Home ಜಿಲ್ಲೆ ಕಲಬುರಗಿ ಮಳೆಗಾಗಿ ಕಣಮಸ ಗ್ರಾಮದಲ್ಲಿ ಸಂಭ್ರಮದ ಬುಟ್ಟಿ ಜಾತ್ರೆ: ಉತ್ತಮ ಮಳೆಯಾಗಲೆಂದು ರೈತರ ವಿಶೇಷ ಪ್ರಾರ್ಥನೆ

ಮಳೆಗಾಗಿ ಕಣಮಸ ಗ್ರಾಮದಲ್ಲಿ ಸಂಭ್ರಮದ ಬುಟ್ಟಿ ಜಾತ್ರೆ: ಉತ್ತಮ ಮಳೆಯಾಗಲೆಂದು ರೈತರ ವಿಶೇಷ ಪ್ರಾರ್ಥನೆ

ಕಲಬುರಗಿ : ಜಿಲ್ಲೆಯ ಆಳಂದ ತಾಲೂಕಿನ ಕಣಮಸ ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ಬೆಳೆ ಸಮೃದ್ಧಿಯಾಗಿ ಬೆಳೆಯಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಬುಟ್ಟಿ ಜಾತ್ರೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಜಾತ್ರೆಯ ಅಂಗವಾಗಿ ಗ್ರಾಮದ ಹಿರಿಯ ತಾಯಂದಿರು, ಮಹಿಳೆಯರು ಹಾಗೂ ಮಕ್ಕಳು ತಲೆಯ ಮೇಲೆ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಬುಟ್ಟಿಗಳಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಂಭ್ರಮದಿAದ ಪಾಲ್ಗೊಂಡರು. ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಉತ್ತಮ ಮಳೆ ಹಾಗೂ ರೈತರ ಬದುಕು ಹಸನಾಗಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಗ್ರಾಮದಲ್ಲಿ ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವ ಮೇಳೈಸಿದ ಈ ಜಾತ್ರೆ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಲ್ಲಮ್ಮ ಪಾಟೀಲ್, ನಾಗಮ್ಮ ಸ್ವಾಮಿ, ಮಹಾದೇವಿ, ಸಂಗೀತಾ, ಲಕ್ಷಿö್ಮÃ, ಜಗದೀಶ್ ಪಾಟೀಲ್, ಉಮಾಕಾಂತ ಪಾಟೀಲ್, ಅಂಬಾರಾವ್ ಮೆಂಡೆ, ಸುನಿಲ್ ಪಾಟೀಲ್, ಶಾಂತಪ್ಪ ಮೇಂತೆ, ವಿವೇಕಾನಂದ ಸ್ವಾಮಿ, ನಾಗೇಂದ್ರಪ್ಪ ಥಂಬೆ, ಬಬುರವಾಹನ್ ಕೋಲ್ಡೆ, ಶಣಪ್ಪ ಲೇಂಡೆ, ರೇವಣಸಿದ್ದಯ್ಯ ಸ್ವಾಮಿ, ಆಕಾಶ್ ಪಾಟೀಲ್, ಬಾಬುರಾವ್ ಎಕರಕಿ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.