚಿಕಿತ್ಸಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದಾರೆ. ಮುಂದೆಯೂ ಗಡಿಭಾಗದ ಬ್ರಿಮ್ಸ್ ಕಾಲೇಜಿನಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸಲಾಗುವುದು ಎಂದರು.
ವೇದಿಕೆ ಮೇಲೆ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಗುರುದೇವ್, ಬ್ರಿಮ್ಸ್ ನಿರ್ದೇಶಕರಾದ ಡಾ. ಶಾಂತಲಾ ಕೌಜಲಗಿ ಡಾ. ಉಮಾ ದೇಶಮುಖ, ಡಾ ಪಲ್ಲವಿ ಕೇಸರಿ, ಡಾ. ವೃಷ್ಯಾಲಿ ಅಕಾಡೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಲಾವಿದೆ ಕು. ಶಿವಾನಿ ಶಿವದಾಸ ಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಸುಮಾರು ೧೫ ದಿವಸಗಳ ಕಾಲ ಕ್ರೀಡೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತದನಂತರ ವೈದ್ಯಕೀಯ ವಿದ್ಯಾರ್ಥಿಗಳ ತಂಡದವರು ಅದ್ಭುತವಾಗಿ ನಾಡು ನುಡಿ ಕುರಿತು ಕಲಾತರಂಗ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಬ್ರಿಮ್ಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.






























