Home ಜಿಲ್ಲೆ ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಕಲಬುರ್ಗಿ ಅವರ ಕೊಡುಗೆ ಅಪಾರ

ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಕಲಬುರ್ಗಿ ಅವರ ಕೊಡುಗೆ ಅಪಾರ

ಧಾರವಾಡ,ಆ೩೧: ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ವಿಶಿಷ್ಟ ಮಾರ್ಗದರ್ಶನ ನೀಡಿದ ಡಾ. ಎಂ. ಎಂ. ಕಲಬುರ್ಗಿ ಅವರ ಸಂಶೋಧನಾ ದೃಷ್ಟಿ, ಕನ್ನಡಪರ ಚಿಂತನೆ ಹಾಗೂ ಜ್ಞಾನದ ಕಾಯಕ ಮುಂದಿನ ಪೀಳಿಗೆಗೆ ಸದಾ ದಾರಿದೀಪವಾಗಿರುತ್ತದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಆಲೂರ ಅವರು ಹೇಳಿದರು.

ಅವರು ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಡಾ. ಎಂ. ಎಂ. ಕಲಬುರ್ಗಿ ರಾಷ್ಟಿçÃಯ ಪ್ರತಿಷ್ಠಾನ (ರಿ), ಧಾರವಾಡ ವತಿಯಿಂದ ಆಯೋಜಿಸಿದ್ದ ಡಾ. ಎಂ. ಎಂ. ಕಲಬುರ್ಗಿ ಅವರ ೧೧ನೇ ಹುತಾತ್ಮ ದಿನಾಚರಣೆ ವಿಶೇಷ ಉಪನ್ಯಾಸ, ಗ್ರಂಥ ಬಿಡುಗಡೆ ಹಾಗೂ ಆನ್‌ಲೈನ್ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಲಬುರ್ಗಿ ಅವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ಅವರು ಸಂಶೋಧನೆಯ ಶಕ್ತಿಯಾಗಿದ್ದರು. ಕನ್ನಡದ ಸಾರಸ್ವತ ಲೋಕದಲ್ಲಿ ಮೂಲ ಮೇಧಾವಿಯಾಗಿ ಗುರುತಿಸಿಕೊಂಡ ಅವರು ವಚನ ಸಾಹಿತ್ಯ, ಶಾಸನಗಳು, ಹಸ್ತಪ್ರತಿಗಳು ಹಾಗೂ ಕನ್ನಡದ ವಿವಿಧ ಪರಂಪರೆಗಳ ಕುರಿತು ಆಳವಾದ ಸಂಶೋಧನೆ ನಡೆಸಿ ಮಹತ್ವದ ಕೊಡುಗೆ ನೀಡಿದ್ದಾರೆ.ಜ್ಞಾನ ಹೆಚ್ಚಿದಂತೆ ವಿನಯವೂ ಹೆಚ್ಚಬೇಕು ಎಂಬುದಕ್ಕೆ ಕಲಬುರ್ಗಿ ಅವರು ಉತ್ತಮ ಉದಾಹರಣೆಯಾಗಿದ್ದರು. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಅವುಗಳ ಅಧಿಕಾರವನ್ನು ಎಂದಿಗೂ ತಲೆಗೆ ಏರಿಸಿಕೊಳ್ಳಲಿಲ್ಲ. ತಮ್ಮ ಬಳಿಗೆ ಬರುವ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾಹಿತ್ಯಾಸಕ್ತರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಸರಳತೆ ಮತ್ತು ವಿನಯ ಅವರ ವ್ಯಕ್ತಿತ್ವದ ಪ್ರಮುಖ ಗುಣಗಳಾಗಿದ್ದವು ಎಂದು ಸ್ಮರಿಸಿದರು. ಆಕರಗಳ ಪ್ರಾಮಾಣಿಕತೆಗೆ ಆದ್ಯತೆ
ಸಂಶೋಧನೆಯಲ್ಲಿ ಆಕರಗಳ ಪ್ರಾಮಾಣಿಕತೆಗೆ ಕಲಬುರ್ಗಿ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಯಾವುದೇ ವಿಚಾರವನ್ನು ಹೇಳುವ ಮೊದಲು ಅದರ ಆಧಾರವೇನು ಎಂಬುದನ್ನು ಪರಿಶೀಲಿಸಬೇಕು ಎಂಬುದು ಅವರ ನಿಲುವಾಗಿತ್ತು. ವಚನದ ಮೂಲ, ಶಾಸನದ ಕಾಲ, ಸಾಹಿತ್ಯದ ಹಿನ್ನೆಲೆ ಹಾಗೂ ನಂತರದ ಸೇರ್ಪಡೆಗಳ ಸಾಧ್ಯತೆ ಸೇರಿದಂತೆ ಪ್ರತಿಯೊಂದು ವಿಚಾರವನ್ನೂ ಸೂಕ್ಷ÷್ಮವಾಗಿ ಪರಿಶೀಲಿಸುತ್ತಿದ್ದರು ಎಂದು ಹೇಳಿದರು.

ಸಂಶೋಧನೆ ಎನ್ನುವುದು ಕೇವಲ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವಲ್ಲ. ಅದು ಒಂದು ವಿಧಾನ, ಶಿಸ್ತು ಹಾಗೂ ನೈತಿಕತೆಯ ಆಧಾರದ ಮೇಲೆ ನಡೆಯಬೇಕಾದ ಪ್ರಕ್ರಿಯೆ ಎಂಬುದನ್ನು ಕಲಬುರ್ಗಿ ಅವರು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ .ಜ್ಞಾನ ಜನರ ಬದುಕಿನಲ್ಲಿ ಬೆಳಕಾಗಬೇಕು
ಜ್ಞಾನವು ಗ್ರಂಥಾಲಯದ ಕಪಾಟುಗಳಲ್ಲಿ ಮಾತ್ರ ಸೀಮಿತವಾಗಿರಬಾರದು. ಅದು ಜನರ ಬದುಕಿನಲ್ಲಿ ಬೆಳಕಾಗಬೇಕು ಎಂಬ ಚಿಂತನೆ ಕಲಬುರ್ಗಿ ಅವರದ್ದಾಗಿತ್ತು. ಹಸ್ತಪ್ರತಿಗಳು, ಶಾಸನಗಳು ಹಾಗೂ ಕನ್ನಡದ ಜೀವಂತ ಪರಂಪರೆಗಳನ್ನು ಜನರಿಗೆ ಪರಿಚಯಿಸುವ ಮೂಲಕ ಜ್ಞಾನ ಪ್ರಸಾರದ ಕಾರ್ಯಕ್ಕೆ ಅವರು ಮಹತ್ವ ನೀಡಿದರು.ಕಲಬುರ್ಗಿ ಅವರು ಬಸವಣ್ಣ ಮತ್ತು ಕನ್ನಡವನ್ನು ತಮ್ಮ ಬದುಕಿನ ಪ್ರಮುಖ ಆಶಯಗಳನ್ನಾಗಿ ಮಾಡಿಕೊಂಡಿದ್ದರು. ಕನ್ನಡದ ಸಂಶೋಧನೆ ಮತ್ತು ವಚನ ಸಾಹಿತ್ಯದ ಅಧ್ಯಯನಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರ ಕೃತಿಗಳು ಹಾಗೂ ಸಂಶೋಧನಾ ಚಿಂತನೆಗಳು ಇಂದಿಗೂ ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದರು.

ಡಾ. ಎಂ. ಎಂ. ಕಲಬುರ್ಗಿ ರಾಷ್ಟಿçÃಯ ಪ್ರತಿಷ್ಠಾನ ಅಧ್ಯಕ್ಷ ಡಾ. ವೀರಣ್ಣ ರಾಜೂರ ಅವರು ಮಾತನಾಡಿ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕöÈತಿ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಡಾ. ಎಂ.ಎA. ಕಲಬುರ್ಗಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ವೈಚಾರಿಕ ಚಿಂತನೆ ಹಾಗೂ ಸಂಶೋಧನಾ ದೃಷ್ಟಿಕೋನದ ಮೂಲಕ ಕನ್ನಡ ನಾಡಿನ ಜ್ಞಾನ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ ಅವರು, ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಅವರ ಚಿಂತನೆಗಳು ಹಾಗೂ ಸಂಶೋಧನಾ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಅವರ ವಿಚಾರಧಾರೆ ಮತ್ತು ಸಾಹಿತ್ಯಿಕ ಕೊಡುಗೆಗಳನ್ನು ಅಧ್ಯಯನ ಮಾಡುವ ಮೂಲಕ ಕನ್ನಡದ ಜ್ಞಾನ ಪರಂಪರೆಯನ್ನು ಮತ್ತಷ್ಟು ಸಮೃದ್ಧಗೊಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಎಂ. ಎಂ ಕಲಬುರ್ಗಿ ರಾಷ್ಟಿçÃಯ ಪ್ರತಿಷ್ಠಾನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಡಾ. ಎಂ. ಎಂ ಕಲಬುರ್ಗಿ ರಾಷ್ಟಿçÃಯ ಪ್ರತಿಷ್ಠಾನ ಸದಸ್ಯ ಹನುಮಾಕ್ಷಿ ಗೋಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಉಪನ್ಯಾಸಕ ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು. ಡಾ. ಎಂ. ಎಂ ಕಲಬುರ್ಗಿ ರಾಷ್ಟಿçÃಯ ಪ್ರತಿಷ್ಠಾನ ಸದಸ್ಯ ಪ್ರೊ. ಚಂದ್ರಶೇಖರ ವಸ್ತçದ ಅವರು ವಂದಿಸಿದರು.