Home ಜಿಲ್ಲೆ ಕಲಬುರಗಿ ಕಲಬುರಗಿ ಮಹಾನಗರ ಪಾಲಿಕೆ:ಮಹಾಪೌರರಾಗಿ ಶೈಕ್ ಅಜ್ಮಲ ಅಹ್ಮದ ಅಫ್ಜಲ್ ಗೋಲಾ,ಉಪ ಮೇಯರ್ ಫರ್ಹಾನಾಜ ಅಧಿಕಾರ ಸ್ವೀಕಾರ

ಕಲಬುರಗಿ ಮಹಾನಗರ ಪಾಲಿಕೆ:ಮಹಾಪೌರರಾಗಿ ಶೈಕ್ ಅಜ್ಮಲ ಅಹ್ಮದ ಅಫ್ಜಲ್ ಗೋಲಾ,ಉಪ ಮೇಯರ್ ಫರ್ಹಾನಾಜ ಅಧಿಕಾರ ಸ್ವೀಕಾರ

ಕಲಬುರಗಿ, ಸೆ.16: ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಗೆ ನೂತನ ಮಹಾಪೌರರಾಗಿ ಶೈಕ್ ಅಜ್ಮಲ ಅಹ್ಮದ ಅಫ್ಜಲ್ ಗೋಲಾ ಮತ್ತು ಉಪ ಮಹಾಪೌರರಾಗಿ ಫರ್ಹಾನಾಜ (ಫರ್ಹಾ ಖುಸ್ರೂ ಜಾಗಿರದಾರ) ಅವರು ಮಂಗಳವಾರ ಮಧ್ಯಾಹ್ನ ಪಾಲಿಕೆಯ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಮೇಯರ್ ಅವರು, ನಗರದಲ್ಲಿ ಎದುರಾಗಿರುವ ಕುಡಿಯುವ ನೀರು, ನಾಯಿಗಳ ಹಾವಳಿ ಹಾಗೂ ತ್ಯಾಜ್ಯ ನಿರ್ವಹಣೆ ಮುಂತಾದ ಜ್ವಲಂತ ಸಮಸ್ಯೆಗಳಿಗೆ ಆದ್ಯತೆಯ ಮೇಲೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ತಮ್ಮ ತಂದೆಯವರು 1991ರಲ್ಲಿ ಮೇಯರ್ ಆಗಿದ್ದು, ಸುಮಾರು 35 ವರ್ಷಗಳ ನಂತರ ತಮಗೂ ಅದೇ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ ಎಂದರು.

ನಗರದ ಸವಾರ್ಂಗೀಣ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ತಿಳಿಸಿದ ಅವರು, ಮಳೆನೀರು ಕೊಯ್ಲು, ಪ್ರತಿಯೊಂದು ಮನೆಗೂ ಸಸಿ ಅಭಿಯಾನ ಮತ್ತು ಪಾಲಿಕೆ ಆಡಳಿತವನ್ನು ಸುಗಮಗೊಳಿಸಲು ಕಂಟ್ರೋಲ್ ಕಮಾಂಡ್ ಸೆಂಟರ್ ಸ್ಥಾಪಿಸುವುದಾಗಿ ತಿಳಿಸಿದರು. ನಿಯಮಿತವಾಗಿ ಜನೋಪಯೋಗಿ ವಿಷಯಗಳಿಗμÉ್ಟೀ ಮೀಸಲಾದ ಸಾಮಾನ್ಯ ಸಭೆಗಳನ್ನು ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರೇμÉ್ಮ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕಿರಣ್ ದೇಶಮುಖ, ಕೆಪಿಸಿಸಿ ಸದಸ್ಯ ಫರಾಜ್ ಉಲ್ ಇಸ್ಲಾಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ಪಾಟೀಲ ದಣ್ಣೂರ
ಸೇರಿದಂತೆ ಹಲವರು ಉಪಸ್ಥಿತರಿದ್ದರು.