
ಹುಮನಾಬಾದ್:ಜು.31: ಇಂದಿನ ಡಿಜಿಟಲ್ ಯುಗದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಡಾ. ಸಿದ್ದು ಪಾಟೀಲ ಹೇಳಿದರು.
ಪತ್ರಿಕಾ ದಿನಾಚರಣೆ ಪ್ರಯುಕ್ತ ಪಟ್ಟಣದ ಹೊರವಲಯದಲ್ಲಿರುವ ಶಾಸಕ ಡಾ. ಸಿದ್ದು ಪಾಟೀಲ್ ಅವರ ಖಾಸಗಿ ಗೇಸ್ಟಹೌಸದಲ್ಲಿ ಸಾಯಂಕಾಲ ಆಯೋಜಿಸಿದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು
ಓದುಗರಿಗೆ ಪತ್ರಿಕೆಗಳನ್ನು ಕಡಿಮೆ ಬೆಲೆಗೆ ನೀಡಲು ಪತ್ರಿಕೆಗಳು ತಮ್ಮ ಆರ್ಥಿಕ ನಿರ್ವಹಣೆಗಾಗಿ ಜಾಹೀರಾತುಗಳ ಮೇಲೆ ಅವಲಂಬಿತವಾಗಿವೆ. ಜೊತೆಗೆ ಸುಳ್ಳುಸುದ್ದಿಗಳ ನಡುವೆಯೂ ಮುದ್ರಿತ ಮಾಧ್ಯಮದಲ್ಲಿ ನಿಖರತೆ ಹಾಗೂ ನಂಬಿಕಾರ್ಹತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ದಿನಪತ್ರಿಕೆಗಳನ್ನು ಓದುವದರಿಂದ ದೇಶ, ವಿದೇಶ, ರಾಜ್ಯದಲ್ಲಿ ನಿತ್ಯ ನಡೆಯುತ್ತಿರುವ ವಿದ್ಯಮಾನಗಳನ್ನು ಅರಿತುಕೊಳ್ಳಲು. ಹಾಗೂ ನಮ್ಮ ಜ್ಞಾನ ವಿಸ್ತಾರವಾಗುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಕಾರಿಯಾಗಲಿದ್ದು, ಇಂದಿನ ಯುವಕರು ಮೊಬೈಲ್‍ಗಳಲ್ಲಿ ಕಾಲಾಹರಣ ಮಾಡುವ ಬದಲು ನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ ಮಾತನಾಡಿ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಕಂಬವಾಗಿದ್ದು, ಸಮಾಜದ ತಪ್ಪುಗಳನ್ನು ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ ನೈಜ ಸಂಗತಿಗಳನ್ನು. ಸರ್ಕಾರದ, ರಾಜಕೀಯ ತಪ್ಪುಗಳನ್ನು ಧೈರ್ಯವಾಗಿ ಪ್ರಶ್ನಿಸುವುದು.ತಿದ್ದುವ ದೊಡ್ಡ ಜವಾಬ್ದಾರಿಯೊಂದಿಗೆ ಜನರಿಗೆ ತಲುಪಿಸುವ ಜವಾಬ್ದಾರಿ ಅವುಗಳ ಮೇಲಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ. ದೇಶವು ಸರಿ ಹಾದಿಯಲ್ಲಿ ಸಾಗಲು ಪತ್ರಕರ್ತರ ಲೇಖನಿ ಸತ್ಯ, ನ್ಯಾಯ ಮತ್ತು ಜನಪರ ಕಾಳಜಿಯಿಂದ ಕೂಡಿರಬೇಕು. ಯಾವುದೇ ಪಕ್ಷಪಾತವಿಲ್ಲದೆ ನೈಜ ಸಂಗತಿಗಳೊಂದಿಗೆ ಜನಸಾಮಾನ್ಯರ ಧ್ವನಿಯಾಗಬೇಕು ಎಂದರು.
ಇದೆ ವೇಳೆ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಿದರು
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅನೀಲ ಪಸರ್ಗಿ, ಗೋಪಾಲಕೃಷ್ಣ ಮೊಹಳೆ , ವಿಶ್ವನಾಥ ಪಾಟೀಲ್ ಮಾಡಗೋಳ, ಗಜೇಂದ್ರ ಕನಕಟ್ಟಕರ, ಶೀವರಾಜ ಚೀನಕೇರಿ, ರವಿಕುಮಾರ ಹೊಸಳ್ಳಿ, ವಿನಾಯಕ ಮಂಕೊಜಿ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾ ಕಾರ್ಯಕಾರಣಿ ಸದಸ್ಯ ದೂರ್ಯೋಧನ ಹುಗಾರ, ಹುಮನಾಬಾದ ಅಧ್ಯಕ್ಷ ಸಂಜು ಜುನ್ನಾ, ಕಾರ್ಯದರ್ಶಿ ಗುಂಡಪ್ಪ ಅತಿವಾಳ, ಚಿಟ್ಟಗುಪ್ಪ ತಾಲೂಕ ಅಧ್ಯಕ್ಷ ಕೃಷ್ಣ ಪಂಚಾಳ, ಕಾರ್ಯದರ್ಶಿ ಮುಸ್ತಫಾ ಸೇರಿದಂತೆ ಅನೇಕರಿದ್ದರು.
ಪತ್ರಕರ್ತ ಸಂಘಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಧಿಯಿಂದ ಪತ್ರಿಕಾ ಭವನಕ್ಕೆ ಸಹಾಯ ಮಾಡುತ್ತೇನೆ ಎಂದು ಘೋಷಿಸಿದರು. ಇದರ ಜೊತೆಯಲ್ಲಿ ಪತ್ರಕರ್ತರು ಪತ್ರಿಕಾ ಭವನ ನಿರ್ಮಾಣಕ್ಕಾಗಿ ನಿವೇಶನ ಸ್ಥಳ ನೋಡಲು ಮುಂದಾಗಬೇಕು. ಪತ್ರಿಕಾ ದಿನಾಚರಣೆ ಯಾವಾಗ ಬರುತ್ತದೊ ಆವಾಗ ಮಾತ್ರ ತಮಗೆಲ್ಲ ಪತ್ರಿಕಾ ಭವನ ನೆನಪಿಗೆ ಬರುತ್ತದೆ ಎಂದು ನನಗೆ ತಿಳಿದಿದೆ. ಆದ್ದರಿಂದ ಪತ್ರಿಕೆಯ ಎಲ್ಲ ವರದಿಗಾರರು ಒಗ್ಗಟ್ಟಾಗಿ ಶ್ರಮಿಸಿದರೆ ನಾನು ಪುರಸಭೆ ಮುಖ್ಯಾಧಿಕಾರಿಗಳಿಗೆ ನಿವೇಶನದ ಸ್ಥಳ ಪರಿಶೀಲನದ ಬಗ್ಗೆ ಮಾತನಾಡಿ ತಿಳಿಸಿ ಆ ಒಂದು ಕೆಲಸ ಮಾಡೆಮಾಡುತ್ತೇನೆ
ಶಾಸಕ ಡಾ. ಸಿದ್ದು ಪಾಟೀಲ್ ಹುಮನಾಬಾದ






























