
ಕಲಾದಗಿ: ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದ ಮೇಲೆ ಕಲಾದಗಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದು, ಅವರಿಂದ ಸುಮಾರು ?5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಗಲಕೋಟೆ-ಮುರುನಾಳ ಪುನರ್ವಸತಿ ಕೇಂದ್ರದ ಸುತ್ತಮುತ್ತ ಅನುಮಾನಾಸ್ಪದವಾಗಿ ಕೆಲವರು ತಿರುಗಾಡುತ್ತಿರುವ ಬಗ್ಗೆ ಪೆÇಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಕಲಾದಗಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ನವನಗರ ನಿವಾಸಿ ಕುಮಾರ ಶಿವಾಲೆ, ವಿಜಯಪುರ ನಿವಾಸಿ ಲಕ್ಷ್ಮೀಕಾಂತ ಕೊನಗುಂದ, ಹುನಗುಂದ ನಿವಾಸಿ ಪರಶುರಾಮ ಭಜಂತ್ರಿ, ಬಾಗಲಕೋಟೆಯ ನಿವಾಸಿ ಹಣಮಂತ ಗ್ವಾಡಿ, ಕಟ್ಟಿ ಗ್ರಾಮದ ಭೀಮಣ್ಣ ಚಲವಾದಿ ಹಾಗೂ ತೋಹಿದ್ ಎಂದು ಗುರುತಿಸಲಾಗಿದೆ.
ಆರೋಪಿತರು ಬಾಗಲಕೋಟೆ-ಮುರುನಾಳ ಸುತ್ತಮುತ್ತ ಕಾರು, ಬೈಕ್ ಹಾಗೂ ಆಟೋಗಳಲ್ಲಿ ಸಂಚರಿಸಿ ಜನರನ್ನು ಬೆದರಿಸಿ ದರೋಡೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಈ ಕುರಿತು ಕಲಾದಗಿ ಪೆÇಲೀಸ್ ಠಾಣೆಯಲ್ಲಿ ಕ್ರೈಂ ನಂ. 106/2025ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಎಂ. ಜಗದೀಶ್, ಬಾಗಲಕೋಟೆ ಉಪವಿಭಾಗದ ಡಿವೈಎಸ್ಪಿ ಗಜಾನನ ಸುತಾರ ಹಾಗೂ ಬಾಗಲಕೋಟೆ ಗ್ರಾಮೀಣ ವೃತ್ತದ ಸಿಪಿಐ ಆರ್.ಎಸ್. ಬಿರಾದಾರ ಅವರ ಮಾರ್ಗದರ್ಶನದಲ್ಲಿ, ಕಲಾದಗಿ ಠಾಣೆ ಸಬ್‍ಇನ್‍ಸ್ಪೆಕ್ಟರ್ ಪ್ರವೀಣ್ ಬಿಳಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ ಒಂದು ಮಾರುತಿ ಸ್ವಿಫ್ಟ್ ಕಾರು, ಒಂದು ಬೈಕ್, ಆರು ಮೊಬೈಲ್‍ಗಳು, ಕಬ್ಬಿಣದ ರಾಡ್‍ಗಳು, ಖಾರದ ಪುಡಿ ಸೇರಿದಂತೆ ಸುಮಾರು ?5 ಲಕ್ಷ ಮೌಲ್ಯದ ವಸ್ತುಗಳನ್ನು ಪೆÇಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೆÇಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಸಿಬ್ಬಂದಿಯವರಾದ ಪಿ.ವೈ.ಭಜಂತ್ರಿ, ಎ.ಎಂ.ಗದ್ದೆಪ್ಪ, ಪ್ರದೀಪ್ ಪಾಟೀಲ, ಎಎಸ್‍ಐ ಎಂ.ಜಿ.ಬಳಮಟ್ಟಿ, ಜೆ.ಆರ್.ಮುರನಾಳ, ಬಿ.ಸಿ.ರಾಠೋಡ್, ಎನ್.ಟಿ.ದಾಶ್ಯಾಳ, ರವಿ ಕ್ಯಾದಿಗೇರಿ ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಮಲ್ಲು ನೀಲನ್ನವರ ಇದ್ದರು






























