
ಬಾಗಲಕೋಟೆ: ಕಲಾದಗಿ ಪೆÇಲೀಸ್ ಠಾಣೆ ವ್ಯಾಪ್ತಿಯ ಸಿಮಿಕೇರಿ ಬೈಪಾಸ್ ಸಮೀಪದ ಮೌನೇಶ್ವರ ಜ್ಯುವೆಲ್ಲರಿ ಶಾಪ್‍ನಲ್ಲಿ ನಡೆದ ಕಳ್ಳತನ ಸೇರಿದಂತೆ ಮೋಟಾರ್ ಸೈಕಲ್ ಹಾಗೂ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಕಲಾದಗಿ ಪೆÇಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ?4.80 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜೂ.29, 2026ರ ಮಧ್ಯರಾತ್ರಿ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಈ ಕುರಿತು ಕಲಾದಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಾಗಲಕೋಟೆ ಜಿಲ್ಲಾ ಪೆÇಲೀಸ್ ಅಧೀಕ್ಷಕ ಸಿದ್ದಾರ್ಥ ಗೋಯಲ್-ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಜಗದೀಶ್ ಎಂ., ಬಾಗಲಕೋಟೆ ಉಪವಿಭಾಗದ ಡಿಎಸ್‍ಪಿ ಗಜಾನನ ಸುತಾರ ಹಾಗೂ ಬಾಗಲಕೋಟೆ ಗ್ರಾಮೀಣ ವೃತ್ತದ ಸಿಪಿಐ ಆರ್.ಎಸ್. ಬಿರಾದಾರ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಯಿತು.
ಕಲಾದಗಿ ಪೆÇಲೀಸ್ ಠಾಣೆಯ ಪಿಎಸ್‍ಐ ಪ್ರವೀಣ ಬೀಳಗಿ ಹಾಗೂ ಸಿಬ್ಬಂದಿ ತಂಡ ತಾಂತ್ರಿಕ ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಹುಮಾಯೂನ್ ತಂದೆ ಅಕ್ಷರ ಜಿರಾತಿ, ಸಾ. ಕಲಾದಗಿ ಹಾಗೂ ಸೋಯಲ್ ತಂದೆ ನೂರ ಅಶ್ರಫ್ ಕಿರಸೂರ, ಸಾ. ಬಾಗಲಕೋಟೆ ರೈಲ್ವೆ ನಿಲ್ದಾಣದ ಹತ್ತಿರ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಸ್ವಿಫ್ಟ್ ಡಿಸೈರ್ ಕಾರು, ಎರಡು ಮೋಟಾರ್ ಸೈಕಲ್‍ಗಳು ಹಾಗೂ ಐದು ಮೊಬೈಲ್‍ಗಳು ಸೇರಿದಂತೆ ಒಟ್ಟು ಅಂದಾಜು ?4.80 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಖಾಕಿ ತಂಡದ ಭರ್ಜರಿ ಕಾರ್ಯಾಚರಣೆ
ಪ್ರಕರಣದ ಪತ್ತೆ ಕಾರ್ಯದಲ್ಲಿ ಕಲಾದಗಿ ಪೆÇಲೀಸ್ ಠಾಣೆಯ ಪಿಎಸ್‍ಐ ಪ್ರವೀಣ ಬೀಳಗಿ ಅವರೊಂದಿಗೆ ಪಿ.ವೈ. ಭಜಂತ್ರಿ, ಗದ್ದೆಪ್ಪ ಎ.ಎಂ., ಸಿ.ಎಸ್. ತಳವಾರ, ಪ್ರದೀಪ್ ಪಾಟೀಲ, ರವಿ ಕ್ಯಾದಿಗೇರಿ, ಎಂ.ಜಿ. ಬಳಬಟ್ಟಿ, ಎಸ್.ಕೆ. ಕಪಲಿ, ಜೆ.ಆರ್. ಮುರನಾಳ, ಬಿ.ಸಿ. ರಾಕೋಡ ಸೇರಿದಂತೆ ಜಿಲ್ಲಾ ಗಣಕಯಂತ್ರ ವಿಭಾಗದ ಬಸವರಾಜ ಜಗಲಿ ಹಾಗೂ ಮಲ್ಲು ನಿಲ್ಲನ್ನವರ ಭಾಗವಹಿಸಿದ್ದರು.
ಪೆÇಲೀಸರ ಈ ಕಾರ್ಯಾಚರಣೆಯನ್ನು ಬಾಗಲಕೋಟೆ ಜಿಲ್ಲಾ ಪೆÇಲೀಸ್ ಅಧೀಕ್ಷಕರು ಶ್ಲಾಘಿಸಿದ್ದು, ತನಿಖಾ ತಂಡಕ್ಕೆ ಸೂಕ್ತ ನಗದು ಬಹುಮಾನ ಘೋಷಿಸಿದ್ದಾರೆ.































